Home
ಮೊಬೈಲ್

ಸ್ಯಾಮ್ ಸಂಗ್ ಗೆ ಸೆಡ್ಡು ಹೊಡೆಯಲಿದೆಯೇ ಎಲ್ ಜಿ?

By Super
ಸ್ಯಾಮ್ ಸಂಗ್ ಗೆ ಸೆಡ್ಡು ಹೊಡೆಯಲಿದೆಯೇ ಎಲ್ ಜಿ?

ಸ್ಯಾಮ್ ಸಂಗ್, ಎಚ್ ಟಿಸಿ, ಎಲ್ ಜಿ, ನೋಕಿಯಾ ಮುಂತಾದ ಅಗ್ರಗಣ್ಯ ಮೊಬೈಲ್ ಕಂಪನಿಗಳು ದಿನೇ ದಿನೇ ಹೊಸ ವಿನೂತನ ಮೊಬೈಲ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇವೆ.

ಇದೀಗ ಎಲ್ ಜಿ ಮತ್ತು ಸ್ಯಾಮ್ ಸಂಗ್ ಕಂಪನಿಯ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಸ್ಪರ್ಧೆ ಎದುರಿಸಲು ಸಜ್ಜಾಗಿವೆ. ಎಲ್ ಜಿ ಕಂಪನಿ ಎಲ್ ಜಿ ಆಪ್ಟಿಮಸ್ ಬ್ಲ್ಯಾಕ್ ಎಂಬ ಮೊಬೈಲನ್ನು ಮತ್ತು ಸ್ಯಾಮ್ ಸಂಗ್ ಕಂಪನಿ ಸ್ಯಾಮ್ ಸಂಗ್ ರಿಪ್ಲೆನಿಶ್ ಎಂಬ ಮೊಬೈಲನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಎರಡೂ ಸ್ಮಾರ್ಟ್ ಫೋನ್ ಗಳು ಕ್ಯಾಂಡಿ ಬಾರ್ ವಿನ್ಯಾಸದಲ್ಲಿವೆ. ಈ ಎರಡರಲ್ಲೂ ಇರುವ ಕೆಲವು ಲಕ್ಷಣಗಳನ್ನು ತಿಳಿದುಕೊಂಡು ನಿಮ್ಮ ಅಭಿರುಚಿಗೆ ತಕ್ಕಂತಹ ಮೊಬೈಲನ್ನು ಆಯ್ಕೆ ಮಾಡಿಕೊಳ್ಳಬಹುದು.

ಎಲ್ ಜಿ ಆಪ್ಟಿಮಸ್ ಬ್ಲ್ಯಾಕ್ ಮತ್ತು ಸ್ಯಾಮ್ ಸಂಗ್ ರಿಪ್ಲೆನಿಶ್ ಎರಡೂ ಸ್ಮಾರ್ಟ್ ಫೋನ್ ಗಳೂ ಗೂಗಲ್ ಆಂಡ್ರಾಯ್ಡ್ v2.2 ಫ್ರೊಯೊ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿವೆ. ಎಲ್ ಜಿ ಆಪ್ಟಿಮಸ್ ನಲ್ಲಿ ಆಪ್ಟಿಮಸ್ 2.0 ಯೂಸರ್ ಇಂಟರ್ ಫೇಸ್ ಇದೆ. 512ಎಂಬಿ RAM ಜೊತೆ 1 GHz ಸಿಂಗಲ್ ಕೋರ್ ಪ್ರೊಸೆಸರ್ ನೊಂದಿಗೆ ಇದು ಕಾರ್ಯ ನಿರ್ವಹಿಸಲಿದೆ. ಸ್ಯಾಮ್ ಸಂಗ್ ರೆಪ್ಲನಿಶ್ ಕ್ವಾಲ್ಕಂ MSM77627-2 ಚಿಪ್ ಸೆಟ್ ನೊಂದಿಗೆ ಸಿಂಗಲ್ ಕೋರ್ 600 MHz ಪ್ರೊಸೆಸರ್ ಸಹಾಯದಿಂದ ಕಾರ್ಯ ನಿರ್ವಹಿಸುತ್ತದೆ

ಎಲ್ ಜಿ ಆಪ್ಟಿಮಸ್ ಬ್ಲ್ಯಾಕ್ ವಿಶೇಷತೆ:

* 122 x 64 x 9.2 ಎಂಎಂ ಸುತ್ತಳತೆ

* 109 ಗ್ರಾಂ ತೂಕ

* 4 ಇಂಚಿನ LCD ಮಲ್ಟಿ ಟಚ್ ಸ್ಕ್ರೀನ್ ಡಿಸ್ಪ್ಲೇ

* 480 x 800 ಪಿಕ್ಸಲ್ ಸ್ಕ್ರೀನ್ ರೆಸೊಲ್ಯೂಷನ್

* 1 ಜಿಬಿ ಆಂತರಿಕ ಮೆಮೊರಿ

* ಮೈಕ್ರೊ SD, ಮೈಕ್ರೊ SDHC ಸೌಲಭ್ಯ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* 5 ಮೆಗಾ ಪಿಕ್ಸಲ್ ಕ್ಯಾಮೆರಾ, LED ಫ್ಲಾಶ್ ಮತ್ತು ಆಟೊಫೋಕಸ್

* 2 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ

* HTML ಬ್ರೌಸರ್, ಫ್ಲಾಶ್ ಬೆಂಬಲಿತ

* ಸಾಮಾಜಿಕ ತಾಣಗಳ ಆಯ್ಕೆ

* ಬ್ಲೂಟೂಥ್, 802.11 b/g/n ವೈ-ಫೈ

* 3ಜಿ ಇಂಟರ್ನೆಟ್ ಬೆಂಬಲಿತ

* GPS, A-GPS ಸೌಲಭ್ಯ

* ಮೈಕ್ರೊ USB 2.0 ಪೋರ್ಟ್, HDMI

* ಅಕ್ಸೆಲೆರೊ ಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್

* 1500 mAh Li ಬ್ಯಾಟರಿ, 6 ಗಂಟೆ ಟಾಕ್ ಟೈಂ, 350 ಗಂಟೆ ಸ್ಟ್ಯಾಂಡ್ ಬೈ ಟೈಂ

ಸ್ಯಾಮ್ ಸಂಗ್ ರೆಪ್ಲನಿಶ್ ಮೊಬೈಲ್:

* 123 x 60 x 11 ಎಂಎಂ ಸುತ್ತಳತೆ

* 116 ಗ್ರಾಂ ತೂಕ

* 2.8 ಇಂಚಿನ TFT ಮಲ್ಟಿ ಟಚ್ ಸ್ಕ್ರೀನ್ ಡಿಸ್ಪ್ಲೇ

* 240 x 320 ಪಿಕ್ಸಲ್ ಸ್ಕ್ರೀನ್ ರೆಸೊಲ್ಯೂಷನ್

* 512 ಎಂಬಿ RAM ಮತ್ತು 512 ಎಂಬಿ ROM

* ಮೈಕ್ರೊ SD, ಮೈಕ್ರೊ SDHC ಮೆಮೊರಿ ಕಾರ್ಡ್ ಅವಕಾಶ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* 2 ಮೆಗಾ ಪಿಕ್ಸಲ್ ಕ್ಯಾಮೆರಾ

* WAP 2.0 ಬ್ರೌಸರ್, HTML, xHTML ಬೆಂಬಲಿತ

* GPS, A-GPS ಸೌಲಭ್ಯ

* ಮೈಕ್ರೊ USB 2.0 ಪೋರ್ಟ್

* v3.0 ಬ್ಲೂಟೂಥ್, ಲೈಟ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್

* 1600 mAh Li ion ಬ್ಯಾಟರಿ, 5.5 ಗಂಟೆ ಟಾಕ್ ಟೈಂ ಮತ್ತು 217 ಗಂಟೆ ಸ್ಟ್ಯಾಂಡ್ ಬೈ ಟೈಂ

ಈ ಲಕ್ಷಣಗಳನ್ನು ಪರಿಶೀಲಿಸಿದರೆ, ಎಲ್ ಜಿ ಆಪ್ಟಿಮಸ್ ಬ್ಲ್ಯಾಕ್ ಮೊಬೈಲ್ ಹೆಚ್ಚು ಆಯ್ಕೆಗಳನ್ನು ನಿಮಗೆ ನೀಡುತ್ತದೆ. ಸ್ಯಾಮ್ ಸಂಗ್ ರಿಪ್ಲೆನಿಶ್ ಮೊಬೈಲ್ ಬೆಲೆ 10,000 ರು ಎಂದು ಅಂದಾಜಿಸಲಾಗಿದ್ದು, ಎಲ್ ಜಿ ಆಪ್ಟಿಮಸ್ ಬ್ಲ್ಯಾಕ್ ಮೊಬೈಲ್ 20,000 ರು ಎಂದು ತಿಳಿದುಬಂದಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+