ಹಬ್ ಬೇಕಾ? ವಿವಿದ್ ಬೇಕಾ? ಆಯ್ಕೆ ನಿಮ್ಮದು

ಎಲ್ ಜಿ ಆಪ್ಟಿಮಸ್ ಹಬ್ ಮತ್ತು ಎಚ್ ಟಿಸಿ ವಿವಿದ್ ಎಂಬ ಎರಡು ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ದೊಂಬಿ ಎಬ್ಬಿಸಲಿವೆ. ಎರಡೂ ಮೊಬೈಲ್ ಗಳು ಕ್ಯಾಂಡಿ ಬಾರ್ ವಿನ್ಯಾಸದಲ್ಲಿದ್ದು, ಟಚ್ ಸ್ಕ್ರೀನ್ ಸೌಲಭ್ಯವನ್ನು ಹೊಂದಿದೆ.
ವಿವಿದ್ ಮೊಬೈಲ್ ಕಪ್ಪು ಮತ್ತು ಬಿಳುಪು ಬಣ್ಣಗಳಲ್ಲಿ ಲಭ್ಯವಿದ್ದರೆ ಹಬ್ ಕಪ್ಪು ಬಣ್ಣದಲ್ಲಿ ನಿಮಗೆ ಸಿಗಲಿದೆ. ಹಬ್ ಮತ್ತು ವಿವಿದ್ ಎರಡೂ ಕೂಡ 2.3 ಜಿಂಜರ್ ಬ್ರೆಡ್ ಆಯಾಮದ ಆಪರೇಟಿಂಗ್ ಸಿಸ್ಟಮ್ ಹೊಂದಿದೆ.
ಎಲ್ ಜಿ ಆಪ್ಟಿಮಸ್ ಮೊಬೈಲ್ ಸಿಂಗಲ್ ಕೋರ್ 800MHz ARM V6 ಪ್ರೊಸೆಸರ್ ಮತ್ತು Adreno 200 ಗ್ರಾಫಿಕ್ ಪ್ರೊಸೆಸಿಂಗ್ ಯೂನಿಟ್ ಹೊಂದಿದ್ದರೆ ಎಚ್ ಟಿಸಿ ವಿವಿದ್ ಮೊಬೈಲ್ 1200Hz ಡ್ಯೂಯಲ್ ಕೋರ್ Qualcomm APQ 8060 ಪ್ರೊಸೆಸರ್ ಪಡೆದುಕೊಂಡಿದೆ.
ಎಲ್ ಜಿ ಆಪ್ಟಿಮಸ್ ಹಬ್ ವಿಶೇಷತೆ:
* 113.4 ಎಂಎಂ x 60.8 ಎಂಎಂ x 11.4 ಎಂಎಂ ಸುತ್ತಳತೆ
* 123 ಗ್ರಾಂ ತೂಕ
* 3.5 ಇಂಚಿನ ಡಿಸ್ಪ್ಲೇ, 320 x 480 ಪಿಕ್ಸಲ್, ಮಲ್ಟಿ ಟಚ್ ಸೌಲಭ್ಯ
* 5 ಮೆಗಾ ಪಿಕ್ಸಲ್ ಕ್ಯಾಮೆರಾ, ಆಡಿಯೋ ಫೋಕಸ್
* ಫೇಸ್ ಡಿಟೆಕ್ಷನ್ ಮತ್ತು ಜಿಯೋ ಟ್ಯಾಗಿಂಗ್
* 150 ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯ
HTC ವಿವಿದ್ ಮೊಬೈಲ್ ವಿಶೇಷತೆ:
* 129 ಎಂಎಂ x 67 ಎಂಎಂ x 11 ಎಂಎಂ ಸುತ್ತಳತೆ
* 177 ಗ್ರಾಂ ತೂಕ
* 4.5 ಇಂಚಿನ ಡಿಸ್ಪ್ಲೇ , 540 x 960 ಪಿಕ್ಸಲ್, ಮಲ್ಟಿ ಟಚ್ ಸೌಲಭ್ಯ
* 8 ಮೆಗಾ ಪಿಕ್ಸಲ್ ಕ್ಯಾಮೆರಾ, 3264 x 2448 ಪಿಕ್ಸಲ್ ರೆಸೊಲ್ಯೂಷನ್
* 1.3 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ
* ಆಟೊ ಫೋಕಸ್, ಡ್ಯೂಯಲ್ LED ಫ್ಲಾಶ್
* ಫೇಸ್ ಡಿಟೆಕ್ಷನ್ ಮತ್ತು ಜಿಯೋ ಟ್ಯಾಗಿಂಗ್
* 16000ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯ
ಎರಡೂ ಮೊಬೈಲ್ ಗಳಲ್ಲಿ ಮೈಕ್ರೊ SD ಕಾರ್ಡ್ ಮತ್ತು ಮೈಕ್ರೊ SDHC ಮೂಲಕ 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶವಿದೆ. ಎರಡೂ ಮೊಬೈಲ್ ಗಳು ಜಾವಾ ಮತ್ತು HTML ವೆಬ್ ಬ್ರೌಸರ್ ಹೊಂದಿದೆ.
ಹಬ್ ಗೆ ಹೋಲಿಸಿದರೆ ವಿವಿದ್ ಮೊಬೈಲ್ ಕ್ಯಾಮೆರಾದಲ್ಲಿ ಸ್ವಲ್ಪ ಹೆಚ್ಚು ವಿಶೇಷತೆಯಿದೆ ಎಂದೇ ಹೇಳಬಹುದು. ಎಚ್ ಟಿಸಿ ವಿವಿದ್ ಮೊಬೈಲ್ ನ ಕ್ಯಾಮೆರಾದಲ್ಲಿ 30 fps ವೇಗದ 1080 p ರೆಸೊಲ್ಯೂಷನ್ ವಿಡಿಯೋ ರೆಕಾರ್ಡಿಂಗ್ ಸಹಾಯವಾಗಲಿದೆ. 60fps ವೇಗದ 720p ವಿಡಿಯೋ ಸ್ಪಷ್ಟತೆ ಕೂಡ ಇದರಲ್ಲಿ ಸಾಧ್ಯವಿದೆ.
ಹಬ್ ಮೊಬೈಲ್ A 1500mAh ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದ್ದರೆ, ವಿವಿದ್ ಮೊಬೈಲ್ 1620mAh ಬ್ಯಾಟರಿ ಹೊಂದಿದೆ. ಇದು 293 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 4.60 ಗಂಟೆ ಟಾಕ್ ಟೈಂ ನೀಡುತ್ತದೆ ಎಂದು ತಿಳಿದುಬಂದಿದೆ.
ಎಲ್ ಜಿ ಆಪ್ಟಿಮಸ್ ಹಬ್ ಬೆಲೆ ಸುಮಾರು 13,000 ರು ಇದೆ. ಆದರೆ ಎಚ್ ಟಿಸಿ ವಿವಿದ್ ಬೆಲೆ ಇನ್ನೂ ತಿಳಿದುಬರಬೇಕಿದೆ.


Click it and Unblock the Notifications








