ಐಪೋನ್ X ಗಿಂತಲೂ ದುಬಾರಿ LG ಸಿಗ್ನೇಚರ್ ಸ್ಮಾರ್ಟ್‌ಫೋನ್: ಯಾಕೆ ಗೊತ್ತಾ..?
ಅತೀ ದುಬಾರಿ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗುವ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸಿದ್ದ ಆಪಲ್ ಬಿಡುಗಡೆ ಮಾಡಿದ್ದ ಐಫೋನ್ X ಅನ್ನು ಮೀರಿಸುವ ಸ್ಮಾರ್ಟ್‌ಫೋನ್ ಅನ್ನು LG ಬಿಡುಗಡೆ ಮಾಡಲು ಮುಂದಾಗಿದೆ. ಅಲ್ಲದೇ ಹೊಸ ಸ್ಮಾರ್ಟ್‌ಫೋನ್ ಅನ್ನು ಐಫೋನ್ X ಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಿದೆ ಎನ್ನಲಾಗಿದೆ. ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ LG ಬಿಡುಗಡೆ ಮಾಡಲಿರುವ LG ಸಿಗ್ನೇಚರ್ ಕುರಿತು ಮಾತುಕತೆ ಶುರುವಾಗಿದೆ.

LG ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಮಾದರಿಯಲ್ಲಿ ಕಾಣಿಸಿಕೊಳ್ಳಲಿದ್ದು, ಇದರ ವಿಶೇಷತೆಗಳು ಟಾಪ್ ಎಂಡ್ ಆಗಿರಲಿದೆ. ಆಂಡ್ರಾಯ್ಡ್‌ನಲ್ಲಿಯೇ ಅತೀ ಹೆಚ್ಚಿನ ವಿಶೇಷತೆಗಳನ್ನು ಕಾಣಬಹುದಾಗಿದೆ. ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲು ದಕ್ಷಿಣ ಕೋರಿಯಾ ಮೂಲದ LG ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ ಎನ್ನಲಾಗಿದೆ.

ಐಫೋನ್ X ಗಿಂತಲೂ ದುಬಾರಿ:
ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಫೋನ್ ಎನ್ನುವ ಖ್ಯಾತಿಯನ್ನು ಐಪೋನ್ X ಪಡೆದುಕೊಂಡಿದೆ. ಸದ್ಯ LG ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ ದುಬಾರಿ ಬೆಲೆಗೆ. ಈ ಹಿಂದೆ ಐಫೋನ್ X ರೂ.1,02,425ಕ್ಕೆ ಮಾರಾಟವಾಗುತಿತ್ತು. ಈಗ LG ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನ್ ರೂ.1.22.820ಕ್ಕೆ ಲಾಂಚ್ ಆಗಲಿದೆ ಎನ್ನಲಾಗಿದೆ.

ದುಬಾರಿಗೆ ಕಾರಣ:
LG ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನ್ ಅನ್ನು ಪ್ರೀಮಿಯಮ್ ಮೆಟಿರಿಯಲ್ ಆಗಿರುವ ಜಿರ್ಕೋನಿಯಮ್ ಸೆರೆಮಿಕ್ ಬ್ಲಾಕ್ ನಿಂದ ಮಾಡಲಾಗಿದೆ. ಇದರಿಂದಾಗಿ ಸ್ಮಾರ್ಟ್‌ಫೋನಿಗೆ ಯಾವುದೇ ಮಾದರಿಯಲ್ಲಿ ಸ್ಕ್ರಾಚ್ ಆಗುವುದಿಲ್ಲ ಎನ್ನಲಾಗಿದೆ. ಅಲ್ಲದೇ ಸ್ಮಾರ್ಟ್‌ಫೋನಿನ ಮೇಲೆ ಬಳಕೆದಾರರು ಅವರ ಹೆಸರನ್ನು ಬರೆಸಿಕೊಳ್ಳಬಹುದಾಗಿದೆ.

ವೇಗದ ಪ್ರೋಸೆಸರ್ ಇದೆ:
LG ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನ್ ದುಬಾರಿಯಾಗಲು ಮತ್ತೊಂದು ಕಾರಣ ಎಂದರೆ ಇದರಲ್ಲಿ ಟಾಪ್ ಎಂಡ್ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದಲ್ಲದೇ ಆಡ್ರಿನೋ 630 GPUವನ್ನು ನೀಡಲಾಗಿದೆ. ಇದು ವೇಗದ ಗ್ರಾಫಿಕ್ಸ್ ಗಳಿಗೆ ಸಫೋರ್ಟ್ ಮಾಡಲಿದೆ.

6 ಇಂಚಿನ ಡಿಸ್‌ಪ್ಲೇ:
LG ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನಿನಲ್ಲಿ QHD+ ಗುಣಮಟ್ಟದ OLED ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಇದು 6 ಇಂಚಿನದಾಗಿದೆ. ಇದಲ್ಲದೇ ಇದು 18:9 ಅನುಪಾತದಿಂದ ಕೂಡಿದೆ. ಅಲ್ಲದೇ ಡಿಸ್‌ಪ್ಲೇ ಸ್ಕ್ರಾಚ್ ಆಗಬಾರದು ಎನ್ನುವ ಕಾರಣಕ್ಕೆ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯನ್ನು ನೀಡಲಾಗಿದೆ.

6GB RAM:
LG ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನ್ ವೇಗವಾಗಿ ಕಾರ್ಯನಿರ್ವಹಿಸುವ ಸಲುವಾಗಿ 6 GB RAM ಅನ್ನು ನೀಡಲಾಗಿದೆ. ಇದರೊಂದಗೆ 256 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಇದಲ್ಲದೇ ಬಳಕೆದಾರರು 2 TB ವರೆಗೆ ಮೆಮೊರಿ ಕಾರ್ಡ್ ಅನ್ನು ಹಾಕಿಕೊಳ್ಳುವ ಅವಕಾಶವನ್ನು ಈ ಸ್ಮಾರ್ಟ್‌ಫೋನಿನಲ್ಲಿ ಮಾಡಿಕೊಡಲಾಗಿದೆ.

ಡ್ಯುಯಲ್ ಕ್ಯಾಮೆರಾ:
LG ಸಿಗ್ನೇಚರ್ ಎಡಿಷನ್ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. 16 MP + 16 MP ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಉತ್ತಮ ಚಿತ್ರಗಳನ್ನು ಇದರಲ್ಲಿ ಸೆರೆಹಿಡಿಯಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ 8 MP ಸೆಲ್ಪೀ ಕ್ಯಾಮೆರಾವನ್ನು ಅಳವಡಿಸಲಾಗಿದೆ.


Click it and Unblock the Notifications








