4,000mAh ಬ್ಯಾಟರಿ ಸಾಮರ್ಥ್ಯದ LG X5 ಫೋನ್ ಮಾರುಕಟ್ಟೆಗೆ ಎಂಟ್ರಿ..!
ಎಲ್ ಜಿ ಕಂಪನಿಯ ಮತ್ತೊಂದು ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಅದುವೇ LG X5 (2018). ಸೌತ್ ಕೋರಿಯಾದಲ್ಲಿ ಇದು ಬಿಡುಗಡೆಗೊಂಡಿದೆ. ಇದು ಕಳೆದ ವರ್ಷ ಬಿಡುಗಡೆಗೊಂಡ LG X5 ನ ಅಪ್ ಗ್ರೇಡೆಡ್ ವರ್ಷನ್ ಆಗಿದೆ ಎಂದು ತಿಳಿಸಲಾಗಿದೆ. ಇಗು ಎಲ್ ಜಿ ಪೇ ಸಪೋರ್ಟ್ ಹೊಂದಿದ್ದು, ಭಾರತದಲ್ಲಿ ಇನ್ನಷ್ಟೇ ಬಿಡುಗಡೆಗೊಳ್ಳಬೇಕಾಗಿದೆ.
ಯಾರಿಗೆಲ್ಲ ಎಲ್ ಜಿ ಪೇ ಸಪೋರ್ಟ್ ಬಗ್ಗೆ ತಿಳಿದಿಲ್ಲವೋ ಅವರಿಗಾಗಿ ಹೇಳುತ್ತಿದ್ದೇವೆ, ಎಲ್ ಜಿ ಪೇ ಸಪೋರ್ಟ್ ಎಂದರೆ, ಸ್ಯಾಮ್ ಸಂಗ್ ಪೇ ಸಪೋರ್ಟ್ ನಂತೆಯೇ ನಿಮಗೆ ಡಿಜಿಟಲಿ ಯಾವುದೇ ಪೇಮೆಂಟ್ ಮಾಡಲು ಸಹಕರಿಸುವ ಪೇಮೆಂಟ್ ಮೋಡ್ ಆಗಿದೆ. ಸೌತ್ ಕೊರಿಯಾದಲ್ಲಿ LG X5 (2018) ನ ಬೆಲೆ KRW 363,000 ಆಗಿದೆ, ಭಾರತೀಯ ಮೌಲ್ಯಕ್ಕೆ ಕನ್ವರ್ಟ್ ಮಾಡಿದರೆ ಅದರ ಬೆಲೆ 22,356 ರುಪಾಯಿಗಳಾಗಿರಲಿದೆ. ಸದ್ಯಕ್ಕೆ ಭಾರತದಲ್ಲಿ ಯಾವಾಗ ಬಿಡುಗಡೆಗೊಳ್ಳಲಿದೆ ಎಂಬ ಬಗ್ಗೆ ಎಲ್ ಜಿ ಸಂಸ್ಥೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ.

LG X5 (2018) ವೈಶಿಷ್ಟ್ಯತೆಗಳು
LG X5 (2018) ವೈಶಿಷ್ಯ್ತೆಗಳಲ್ಲಿ 5.5-ಇಂಚಿನ720 ಪಿಕ್ಸಲ್ ಸಾಮರ್ಥ್ಯದ HD ಡಿಸ್ಪ್ಲೇ ಮತ್ತು ಇದು ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ.ಆಕ್ಟಾ-ಕೋರ್-ಮೀಡಿಯಾ ಟೆಕ್ MT6750 ಜೊತೆಗೆ 2ಜಿಬಿ RAM ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ ಮತ್ತು ಮೈಕ್ರೋ ಎಸ್ ಡಿ ಕಾರ್ಡ್ ಹಾಕುವುದಕ್ಕೂ ಅವಕಾಶವಿದೆ. LG X5 (2018) ನಿಮಗೆ 13MP ಹಿಂಭಾಗದ ಕ್ಯಾಮರಾ ಹೊಂದಿದ್ದು ಅದರಲ್ಲಿ LED ಫ್ಲ್ಯಾಶ್ ಇದೆ ಜೊತೆಗೆ 5MP ಮುಂಭಾಗದ ಕ್ಯಾಮರಾವು ಇದೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ 4G, ಬ್ಲೂಟೂತ್, ವೈ-ಫೈ, ಮತ್ತು ಮೂಮೂಲಿ ಕನೆಕ್ಟಿವಿಟಿಯ ಎಲ್ಲಾ ವೈಶಿಷ್ಟ್ಯತೆಗಳೂ ಇದರಲ್ಲಿದೆ. ಇದು 4,000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಕೂಡ ಇದೆ.
ಇತ್ತೀಚೆಗೆ ಎಲ್ ಜಿ ಸಂಸ್ಥೆಯು Q7 ಮತ್ತು Q7+ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿತ್ತು..ಅದರ ಅಂದರೆ Q7 ನ ಮಾರುಕಟ್ಟೆಯ ಬೆಲೆ ಸೌತ್ ಕೊರಿಯಾದಲ್ಲಿ KRW 495,000 ಅದನ್ನು ಭಾರತೀಯ ಕರೆನ್ಸಿ ಬದಲಾಯಿಸಿದರೆ ಅದರ ಮೌಲ್ಯ 30,878 ರುಪಾಯಿಗಳಾಗುತ್ತದೆ. ಇನ್ನೊಂದೆಡೆ, Q7+ ನ ಮಾರುಕಟ್ಟೆಯ ಬೆಲೆ ಸೌತ್ ಕೊರಿಯಾದಲ್ಲಿ KRW 570,000 ಅದನ್ನು ಭಾರತೀಯ ಕರೆನ್ಸಿ ಬದಲಾಯಿಸಿದರೆ ಅದರ ಮೌಲ್ಯ 35,557 ರುಪಾಯಿಗಳಾಗುತ್ತದೆ.ಈಗ ಬಿಡುಗಡೆಗೊಳಿಸಿರುವ ಮೊಬೈಲಿಗೆ ಹೋಲಿಸಿದರೆ ಇವೆರಡು ಭಾರೀ ಹಳತಾದವು ಎಂದು ಅನ್ನಿಸುತ್ತದೆ.
ಯಾಕೆಂದರೆ ಇದರಲ್ಲಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 450 ಪ್ರೊಸೆಸರ್ ಜೊತೆಗೆ Adreno 506 GPU ಸಾಮರ್ಥ್ಯವಿದೆ. 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಬಹುದಾದ ಸ್ಟೋರೇಜ್ ಸಾಮರ್ಥ್ಯವನ್ನು ಇವು ಹೊಂದಿದೆ. ಎಲ್ ಜಿ Q7 ನಲ್ಲಿ 3ಜಿಬಿ RAM ಜೊತೆಗೆ 32 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಎಲ್ ಜಿ Q7+ ನಲ್ಲಿ 4 ಜಿಬಿ RAM ಜೊತೆಗೆ 64 ಜಿಬಿ ಸ್ಟೋರೇಜ್ ಸಾಮರ್ಥ್ಯವಿದೆ. RAM ಮತ್ತು ಸ್ಟೋರೇಜ್ ಗೆ ಹೋಲಿಸಿದರೆ ಬೇರೆ ಎಲ್ಲಾ ವೈಶಿಷ್ಟ್ಯತೆಗಳೂ ಎರಡೂ ಸ್ಮಾರ್ಟ್ ಫೋನ್ ಗಳಲ್ಲೂ ಒಂದೇ ಆಗಿದೆ.


Click it and Unblock the Notifications








