Subscribe to Gizbot

ಸ್ಮಾರ್ಟ್‌ಫೋನ್ ಚಟವನ್ನು ಬಿಡಿಸುವ ಈ ಫೋನ್ ನಲ್ಲಿ ಏನು ಇಲ್ಲ..! ಆದರೆ ಎಲ್ಲಾ ಇದೆ...!

Written By:

ಇಂದು ಸ್ಮಾರ್ಟ್‌ಫೋನ್ ಚಟವು ಅಧಿಕವಾಗುತ್ತಿದೆ. ಶಾಲೆ, ಕಾಲೇಜು, ಕಛೇರಿ, ಹೋಟೆಲ್, ಕಾಫಿ ಶಾಪ್, ಅಡುಗೆ ಮನೆ, ಶೌಚಾಲಯದಲ್ಲಿ ಹೀಗೆ ಎಲ್ಲಾ ಕಡೆಗಳಲ್ಲಿಯೂ ಸ್ಮಾರ್ಟ್‌ಫೋನ್ ಬಳಕೆ ಮಾಡುವುದನ್ನು ನಾವು ನೋಡಬಹುದಾಗಿದೆ. ಈ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡಿಕೊಳ್ಳುವುದು ಚಟವಾಗಬಹುದು. ಇದನ್ನು ಕಡಿಮೆ ಮಾಡಲು ಮಾರುಕಟ್ಟೆಗೆ ಬಂದಿದೆ ಲೈಟ್ ಫೋನ್ 2. ಇದನ್ನು ನೀವು ಬೆಸಿಕ್ ಫೋನ್ ಎನ್ನಲು ಸಾಧ್ಯವಿಲ್ಲ.

ಸ್ಮಾರ್ಟ್‌ಫೋನ್ ಚಟವನ್ನು ಬಿಡಿಸುವ ಈ ಫೋನ್ ನಲ್ಲಿ ಏನು ಇಲ್ಲ..! ಆದರೆ ಎಲ್ಲಾ ಇದೆ.

ಮೊಬೈಲ್‌ನ ಅವಶ್ಯಕತೆಯನ್ನು ಮಾತ್ರವೇ ಪೂರೈಸುವ ಲೈಟ್ ಫೋನ್ 2, ನಿಮ್ಮ ಸ್ಮಾರ್ಟ್‌ಫೋನ್ ಚಟವನ್ನು ಕಡಿಮೆ ಮಾಡಲಿದೆ ಎನ್ನಲಾಗಿದೆ. ಇದು ಚಿಕ್ಕ ಗಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೆಲವು ಮಿನಿಮಮ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಬಿದ್ದರೆ ಒಡೆಯುವ ಯೋಚನೆ ಇಲ್ಲ. ಕಾರಣ ಈ ಫೋನಿನಲ್ಲಿ ಡಿಸ್‌ಪ್ಲೇ ಎನ್ನುವುದೇ ಇಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಟಿ ಸ್ಮಾರ್ಟ್‌ಫೋನ್:

ಆಂಟಿ ಸ್ಮಾರ್ಟ್‌ಫೋನ್:

ಲೈಟ್ ಫೋನ್ 2 ಆಂಟಿ ಸ್ಮಾರ್ಟ್‌ಫೋನ್ ಆಗಿದ್ದು, ಅತೀ ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆಯ ಚಟವನ್ನು ಹೆಚ್ಚಿಕೊಂಡವರಿಗಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಲಾಗದೆ. ಕೆಲವು ಸಂಶೋಧನೆಗಳ ಪ್ರಕಾರ ನಮ್ಮ ದಿನ ನಿತ್ಯದಲ್ಲಿ 2 ರಿಂದ 3 ಗಂಟೆಗಳ ಕಾಲ ನಾವು ಮೊಬೈಲ್ ಬಳಕೆಯಲ್ಲಿಯೇ ಕಳೆಯುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಇದು ಸಹಾಯಕಾರಿಯಾಗಲಿದೆ.

ಮ್ಯಾಟ್ ಫಿನಿಷ್ ಇ-ಲಿಂಕ್ ಡಿಸ್‌ಪ್ಲೇ:

ಮ್ಯಾಟ್ ಫಿನಿಷ್ ಇ-ಲಿಂಕ್ ಡಿಸ್‌ಪ್ಲೇ:

ಲೈಟ್ ಫೋನ್ 2 ನಲ್ಲಿ ನೀವು ಸಾಮಾನ್ಯ ಡಿಸ್‌ಪ್ಲೇಯನ್ನು ನೋಡಲು ಸಾಧ್ಯವಿಲ್ಲ ಇದರಲ್ಲಿ ಕಾಣಿಗೆ ಕಾಣದ ಡಿಸ್‌ಪ್ಲೇ ಇದು ಇದರಲ್ಲಿ ಅಕ್ಷರ ಮತ್ತು ಪದಗಳು ಮಾತ್ರವೇ ಮೂಡಲಿದೆ. ಇದನ್ನು ನೋಡಿದರೆ ನಿಮಗೆ ಫೋನ್ ಎನ್ನುವ ಅನುಭವವೇ ಬರುವುದಿಲ್ಲ ಎನ್ನಲಾಗಿದೆ. ಮ್ಯಾಟ್ ಫಿನಿಷಿಂಗ್ ಕಾಣಬಹುದಾಗಿದೆ.

ಟೆಕ್ಸ್ಟ್ ಮಾಡಬಹುದಾಗಿದೆ:

ಟೆಕ್ಸ್ಟ್ ಮಾಡಬಹುದಾಗಿದೆ:

ಇದಲ್ಲದೇ ನೀವು ಕೆಲವೇ ಆಯ್ಕೆಗಳನ್ನು ಹೊಂದಿರುವ ಟೆಕ್ಸ್ಟ್ ಮಾಡಬಹುದಾಗಿದೆ. ಆದರೆ ವಾಟ್ಸ್‌ಆಪ್ ಚಾಟ್ ಮಾದರಿಯಲ್ಲಿ ಅಲ್ಲ. ಬದಲಿಗೆ SMS ಕಳುಹಿಸುವ ಮಾದರಿಯಲ್ಲಿ.

ಕರೆಗಳನ್ನು ಮಾಡಬಹುದು:

ಕರೆಗಳನ್ನು ಮಾಡಬಹುದು:

ಲೈಟ್ ಫೋನ್ 2 ನಲ್ಲಿ ನೀವು ಸಾಮಾನ್ಯವಾಗಿ ಕರೆಗಳನ್ನು ಮಾಡುವುದು ಮತ್ತು ಸ್ವೀಕರಿಸಬಹುದಾಗಿದೆ. ಇದರಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅಲ್ಲದೇ ಡಯಲ್ ಮಾಡುವುದು ಸ್ಮಾರ್ಟ್‌ಫೋನ್ ಮಾದರಿಯಲ್ಲಿಯೇ ಇರಲಿದೆ.

ಕ್ಯಾಬ್ ಬುಕ್ ಮಾಡಬಹುದು:

ಕ್ಯಾಬ್ ಬುಕ್ ಮಾಡಬಹುದು:

ಇದಲ್ಲದೇ ನೀವು ಲೈಟ್ ಫೋನ್ 2 ನಲ್ಲಿ ಕ್ಯಾಬ್ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ ಆಪ್ ಗಳನ್ನು ಹಾಕಿಕೊಳ್ಳಬೇಕಾಗಿಲ್ಲ. ಅದು ಇನ್ ಬಿಲ್ಟ್ ಇರಲಿದೆ.

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಆಲಾರಂ

ಆಲಾರಂ

ಇದಲ್ಲದೇ ಲೈಟ್ ಫೋನ್ 2 ನಲ್ಲಿ ನೀವು ಆಲಾರಂ ಸೆಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದನ್ನು ಬಿಟ್ಟರೆ ಇನ್ಯಾವುದೇ ಆಯ್ಕೆಗಳನ್ನು ಇದರಲ್ಲಿ ಕಾಣಲು ಸಾಧ್ಯವಿಲ್ಲ.

4G ಸೇವೆ

4G ಸೇವೆ

ಲೈಟ್ ಫೋನ್ 2 4Gಯಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ 2G-3G ಕೇಳುವವರು ಇಲ್ಲದಂತಾಗಿದೆ. ಅದಕ್ಕಾಗಿ ಇದು 4G ಸಪೋರ್ಟ್ ಮಾಡಲಿದೆ.

ಬೆಲೆ:

ಬೆಲೆ:

ಆದರೆ ಈ ಲೈಟ್ ಫೋನ್ ಬೆಲೆ ಮಾತ್ರ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ಸಾಮಾನ್ಯ ಸ್ಮಾರ್ಟ್‌ಫೋನ್‌ಗಿಂತಲೂ ಹೆಚ್ಚಾಗಿದೆ. ರೂ.15000ದ ಅಸುಪಾಸಿನಲ್ಲಿ ದೊರೆಯಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Light Phone 2 keeps things basic. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot