108ಎಂಪಿ ಕ್ಯಾಮರಾ ಸೆನ್ಸರ್ ಇರುವ ಸ್ಮಾರ್ಟ್ ಫೋನ್ ಗಳು
ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಕೇವಲ ಸ್ಮಾರ್ಟ್ ಫೋನ್ ಗಳನ್ನು ಮಾತ್ರವೇ ತಯಾರಿಸುವುದಿಲ್ಲ ಬದಲಾಗಿ ಅದರ ಡಿವೈಸ್ ಗಳಿಗೆ ಬೇಕಾಗಿರುವ ಕ್ಯಾಮರಾ ಸೆನ್ಸರ್ ಗಳನ್ನು ಕೂಡ ತಯಾರಿಸುತ್ತದೆ.ಕಳೆದ ವರ್ಷ ಕಂಪೆನಿಯು 108ಎಂಪಿ ಕ್ಯಾಮರಾ ಸೆನ್ಸರ್ ನ್ನು ತನ್ನ ಸ್ಮಾರ್ಟ್ ಫೋನ್ ಗಳಿಗಾಗಿ ಬಿಡುಗಡೆಗೊಳಿಸಿತ್ತು. 108ಎಂಪಿ ISOCELL ಬ್ರೈಟ್ HMX ಸೆನ್ಸರ್ 100 ಮಿಲಿಯನ್ ಪಿಕ್ಸಲ್ ಗಳಿಗೂ ಮೀರಿದ್ದಾಗಿದೆ.

ಅತ್ಯಂತ ಕಡಿಮೆ ಬೆಳಕಿನಲ್ಲಿಯೂ ಕೂಡ 108ಎಂಪಿ ಕ್ಯಾಮರಾ ಸೆನ್ಸರ್ ಅತ್ಯುದ್ಭುತವಾಗಿ ಫೋಟೋ ಕ್ಲಿಕ್ಕಿಸುವ ಸಾಮರ್ಥ್ಯವನ್ನು ಹೊಂದಿದೆ. 1/1.33-ಇಂಚಿನ ದೊಡ್ಡ ಸ್ಕ್ರೀನ್ ನ ಕಾರಣದಿಂದಾಗಿ ಡಾರ್ಕ್ ಆಂಬಿಯೆಂಟ್ ಕಂಡೀಷನ್ನಿನಲ್ಲಿಯೂ ಕೂಡ ಹೆಚ್ಚು ಲೈಟ್ ನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಇದರಲ್ಲಿರುವ ಪಿಕ್ಸಲ್ ಮರ್ಜಿಂಗ್ ಟೆಟ್ರಾಸೆಲ್ ತಂತ್ರಜ್ಞಾನವು ಬಿಗ್ ಸಿಕ್ಸಲ್ ಸೆನ್ಸರ್ ಗಳನ್ನು ಇಮಿಟೇಟ್ ಮಾಡುವ ಸಾಮರ್ಥ್ಯ ಹೊಂದಿದ್ದು 27MP ಇಮೇಜ್ ಗಳನ್ನು ನೀಡುವ ಸಾಮರ್ಥ್ಯ ಹೊಂದಿದೆ. ಇದು ಹೋಲಿಕೆಯಲ್ಲಿ ಬಹಳ ದೊಡ್ಡದಾಗಿರುತ್ತದೆ. ಇದರಲ್ಲಿರುವ ಸ್ಮಾರ್ಟ್ISO ಬೆಳಕಿನ ಕಂಡೀಷನ್ನಿಗೆ ಹೊಂದಿಕೊಂಡಿರುವಂತೆ ಆಂಪ್ಲಿಫೈಯರ್ ಕಂಡೀಷನ್ ನ್ನಿನ ಮಟ್ಟವನ್ನು ಹೊಂದಿಕೊಳ್ಳುವಂತೆ ಮಾಡಬಹುದು.
108ಎಂಪಿ ಕ್ಯಾಮರಾ ಸೆನ್ಸರ್ ಇರುವ ಕೆಲವು ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಆಲ್ಟ್ರಾ 5ಜಿ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಆಲ್ಟ್ರಾ 5ಜಿ ಕ್ವಾಡ್ ಕ್ಯಾಮರಾ ಸೆಟ್ ಅಪ್ ಜೊತೆಗೆ ಪ್ರೈಮರಿ ಸೆನ್ಸರ್ ನಲ್ಲಿ 108ಎಂಪಿ ಸೆನ್ಸರ್ ನ್ನು ಇದು ಹೊಂದಿದೆ. ಈ ಸೆನ್ಸರ್ ಜೊತೆಗೆ OIS, PDAF, f/1.8 ಅಪರ್ಚರ್ ಮತ್ತು LED ಫ್ಲ್ಯಾಶ್ ವ್ಯವಸ್ಥೆ ಇದರಲ್ಲಿದೆ. ಕ್ಯಾಮರಾ ಡಿಪಾರ್ಟ್ಮೆಂಟ್ ನಲ್ಲಿ 48MPಟೆಲಿಫೋಟೋ ಲೆನ್ಸ್ ಮತ್ತು 12MP ಆಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ಡೆಪ್ತ್ ವಿಷನ್ ಕ್ಯಾಮರಾ ವ್ಯವಸ್ಥೆ ಇದರಲ್ಲಿದೆ.

ಶಿಯೋಮಿ ಎಂಐ 10 ಪ್ರೋ
ಶಿಯೋಮಿ ಎಂಐ 10 ಪ್ರೋ ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದ್ದು 108ಎಂಪಿ ಪ್ರೈಮರಿ ಸ್ಯಾಮ್ ಸಂಗ್ ಸೆನ್ಸರ್ f/1.33 ಅಪರ್ಚರ್ ಜೊತೆಗೆ OIS, f/1.69 ಅಪರ್ಚರ್ 8P ಲೆನ್ಸ್ ಮತ್ತು LED ಫ್ಲ್ಯಾಶ್ ವ್ಯವಸ್ಥೆ ಮತ್ತು 12MP ಸೆಕೆಂಡರಿ 2PD ಸೆನ್ಸರ್ ನ್ನು ಹೊಂದಿದೆ. 8MP ಟೆರ್ಟರಿ ಟೆಲಿಫೋಟೋ ಸೆನ್ಸರ್ ಮತ್ತು ಆಲ್ಟ್ರಾ ವೈಡ್ ಆಂಗಲ್ ಲೆನ್ಸ್ ನ್ನು ಇದು ಹೊಂದಿದೆ.

ಮೊಟೋರೊಲಾ ಎಡ್ಜ್+
ಮೊಟೋರೊಲಾ ಎಡ್ಜ್+ ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಹೊಂದಿರುವ ಫೋನ್ ಆಗಿದ್ದು ಹಿಂಭಾಗದಲ್ಲಿ 108MP ಪ್ರೈಮರಿ ಸ್ಯಾಮ್ ಸಂಗ್ ಕ್ಯಾಮರಾ ಸೆನ್ಸರ್ ಜೊತೆಗೆ OIS, f/1.8 ಅಪರ್ಚರ್, ಮತ್ತುಲೇಸರ್ ಆಟೋ ಫೋಕಸ್ 16MP 117-ಡಿಗ್ರಿ ಸೆಕೆಂಡರಿ ಆಲ್ಟ್ರಾ ವೈಡ್ ಆಂಗಲ್ ಲೆನ್ಸ್ ಜೊತೆಗೆ f/2.4 ಅಪರ್ಚರ್ ಮತ್ತು ಮ್ಯಾಕ್ರೋ ಮೋಡ್ ನ್ನು ಮತ್ತು 8MP ಟೆಲಿಫೋಟೋ ಲೆನ್ಸ್ ಜೊತೆಗೆ OIS, 3x ಆಪ್ಟಿಕಲ್ ಝೂಮ್ ಮತ್ತು 4K ವೀಡಿಯೋ ರೆಕಾರ್ಡಿಂಗ್ 60fps ನ್ನು ಹೊಂದಿದೆ. 25MP ಸೆಲ್ಫೀ ಕ್ಯಾಮರಾ ಸೆನ್ಸರ್ ನಲ್ಲಿ ಪಂಚ್ ಹೋಲ್ ಕಟ್ ಔಟ್ ಇದೆ.

ಎಂಐ ಮಿಕ್ಸ್ ಆಲ್ಫಾ 5ಜಿ
ಶಿಯೋಮಿ ಎಂಐ ಮಿಕ್ಸ್ ಆಲ್ಫಾವು ವ್ರ್ಯಾಪ್ ಅರೌಂಡ್ ಡಿಸ್ಪ್ಲೇ ಹೊಂದಿರುವ ಡಿವೈಸ್ ಆಗಿದ್ದು 108MP ಪ್ರೈಮರಿ ಕ್ಯಾಮರಾ ಸೆನ್ಸರ್ ನ್ನು ಹಿಂಭಾಗದಲ್ಲಿ ಹೊಂದಿದೆ. ಸ್ಯಾಮ್ ಸಂಗ್HMX ಸೆನ್ಸರ್ LED ಫ್ಲ್ಯಾಶ್, OIS,ಲೇಸರ್ ಆಟೋಫೋಕಸ್, PDAF, f/1.69 ಅಪರ್ಚರ್, ಮತ್ತು CAF ನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ನಲ್ಲಿ 12MP ಟೆಲಿಫೋಟೋ ಲೆನ್ಸ್ ಮತ್ತು 20MP ಆಲ್ಟ್ರಾ ವೈಡ್ ಆಂಗಲ್ ಲೆನ್ಸ್ ಗಳಿವೆ.

ಶಿಯೋಮಿ ಎಂಐ ಸಿಸಿ9 ಪ್ರೋ
ಶಿಯೋಮಿ ಎಂಐ ಸಿಸಿ9 ಪ್ರೋ ಪೆಂಟಾ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದ್ದು 108MP ಪ್ರೈಮರಿ ಸೆನ್ಸರ್ ಜೊತೆಗೆ f/1.69 ಅಪರ್ಚರ್, OIS ಇದ್ದು 27MP, 7P ಲೆನ್ಸ್ ಮತ್ತು LED ಫ್ಲ್ಯಾಶ್ ವ್ಯವಸ್ಥೆಯನ್ನು ಹೊಂದಿದೆ. 12MP ಟೆಲಿಫೋಟೋ ಲೆನ್ಸ್, 5MP ಟೆಲಿಫೋಟೋ ಲೆನ್ಸ್, 20MP ಆಲ್ಟ್ರಾ ವೈಡ್ ಆಂಗಲ್ ಲೆನ್ಸ್ ಗಳನ್ನು ಮತ್ತು 2MP ಮ್ಯಾಕ್ರೋ ಲೆನ್ಸ್ ಗಳನ್ನು ಹೊಂದಿದೆ.

ಶಿಯೋಮಿ ಎಂಐ 10
ಶಿಯೋಮಿ ಎಂಐ 10 ಕ್ವಾಡ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಹೊಂದಿದೆ. 108MP ಪ್ರೈಮರಿ ಸ್ಯಾಮ್ ಸಂಗ್ f/1.33 ಸೆನ್ಸರ್ ಜೊತೆಗೆ OIS, f/1.69 ಅಪರ್ಚರ್, 8P ಲೆನ್ಸ್ ಗಳು ಮತ್ತು LED ಫ್ಲ್ಯಾಶ್ ವ್ಯವಸ್ಥೆ ಇದೆ. 3MP ಸೆಕೆಂಡರಿ 123-ಡಿಗ್ರಿ ಆಲ್ಟ್ರಾ ವೈಡ್ ಆಂಗಲ್ ಲೆನ್ಸ್ ಗಳು 2MP ಟೆರಿಟರಿ ಡೆಪ್ತ್ ಸೆನ್ಸರ್ ಮತ್ತು 2MP ಮ್ಯಾಕ್ರೋ ಲೆನ್ಸ್ ಗಳನ್ನು ಹೊಂದಿದೆ. ಇದರಲ್ಲಿ 8ಕೆ ವೀಡಿಯೋಗಳನ್ನು ಶೂಟ್ ಮಾಡುವುದಕ್ಕೆ ಸಾಧ್ಯವಿದೆ.


Click it and Unblock the Notifications








