ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿವೆ ಈ ಸ್ಮಾರ್ಟ್‌ಫೋನ್‌ಗಳು...!
ಸ್ಮಾರ್ಟ್ ಫೋನ್ ಮಾರುಕಟ್ಟೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬದಲಾವಣೆಯನ್ನು ಕಾಣುತ್ತಿದ್ದು ಇದರಲ್ಲಿ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಗಳು ಈಗ ಸ್ಮಾರ್ಟ್ ಫೋನಿನಲ್ಲಿ ಕಾಣಿಸಿಕೊಂಡಿದೆ. ಇವು ಸ್ಮಾರ್ಟ್ ಫೋನ್ ಬಳಸುವ ವಿಧಾನವನ್ನು ಬದಲಾವಣೆ ಮಾಡಿದ್ದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಲ್ಲಿ ಈ ಹೊಸ ಮಾದರಿಯ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಗಳನ್ನು ನಾವು ಕಾಣಬಹುದಾಗಿದೆ.

ಈ ಹಿನ್ನೆಲೆಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಸ್ಮಾರ್ಟ್ ಫೋನ್ ಗಳು ಯಾವುವು ಮಾಹಿತಿಯನ್ನು ನೀಡುವ ಪ್ರಯತ್ನ ಇದಾಗಿದೆ.

ವಿವೋ X20 ಪ್ಲಸ್ UD
ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿದ ಸ್ಮಾರ್ಟ್ ಫೋನ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಸ್ಮಾರ್ಟ್ ಫೋನ್ ನ ಹಿಂಭಾಗದಲ್ಲಿ 12 MP + 5 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು ಇದರೊಂದಿಗೆ ಸ್ನಾಪ್ಡ್ರಾಗನ್ 660 ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು ಬಳಕೆದಾರರಿಗೆ ಬಳಕೆದಾರರಿಗೆ ಟಾಪ್ ಇನ್ ಫೀಚರ್ ಗಳನ್ನು ನೀಡುತ್ತಿದೆ.

ವಿವೋ X21
ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸ್ಮಾರ್ಟ್ ಫೋನ್ ಇದಾಗಿದ್ದು ಮತ್ತು 6 GB RAM ಮತ್ತು 128 GB ಆಂತರಿಕ ಮೆಮೊರಿ ಹೊಂದಿದೆ ದೊರೆಯುತ್ತಿದ್ದು ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಯನ್ನು ಉಳಿಸಿಕೊಂಡಿದೆ

ಹುವಾವೇ ಮೇಟ್ RS ಪೋರ್ಸೆ ಡಿಸೈನ್
ಹುವಾವೇ ಮೇಟ್ RS ಪೋರ್ಸೆ ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ 3 ಕ್ಯಾಮೆರಾವನ್ನು ಹೊಂದಿದ್ದು, ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಿತ್ತು. ಹುವಾವೇ P 20 ಸ್ಮಾರ್ಟ್ ಫೋನ್ ನ ಮುಂದುವರೆದ ಭಾಗವಾದ ಇದು, ಹೊಸ ಮಾದರಿಯಲ್ಲಿ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದ್ದು ಜೊತೆಗೆ ಮತ್ತು 6 GB RAM ಹಾಗೂ 256 GB ಇಂಟರ್ನಲ್ ಮೆಮೊರಿ ಹೊಂದಿದೆ.

ವಿವೊ NEX
ಮಾರುಕಟ್ಟೆಯಲ್ಲಿ ವಿವೋ ಲಾಂಚ್ ಮಾಡಿದ ಪಾಪ್ ಕ್ಯಾಮೆರಾ ಹೊಂದಿದಂತಹ ಸ್ಮಾರ್ಟ್ಫೋನ್ ಇದಾಗಿದ್ದು, ವಿವೋ ಬಿಡುಗಡೆ ಮಾಡಿದ ಮೂರನೇ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿದಂತಹ ಸ್ಮಾರ್ಟ್ಫೋನ್ ಇದಾಗಿದೆ, ಈ ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ 12+ 5 MP ಡುಯಲ್ ಕ್ಯಾಮೆರಾವನ್ನು ಕಾಣಬಹುದಾಗಿತ್ತು. 8 GB RAM ಹಾಗೂ 256 GB ಇಂಟರ್ನಲ್ ಮೆಮೊರಿ ಹೊಂದಿದೆ.

Mi 8 ಎಕ್ಸ್ ಪ್ಲೋರ್ ಎಡಿಷನ್:
ಶಿಯೋಮಿ ಲಾಂಚ್ ಮಾಡಿದ ಮೊದಲ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸ್ಮಾರ್ಟ್ ಫೋನ್ ಇದಾಗಿದ್ದು, ಗುಣಮಟ್ಟದ ಎಲ್ಲಾ ವಿಶೇಷತೆಗಳನ್ನು ಇದರಲ್ಲಿ ಕಾಣಬಹುದಾಗಿತ್ತು, 8 GB RAM ಹಾಗೂ 256 GB ಇಂಟರ್ನಲ್ ಮೆಮೊರಿ ಹೊಂದಿದೆ. ಮಾರುಕಟ್ಟೆಯಲ್ಲಿ ಉಳಿಸಿಕೊಂಡಿದೆ. ತ್ರೀಡಿ ಫೇಸ್ ಲಾಕಿಂಗ್ ಆಯ್ಕೆಯು ಇದರಲ್ಲಿದೆ

ಒಪ್ಪೋ R17/R17 ಪ್ರೋ
ಒಪ್ಪೋ ಲಾಂಚ್ ಮಾಡಿದಂತಹ ಮೊದಲ ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿದ ಸ್ಮಾರ್ಟ್ಫೋನ್ ಇದಾಗಿದ್ದು ಮಾರುಕಟ್ಟೆಯಲ್ಲಿ ಹೊಸ ಮಾದರಿಯ ನೋಚ್ ನೊಂದಿಗೆ ಕಾಣಿಸಿಕೊಂಡಿದೆ. ಟಾಪ್ ಎಂಡ್ ಆಯ್ಕೆಗಳನ್ನು ಇದರಲ್ಲಿ ಕಾಣಬಹುದಾಗಿದೆ.

ಮಿಜು 16 ಪ್ಲಸ್:
ಮಿಜು ಲಾಂಚ್ ಮಾಡುವಂತಹ ಪ್ರೀಮಿಯಮ್ ಸ್ಮಾರ್ಟ್ ಫೋನ್ ಇದಾಗಿದ್ದು, ಇದರಲ್ಲಿ ಸ್ನಾಪ್ಡ್ರಾಗನ್ 8455 ಪ್ರೊಸೆಸರ್ ನೊಂದಿಗೆ, ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕಾಣಬಹುದಾಗಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಲ್ಫಿ ಕ್ಯಾಮೆರಾ ಸೇರಿದಂತೆ ಪ್ರೀಮಿಯಮ್ ವಿಶೇಷತೆಗಳನ್ನು ಇದರಲ್ಲಿ ನೀಡಲಾಗಿದೆ,

ವಿವೋ ವಿ11 ಪ್ರೋ
vivo ಲಾಂಚ್ ಮಾಡುವ ಮತ್ತೊಂದು ಇನ್ ಡಿಸ್ ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಫೋನ್ ಇದಾಗಿದ್ದು, ಇದು ಮಧ್ಯಮ ಸರಣಿಯ ಸ್ಮಾರ್ಟ್ಫೋನ್ ಆಗಿದ್ದು, 6 GB RAM ಹಾಗೂ 64 GB ಇಂಟರ್ನಲ್ ಮೆಮೊರಿ ಹೊಂದಿದೆ.


Click it and Unblock the Notifications








