Home
ಮೊಬೈಲ್

ಬಜೆಟ್ ಸ್ಮಾರ್ಟ್ ಫೋನ್ ಗಳನ್ನು ಹುಡುಕಾಡುತ್ತಿದ್ದೀರಾ? ಫ್ಲಿಪ್ ಕಾರ್ಟ್ ನಲ್ಲಿದೆ ಆಕರ್ಷಕ ಆಫರ್

By Gizbot Bureau

ಮೊಬೈಲ್ ಬೊನಾನ್ಜ ಸೇಲ್ ಫ್ಲಿಪ್ ಕಾರ್ಟ್ ನಲ್ಲಿ ಆರಂಭವಾಗುತ್ತಿದೆ. ಫ್ಲ್ಯಾಗ್ ಶಿಪ್ ಡಿವೈಸ್ ಗಳಿಗೆ ಮಾತ್ರವೇ ಅತ್ಯುತ್ತಮ ಆಫರ್ ಅಲ್ಲ ಬದಲಾಗಿ ಕೆಲವು ಬಜೆಟ್ ಸ್ಮಾರ್ಟ್ ಫೋನ್ ಗಳಿಗೂ ಕೂಡ ಈ ಸೇಲ್ ನಲ್ಲಿ ರಿಯಾಯಿತಿ ಸಿಗುತ್ತಿದೆ. ನಾವಿಲ್ಲಿ ಅಂತಹ ಕೆಲವು ಡಿವೈಸ್ ಗಳ ಪಟ್ಟಿಯನ್ನು ನೀಡುತ್ತಿದ್ದು ಕಡಿಮೆ ಬೆಲೆಯಲ್ಲಿ ನೀವು ಈ ಫೋನ್ ಗಳನ್ನು ಖರೀದಿಸುವ ಅವಕಾಶ ಈ ಸೇಲ್ ನಲ್ಲಿ ಲಭ್ಯವಿದೆ.

ಫ್ಲಿಪ್ ಕಾರ್ಟ್ ಮೊಬೈಲ್ ಬೊನಾನ್ಜ:ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ

ಫ್ಲಿಪ್ ಕಾರ್ಟ್ ಮೊಬೈಲ್ ಬೊನಾನ್ಜ:ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ

ಫ್ಲಿಪ್ ಕಾರ್ಟ್ ನಲ್ಲಿ 5% ಅನಿಯಮಿತ ಕ್ಯಾಷ್ ಬ್ಯಾಕ್ ನ್ನು ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಪಡೆದುಕೊಳ್ಳಬಹುದು. ಹೆಚ್ಚುವರಿ 5% ರಿಯಾಯಿತಿಯು ಆಕ್ಸಿಸ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಸಿಗುತ್ತದೆ.ಕ್ಯಾಷ್ ಬ್ಯಾಕ್ ಆಫರ್ ಗಳು, ಹೆಚ್ಚುವರಿ ರಿಯಾಯಿತಿಗಳು ಸೇರಿದಂತೆ ಹಲವು ಆಫರ್ ಗಳು ಈ ಸೇಲ್ ನಲ್ಲಿ ಲಭ್ಯವಿದೆ.

ವಿವೋ Z1X

ವಿವೋ Z1X

ಈ ಸ್ಮಾರ್ಟ್ ಫೋನ್ ನ್ನು ನೀವು 28% ರಿಯಾಯಿತಿಯಲ್ಲಿ ಅಂದೆರ 17,990 ರುಪಾಯಿ ಬೆಲೆಗೆ ಫ್ಲಿಪ್ ಕಾರ್ಟಿನ ಈ ಸೇಲ್ ನಲ್ಲಿ ಖರೀದಿಸಬಹುದು. ಇದರಲ್ಲಿ 48MP ಟ್ರಿಪಲ್ ಕ್ಯಾಮರಾ ಸೆಟ್ ಅಪ್ FHD+ ಡಿಸ್ಪ್ಲೇ ಮತ್ತು 4500mAh ಲೀಥಿಯಂ ಬ್ಯಾಟರಿಯನ್ನು ಇದು ಹೊಂದಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ನೀವು ಈ ಫೋನ್ ಖರೀದಿಸಬಹುದಾಗಿದ್ದು ಪ್ರತಿ ತಿಂಗಳು 1,500 ರುಪಾಯಿ ಪಾವತಿ ಮಾಡಿ ಖರೀದಿಸಬಹುದು.

ಮೋಟೋ ಇ6ಎಸ್

ಮೋಟೋ ಇ6ಎಸ್

ಈ ಡಿವೈಸಿನ 4GB RAM ಮತ್ತು 64GB ROM ವ್ಯವಸ್ಥೆಯ ಈ ಫೋನ್ ನ್ನು6,999 ರುಪಾಯಿ ಬೆಲೆಗೆ ಖರೀದಿಸಬಹುದು ಮತ್ತು ಹೆಚ್ಚುವರಿ ರಿಯಾಯಿತಿಯನ್ನು ಕೂಡ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ 6.1-ಇಂಚಿನ HD+ ಡಿಸ್ಪ್ಲೇ, 8MP ಮುಂಭಾಗದ ಕ್ಯಾಮರಾ ಮತ್ತು 3000mAh ಬ್ಯಾಟರಿಯನ್ನು ಇದು ಹೊಂದಿದೆ.

ಹಾನರ್ 20ಐ

ಹಾನರ್ 20ಐ

4GB RAM ಮತ್ತು 128GB ROM ವ್ಯವಸ್ಥೆಯ ಈ ಫೋನ್ ನ್ನು ಗ್ರಾಹಕರು 10,999 ರುಪಾಯಿ ಬೆಲೆಗೆ ಖರೀದಿಸಬಹುದು 10,750 ರುಪಾಯಿವರೆಗೆ ಎಕ್ಸ್ ಚೇಂಜ್ ಆಫರ್ ನ್ನು ಕೂಡ ಪಡೆದುಕೊಳ್ಳುವ ಅವಕಾಶವಿದೆ. HiSilicon Kirin 710 ಪ್ರೊಸೆಸರ್ ಮತ್ತು 3400mAh ಬ್ಯಾಟರಿ ವ್ಯವಸ್ಥೆಯನ್ನು ಇದು ಹೊಂದಿದೆ.

ವಿವೋ ಯು10

ವಿವೋ ಯು10

13MP ಟ್ರಿಪಲ್ ಹಿಂಭಾಗದ ಕ್ಯಾಮರಾಗಳು,5000mAh ನ ಬ್ಯಾಟರಿ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 665 AIE ಪ್ರೊಸೆಸರ್ ನ್ನು ಇದು ಹೊಂದಿದೆ.8,990 ರುಪಾಯಿ ಬೆಲೆಗೆ ನೀವು ಇದನ್ನು ಖರೀದಿಸಬಹುದು. ಇಎಂಐ ಆಯ್ಕೆ ಕೂಡ ಇದ್ದು ಪ್ರತಿ ತಿಂಗಳು 750 ರುಪಾಯಿ ಪಾವತಿ ಮಾಡಿ ಖರೀದಿಸಬಹುದು.

ಒಪ್ಪೋ ಎ3ಎಸ್

ಒಪ್ಪೋ ಎ3ಎಸ್

ಇದರಲ್ಲಿ 13MP + 2MP ಹಿಂಭಾಗದ ಕ್ಯಾಮರಾ ಮತ್ತು 8MP ಮುಂಭಾಗದ ಕ್ಯಾಮರಾ ವ್ಯವಸ್ಥೆ ಇದರಲ್ಲಿದೆ. ಈ ಹ್ಯಾಂಡ್ ಸೆಟ್ ನಲ್ಲಿ 4230mAh ಬ್ಯಾಟರಿ ಸೌಲಭ್ಯವಿದೆ. ಇಎಂಐ ನಲ್ಲಿ ಖರೀದಿಸಬಹುದಾಗಿದ್ದು 448 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸಬಹುದು.

ಇನ್ಫಿನಿಟಿ ನೋಟ್ 5

ಇನ್ಫಿನಿಟಿ ನೋಟ್ 5

ಇದು 4500mAh ಬ್ಯಾಟರಿ ಬ್ಯಾಕ್ ಅಪ್ ನ್ನು ಹೊಂದಿದೆ ಮತ್ತು 12MP ಹಿಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಒಳಗೊಂಡಿದೆ. ಈ ಹ್ಯಾಂಡ್ ಸೆಟ್ ನ್ನು 6,999 ರುಪಾಯಿಗೆ ಅಂದರೆ 36% ರಿಯಾಯಿತಿಯಲ್ಲಿ ಖರೀದಿಸಬಹುದು.584 ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ನೀವು ಈ ಫೋನ್ ಖರೀದಿಸಬಹುದು.

ಮೋಟೋ ಜಿ8 ಪ್ಲಸ್

ಮೋಟೋ ಜಿ8 ಪ್ಲಸ್

4GB RAM ಮತ್ತು 64GB ROM ವ್ಯವಸ್ಥೆಯ ಈ ಫೋನ್ ನ್ನು 12,999 ರುಪಾಯಿ ಬೆಲೆಗೆ ಖರೀದಿಸಬಹುದು. ಇಎಂಐ ನಲ್ಲೂ ಖರೀದಿಸಬಹುದಾಗಿದ್ದು ಪ್ರತಿ ತಿಂಗಳು 1,084 ರುಪಾಯಿ ಪಾವತಿಸಿ ಕೊಂಡುಕೊಳ್ಳಬಹು. ಇದರಲ್ಲಿ 48MP ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದ್ದು 25MP ಮುಂಭಾಗದ ಕ್ಯಾಮರಾ ವ್ಯವಸ್ಥೆ ಮತ್ತು 6.3-ಇಂಚಿನ FHD+ ಡಿಸ್ಪ್ಲೇ ವ್ಯವಸ್ಥೆ ಇದೆ.

ಮೋಟೋರೋಲಾ ಒನ್ ವಿಷನ್

ಮೋಟೋರೋಲಾ ಒನ್ ವಿಷನ್

ಈ ಡಿವೈಸ್ ನ್ನು ನೀವು 13,999 ರುಪಾಯಿಗೆ ಖರೀದಿಸಬಹುದು. ಪ್ರತಿ ತಿಂಗಳು 1,167 ರುಪಾಯಿ ಪಾವತಿ ಮಾಡಿ ಕೂಡ ಖರೀದಿಸಬಹುದು. ಈ ಫೋನಿನಲ್ಲಿ 48MP ಡುಯಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ 6.3-ಇಂಚಿನ ಡಿಸ್ಪ್ಲೇ ಮತ್ತು 500mAh ಬ್ಯಾಟರಿ ಕೆಪಾಸಿಟಿಯನ್ನು ಈ ಫೋನ್ ಹೊಂದಿದೆ.

Best Mobiles in India

English summary
Flipkart's bonanza sale brings great offers on many budget smartphones. And to offer you with the best knowledge, we have given you a list of these smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+