Apple MacBook Neo ಬೆಂಚ್‌ಮಾರ್ಕ್ ಬಹಿರಂಗ: ಕಡಿಮೆ ಬೆಲೆ, ಹೆಚ್ಚು ಕಾರ್ಯಕ್ಷಮತೆ!
ಟೆಕ್ ದೈತ್ಯ Apple ತನ್ನ ಅತ್ಯಂತ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಆಗಿರುವ MacBook Neo ಅನ್ನು ಇದೇಮಾರ್ಚ್ 4ರಂದು ಅಧಿಕೃತವಾಗಿ ಪರಿಚಯಿಸಿದೆ. ಈ ಹೊಸ ಲ್ಯಾಪ್‌ಟಾಪ್ ಈಗಾಗಲೇ ಪ್ರೀ-ಆರ್ಡರ್‌ಗೆ ಲಭ್ಯವಿದ್ದು, ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರ್ಚ್ 11ರಿಂದ ಮಾರಾಟ ಆರಂಭವಾಗಲಿದೆ. ಗ್ರಾಹಕರು ಲ್ಯಾಪ್‌ಟಾಪ್ ಖರೀದಿಸುವ ಮೊದಲು ಅದರ ಕಾರ್ಯಕ್ಷಮತೆ ಬಗ್ಗೆ ಪ್ರಮುಖ ಸುಳಿವುಗಳು ಹೊರಬಿದ್ದಿವೆ. ಇತ್ತೀಚೆಗೆ ಈ ಸಾಧನವು ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದು, ಅದರ ಸಾಮರ್ಥ್ಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿದೆ.
ಇತ್ತೀಚಿನ ವರದಿಗಳ ಪ್ರಕಾರ, ಹೊಸ MacBook Neo ಮಾದರಿ ಪ್ರಸಿದ್ಧ ಬೆಂಚ್‌ಮಾರ್ಕಿಂಗ್ ಸೈಟ್ ನಲ್ಲಿ "Mac17,5" ಎಂಬ ಗುರುತು ಸಹಿತ ಪತ್ತೆಯಾಗಿದೆ. ಈ ಪಟ್ಟಿಯಲ್ಲಿ ಲ್ಯಾಪ್‌ಟಾಪ್ ಸಿಂಗಲ್-ಕೋರ್ ಪರೀಕ್ಷೆಯಲ್ಲಿ 3,980 ಅಂಕಗಳನ್ನು ಹಾಗೂ ಮಲ್ಟಿ-ಕೋರ್ ಪರೀಕ್ಷೆಯಲ್ಲಿ 10,105 ಅಂಕಗಳನ್ನು ಗಳಿಸಿರುವುದು ಗಮನಾರ್ಹವಾಗಿದೆ. ಈ ಪರೀಕ್ಷೆ ಆವೃತ್ತಿಯ macOS AArch64 ಪ್ಲಾಟ್‌ಫಾರ್ಮ್‌ನಲ್ಲಿ ನಡೆಸಲಾಗಿದೆ. ಈ ಅಂಕೆಗಳು ಲ್ಯಾಪ್‌ಟಾಪ್ ಸಾಮರ್ಥ್ಯವು ಫ್ಲ್ಯಾಗ್‌ಶಿಪ್ ಮಟ್ಟದ ಸಾಧನಗಳಿಗೆ ಸಮೀಪವಾಗಿರಬಹುದು ಎಂಬ ಸೂಚನೆ ನೀಡುತ್ತವೆ.
ಹೊಸ ಲ್ಯಾಪ್‌ಟಾಪ್‌ನಲ್ಲಿ Apple A18 Pro ಚಿಪ್‌ಸೆಟ್ ಬಳಸಲಾಗಿದೆ. ಇದೇ ಚಿಪ್‌ಸೆಟ್ 2024ರಲ್ಲಿ ಬಿಡುಗಡೆಯಾದ iPhone 16 Pro ಮತ್ತು iPhone 16 Pro Max ಸ್ಮಾರ್ಟ್‌ಫೋನ್‌ಗಳಿಗೆ ಶಕ್ತಿ ನೀಡುತ್ತದೆ. ಹೋಲಿಕೆಗೆ ತೆಗೆದುಕೊಂಡರೆ, iPhone 16 Pro Max ಸಿಂಗಲ್-ಕೋರ್ ಪರೀಕ್ಷೆಯಲ್ಲಿ ಸುಮಾರು 3,203 ಅಂಕಗಳು ಮತ್ತು ಮಲ್ಟಿ-ಕೋರ್ ಪರೀಕ್ಷೆಯಲ್ಲಿ 7,846 ಅಂಕಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಈ ಅಂಕೆಗಳು ಹೊಸ ಲ್ಯಾಪ್‌ಟಾಪ್ ಕಾರ್ಯಕ್ಷಮತೆ ಫ್ಲ್ಯಾಗ್‌ಶಿಪ್ ಐಫೋನ್ ಮಟ್ಟದಷ್ಟೇ ಶಕ್ತಿಯುತವಾಗಿರಬಹುದು ಎಂಬುದನ್ನು ಸೂಚಿಸುತ್ತವೆ.

ಬೆಂಚ್‌ಮಾರ್ಕ್ ವಿವರಗಳ ಪ್ರಕಾರ, MacBook Neo ಲ್ಯಾಪ್‌ಟಾಪ್ ಹೊಸ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಾಧನವು Apple ಕಂಪನಿಯ A-ಸಿರೀಸ್ ಚಿಪ್ ಆರ್ಕಿಟೆಕ್ಚರ್ ಆಧಾರಿತ ತಂತ್ರಜ್ಞಾನವನ್ನು ಬಳಸುತ್ತದೆ. Apple A18 Pro ಪ್ರೊಸೆಸರ್ ಅನ್ನು ಕಂಪನಿಯ ಎರಡನೇ ತಲೆಮಾರಿನ 3 ನ್ಯಾನೋಮೀಟರ್ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಒಟ್ಟು 6 CPU ಕೋರ್‌ಗಳಿದ್ದು, 16-ಕೋರ್ Neural Engine ಕೂಡ ಸೇರಿದೆ. ಕೃತಕ ಬುದ್ಧಿಮತ್ತೆ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸಲು ಇದು ಸುಮಾರು 35 TOPS ಸಾಮರ್ಥ್ಯವನ್ನು ನೀಡುತ್ತದೆ. ಜೊತೆಗೆ 6-ಕೋರ್ CPU ಮತ್ತು 5-ಕೋರ್ GPU ವ್ಯವಸ್ಥೆ ಕೂಡ ಈ ಚಿಪ್‌ನಲ್ಲಿ ಇದೆ.
ಇದೊಂದೇ ಅಲ್ಲ, ಇತ್ತೀಚೆಗೆ MacBook Pro (2026) ಮಾದರಿಯೂ ಇದೇ ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಂಡಿದೆ. ಈ ಲ್ಯಾಪ್‌ಟಾಪ್‌ನಲ್ಲಿ Apple ಕಂಪನಿಯ ಶಕ್ತಿಶಾಲಿ M5 Max ಚಿಪ್ ಬಳಸಲಾಗಿದೆ. ಈ ಪ್ರೊಸೆಸರ್‌ನಲ್ಲಿ ಒಟ್ಟು 18 CPU ಕೋರ್‌ಗಳಿದ್ದು, ಅವುಗಳಲ್ಲಿ 6 Cluster 1 ಕೋರ್‌ಗಳು ಮತ್ತು 12 Cluster 2 ಕೋರ್‌ಗಳು ಸೇರಿವೆ. ಇದರ ಬೇಸ್ ಫ್ರೀಕ್ವೆನ್ಸಿ 4.60GHz ಆಗಿದೆ. ಇದು128GB RAM ಹೊಂದಿರುವುದಾಗಿ ತೋರಿಸಿದೆ.
ಒಟ್ಟಾರೆಯಾಗಿ, ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಆಗಿ ಪರಿಚಯಿಸಲಾದ MacBook Neo ಸಾಧನವು ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ಸಾಧ್ಯತೆ ಇದೆ ಎಂಬುದನ್ನು ಈ ಬೆಂಚ್‌ಮಾರ್ಕ್ ಅಂಕೆಗಳು ಸೂಚಿಸುತ್ತಿವೆ. ಮಾರ್ಚ್ 11ರಿಂದ ಭಾರತದಲ್ಲಿಯೂ ಮಾರಾಟ ಆರಂಭವಾದ ನಂತರ, ಈ ಹೊಸ ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಯಾವ ಮಟ್ಟದ ಪ್ರತಿಕ್ರಿಯೆ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇದಕ್ಕೂ ಮೊದಲು, MacBook Neo ಹೊಂದಿರುವ ಸಂಪೂರ್ಣ ಸ್ಪೆಸಿಫಿಕೇಶನ್‌ಗಳು ಯಾವುವು ಎಂಬುದನ್ನು ನೀವು ಇಲ್ಲಿ ಕ್ಲಿಕ್ ಮಾಡಬಹುದು.


Click it and Unblock the Notifications








