ದೇಶದಲ್ಲೇ ಐಪೋನ್ 'XR​' ಮತ್ತು 'XS​' ತಯಾರಿಕೆ!..ಬೆಲೆಯಲ್ಲಿ ಭಾರೀ ಇಳಿಕೆ!

|

ಮೊನ್ನೆಮೊನ್ನೆಯಷ್ಟೇ ಭಾರತದಲ್ಲಿ ಹಳೆ ಮಾದರಿ ಐಪೋನ್‌ಗಳನ್ನು ಸ್ಥಗಿತಗೊಳಿಸುವ ಶಾಕಿಂಗ್ ಸುದ್ದಿ ನೀಡಿದ್ದ ಆಪಲ್ ಸಂಸ್ಥೆ ಇದೀಗ ಭಾರತೀಯರಿಗೆ ಭರ್ಜರಿ ಸುದ್ದಿಯೊಂದನ್ನು ಹೊತ್ತು ತಂದಿದೆ. ದೇಶದಲ್ಲಿ ಹಳೆ ಮಾದರಿ ಐಪೋನ್‌ಗಳನ್ನು ಸ್ಥಗಿತಗೊಳಿಸುವ ಮೊದಲೇ, ಭಾರತದಲ್ಲಿ ನಿರ್ಮಿತವಾದ ಐಪೋನ್ 'ಎಕ್ಸ್​ಆರ್​' ಮತ್ತು ಐಪೋನ್ 'ಎಕ್ಸ್​ಎಸ್​' ಪ್ರೀಮಿಯಂ ಶ್ರೇಣಿ ಸ್ಮಾರ್ಟ್‌ಪೋನ್‌ಗಳ ಬೆಲೆಗಳನ್ನು ಇಳಿಕೆ ಮಾಡುವ ಬಗ್ಗೆ ಕಂಪೆನಿ ಚಿಂತಿಸಿದೆ ಎನ್ನಲಾಗಿದೆ.

ದೇಶದಲ್ಲೇ ಐಪೋನ್ 'XR​' ಮತ್ತು 'XS​' ತಯಾರಿಕೆ!..ಬೆಲೆಯಲ್ಲಿ ಭಾರೀ ಇಳಿಕೆ!

ಹೌದು, ಮೇಡ್​ ಇನ್​ ಇಂಡಿಯಾ ಅಭಿಯಾನದ ಭಾಗವಾಗಿ ಫಾಕ್ಸ್​ಕಾನ್​ನ ತನ್ನ ಸ್ಥಳೀಯ ಘಟಕವಾದ ಐಫೋನ್​ನ ಬಿಡಿ ಭಾಗಗಳನ್ನು ಜೋಡಿಸುವ ಯೂನಿಟ್‌ ಅನ್ನು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ ಎನ್ನಲಾಗಿದೆ. ಇದರಿಂದ ಭಾರತದಲ್ಲಿ ನಿರ್ಮಿತ ಐಫೋನ್ 'ಎಕ್ಸ್​ಆರ್​' ಮತ್ತು ಐಫೋನ್ 'ಎಕ್ಸ್​ಎಸ್​' ಶ್ರೇಣಿಗಳು ಅಗಸ್ಟ್​ ವೇಳೆಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹೀಗೆ ತಯಾರಾದ ಭಾರತ ನಿರ್ಮಿತ ಫೋನ್‌ಗಳ ಬೆಲೆಗಳು ಅತ್ಯಂತ ಕಡಿಮೆ ಬೆಲೆಗೆ ಸಿಗಲಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಭಾರತದಲ್ಲಿ ಐಫೋನ್ 'ಎಕ್ಸ್​ಆರ್​' ಮತ್ತು 'ಎಕ್ಸ್​ಎಸ್​' ನಿರ್ಮಾಣ ಕಾರ್ಯಾರಂಭಕ್ಕೆ ಕೆಲವು ಅನುಮೋದನೆಗಳಷ್ಟೇ ಬಾಕಿ ಇದ್ದು, ಭಾರತದಲ್ಲಿ ನಿರ್ಮಿತ ಐಫೋನ್ 'ಎಕ್ಸ್​ಆರ್​' ಮತ್ತು 'ಎಕ್ಸ್​ಎಸ್​' ಶ್ರೇಣಿಗಳು ಅಗಸ್ಟ್​ ವೇಳೆಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂದು ಉದ್ಯಮದ ಮೂಲಗಳು ತಿಳಿಸಿರುವುದನ್ನು ಮಾಧ್ಯಮ ವರದಿಗಳು ಹೇಳಿವೆ. ಐಫೋನ್‌ಗಳ ಬಿಡಿ ಭಾಗಗಳು ಸ್ಥಳೀಯವಾಗಿ ಜೋಡೆಣೆ ಆಗುವುದರಿಂದ ಸಿದ್ಧ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ ಎಂದು ವರದಿಗಳು ತಿಳಿಸಿವೆ.

ದೇಶದಲ್ಲೇ ಐಪೋನ್ 'XR​' ಮತ್ತು 'XS​' ತಯಾರಿಕೆ!..ಬೆಲೆಯಲ್ಲಿ ಭಾರೀ ಇಳಿಕೆ!

ಐಫೋನ್ 'ಎಕ್ಸ್​ಆರ್​' ಮತ್ತು 'ಎಕ್ಸ್​ಎಸ್​' ಶ್ರೇಣಿಗಳು ಸ್ಥಳೀಯವಾಗಿ ಜೋಡೆಣೆ ಆಗುವುದರಿಂದ ಸಿದ್ಧ ಉತ್ಪನ್ನಗಳ ಮೇಲೆ ಆಮದು ಮೇಲಿನ ಸುಂಕ ವಿನಾಯಿತಿ ದೊರೆಯಲಿದೆ. ಇದರಿಂದ ಹೆಚ್ಚುವರಿ ತೆರಿಗೆಯ ಹೊರೆ ಕೂಡ ತಪ್ಪಲಿದೆ. ಜೊತೆಗೆ ಭಾರತದಲ್ಲಿ ತನ್ನದೇ ಆದ ಚಿಲ್ಲರೆ ಮಳಿಗೆ ತೆರೆಯಲು ಸ್ಥಳೀಯ ಮಾನದಂಡಗಳು ಅನುಕೂಲವಾಗಲಿವೆ. ಹೀಗಾಗಿ, ದುಬಾರಿ ಬೆಲೆಯ ಐಫೋನ್‌ಗಳು ವಿದೇಶಿ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿವೆ ಎಂದು ಹೇಳಲಾಗಿದೆ.

21,999 ರೂ.ಗೆ ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ ಫೋನ್ 'ರೆಡ್‌ಮಿ ಕೆ20' ರಿಲೀಸ್!21,999 ರೂ.ಗೆ ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ ಫೋನ್ 'ರೆಡ್‌ಮಿ ಕೆ20' ರಿಲೀಸ್!

ವಿಶ್ವದ 2ನೇ ಅತಿದೊಡ್ಡ ಸ್ಮಾರ್ಟ್​ಫೋನ್​ ಗ್ರಾಹಕ ಮಾರುಕಟ್ಟೆಯಾದ ಭಾರತದಲ್ಲಿ ಆಪಲ್ ಕಂಪೆನಿಯ ಸಾಧನೆ ಅಷ್ಟೇನು ಉತ್ತಮವಾಗಿಲ್ಲ. ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ಆಪಲ್ ಕಂಪೆನಿ ಕುಂಟುತ್ತಾ ಸಾಗಿದೆ. ಹಾಗಾಗಿ, ಭಾರತದಲ್ಲೇ ತನ್ನ ಐಫೋನ್‌ಗಳನ್ನು ತಯಾರಿಸಿ ಮಾರಾಟ ಮಾಡಲು ಆಪಲ್‌ ಚಿಂತಿಸಿದೆ ಎಂದು ಈ ಮೊದಲು ವರದಿಯಾಗಿತ್ತು. ಇದೀಗ ಐಫೋನ್ 'ಎಕ್ಸ್​ಆರ್​' ಮತ್ತು ಐಫೋನ್ 'ಎಕ್ಸ್​ಎಸ್​' ಶ್ರೇಣಿಗಳು ಆ ಸುದ್ದಿಯ ಹಿಂದಿವೆ.

Best Mobiles in India

English summary
We could see massive price cuts on iPhone XR and iPhone XR. ... If the iPhone XS and iPhone XR will be made in India, Apple could be saving. to know more visi to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X