ಮ್ಯಾಪ್‌ಮೈ ಇಂಡಿಯಾ ಆಫ್‌ಲೈನ್ ನ್ಯಾವಿಗೇಶನ್ ಐಓಎಸ್‌ನಲ್ಲಿ

By Shwetha
|

ಅತ್ಯಂತ ಜನಪ್ರಿಯ ನ್ಯಾವಿಗೇಶನ್ ಅಪ್ಲಿಕೇಶನ್‌ ಡೆವಲಪರ್‌ಗಳಲ್ಲಿ ಒಂದಾದ ಡಿಜಿಟಲ್ ಮ್ಯಾಪಿಂಗ್ ಸಂಸ್ಥೆ ಮ್ಯಾಪ್‌ಮೈ ಇಂಡಿಯಾ ಅಂತರ್ಜಾಲರಹಿತ ನವೀಮ್ಯಾಪ್ಸ್ ಅನ್ನು ಆಪಲ್‌ನ ಐಓಎಸ್ ಗಾಗಿ 620 ರೂಗಳಲ್ಲಿ ಲಾಂಚ್ ಮಾಡಿದೆ. ಇದು 80 ಭಾರತೀಯ ನಗರಗಳ ಮನೆ ವಿಳಾಸವನ್ನು ತೋರಿಸುವ ಸಾಮರ್ಥ್ಯವನ್ನು ಹೊಂದಿದೆ. ಐಓಎಸ್ ಬಳಕೆದಾರರು ತಮ್ಮ ಐಟ್ಯೂನ್‌ಗಳ ಮೂಲಕ ಈ ಆಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ.

ಆಂಡ್ರಾಯ್ಡ್ ಬಳಕೆದಾರರಿಗಾಗಿ, ನವೀಮ್ಯಾಪ್ಸ್ ಆಫ್‌ಲೈನ್ ನ್ಯಾವಿಗೇಶನ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ತುಂಬಾ ಸಮಯದಿಂದ ಲಭ್ಯವಿದೆ. ಆದರೆ ಇದು ಸಂಪೂರ್ಣ ಉಚಿತ ಅಪ್ಲಿಕೇಶನ್ ಆಗಿರದೆ, ಮೂರು ದಿನಗಳ ನಂತರ ಉಚಿತ ಪ್ರವೇಶವನ್ನು ಬಳಕೆದಾರರು ಪಡದುಕೊಂಡ ನಂತರ ಇದನ್ನು ಮುಂದುವರಿಸಿದಲ್ಲಿ ತನ್ನ ಬಳಕೆದಾರರಿಗೆ ಸೇವೆಗಳನ್ನು ಬಳಸಲು ಇದು ವೆಚ್ಚವನ್ನು ತಗಲಿಸುತ್ತದೆ.

ಇನ್ನು ಐಓಎಸ್‌ನಲ್ಲೂ ಉಚಿತ ಆಫ್‌ಲೈನ್ ನ್ಯಾವಿಗೇಶನ್

ಭಾರತದಲ್ಲಿರುವ ಮಿಲಿಯಗಟ್ಟಲೆ ಆಪಲ್ ಬಳಕೆದಾರರು, ಭಾರತದಲ್ಲಿ ಪ್ರಪ್ರಥಮ ಬಾರಿಗೆ, ನಿವಾಸ ಮಟ್ಟದ ನ್ಯಾವಿಗೇಶನ್ ವೈಶಿಷ್ಟ್ಯಗಳು, ಹತ್ತು ಭಾಷೆಗಳಲ್ಲಿ ಸ್ಥಳೀಯ ಭಾಷೆ ದ್ವನಿ ಮಾರ್ಗದರ್ಶನ ಸೇವೆ ಇದರಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳ ಭಾಷೆಯನ್ನು ಇದು ಒಳಗೊಂಡಿರುವ ಸೌಲಭ್ಯವನ್ನು ಹೊಂದಿರುವ ಈ ಅಪ್ಲಿಕೇಶನ್ ಅನ್ನು ಆನಂದಿಸಬಹುದೆಂದು ಮ್ಯಾಪ್‌ಮೈಇಂಡಿಯಾದ ಕಾರ್ಯನಿರ್ವಾಹಕರಾದ ರಾಕೇಶ್ ವರ್ಮಾ ತಿಳಿಸಿದ್ದಾರೆ.

ನವೀಮ್ಯಾಪ್ಸ್ ಫೋನ್ ಅಂತರ್ಜಾಲ ಸಂಪರ್ಕವನ್ನು ಹೊಂದಿಲ್ಲದಿದ್ದರೂ ಕಾರ್ಯನಿರ್ವಹಿಸುತ್ತದೆ. ಇದರ ಪ್ರಮುಖ ವಿಶೇಷತೆ ಎಂದರೆ ಇದು ಅಂತರ್ಜಾಲರಹಿತವಾಗಿ ಕೆಲಸ ಮಾಡುವುದಾಗಿದೆ. ಇದರಿಂದ ಬಳಕೆದಾರರು ನಕ್ಷೆಗಳನ್ನು ನಂತರ ವೀಕ್ಷಿಸಲು ಉಳಿಸಬಹುದಾಗಿದೆ. ದೆಹಲಿ, ಗುರ್‌ಗಾವ್, ಗಾಜಿಯಾಬಾದ್, ನೋಯ್ಡಾ, ಮುಂಬೈ, ನವೀ ಮುಂಬೈ, ಕಲ್ಯಾಣ್, ಥಾನೆ, ಪುಣೆ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಲೈವ್ ಟ್ರಾಫೀಕ್ ಡೇಟಾವನ್ನು ನೋಡಬಹುದಾಗಿದೆ.

ಮುಖ್ಯ ನಗರಗಳಾದ ದೆಹಲಿ, ಎನ್‌ಸಿಆರ್, ಮುಂಬೈ, ಪುಣೆ, ಚಂಡೀಘಡ್, ಕಲ್ಕತ್ತಾ, ಹೈದ್ರಾಬಾದ್, ಚೆನ್ನೈ, ಬೆಂಗಳೂರು ಮತ್ತು ಜೈಪುರ್‌ನಂತಹ ಎಲ್ಲಾ ಪ್ರಮುಖ ನಗರಗಳಿಗಾಗಿ ಅಪ್ಲಿಕೇಶನ್ ಹೌಸ್ ಲೆವಲ್ ಡೇಟಾ (ನಿವಾಸ ಮಟ್ಟದ ಡೇಟಾ) ವನ್ನು ಹೊಂದಿದೆ.

Best Mobiles in India

Read more about:
English summary
This article tells about MapmyIndia Offline navigation app Now available for IOS devices for rs 620. This application has the capacity to show 80 Indian city home address.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X