Home
ಮೊಬೈಲ್

ಫೆಬ್ರವರಿಯಲ್ಲೇ iPhone 17e ಬಿಡುಗಡೆ ಸಾಧ್ಯತೆ: ಇದು ₹50 ಸಾವಿರ ಒಳಗಿನ ಐಫೋನ್?!

2026ರ ಆರಂಭದಲ್ಲಿ ಆಪಲ್ ತನ್ನ ಹೊಸ iPhone 17e ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ ಮತ್ತು ಈ ಐಫೋನ್ ಬೆಲೆಯು 50 ಸಾವಿರ ವಿಭಾಗದಲ್ಲಿ ಇರಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಈ ಸುದ್ದಿಗೆ ಪೂರಕವಾಗಿ, ಬ್ಲೂಂಬರ್ಗ್‌ನ ಪ್ರಸಿದ್ಧ ತಂತ್ರಜ್ಞಾನ ಪತ್ರಕರ್ತ ಮಾರ್ಕ್ ಗರ್ಮನ್ ತಮ್ಮ Power On ನ್ಯೂಸ್‌ಲೆಟರ್‌ನಲ್ಲಿ iPhone 17e ಕುರಿತು ಪ್ರಮುಖ ಸುಳಿವುಗಳನ್ನು ನೀಡಿದ್ದಾರೆ. ಆಪಲ್ ಇದೇ ಫೆಬ್ರವರಿ ತಿಂಗಳಿನಲ್ಲಿ iPhone 17e ಮೂಲಕ ತನ್ನ ಹೊಸ ಹಾರ್ಡ್‌ವೇರ್ ಲೈನ್‌ಅಪ್ ಅನ್ನು ಆರಂಭಿಸುವ ಸಾಧ್ಯತೆ ಹೆಚ್ಚಾಗಿದೆ.

ಹೌದು, ಮಾರ್ಕ್ ಗರ್ಮನ್ ತಮ್ಮ Power On ನ್ಯೂಸ್‌ಲೆಟರ್‌ನಲ್ಲಿ iPhone 17e ಕುರಿತು ಪ್ರಮುಖ ಸುಳಿವುಗಳನ್ನು ನೀಡಿದ್ದಾರೆ. ಅವರ ಪ್ರಕಾರ, ಆಪಲ್ ಈ ಫೋನ್ ಅನ್ನು ಮುಖ್ಯವಾಗಿ ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಎಂಟರ್‌ಪ್ರೈಸ್ ಬಳಕೆದಾರರು ಎಂಬ ಎರಡು ವಿಭಾಗಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸುತ್ತಿದೆ ಎಂದು ಹೇಳಿದ್ದಾರೆ. ಇದರಿಂದ ಭಾರತ ಸೇರಿದಂತೆ ಏಷ್ಯಾದ ಮಾರುಕಟ್ಟೆಗಳಲ್ಲಿ iPhone 17e ಹೆಚ್ಚು ಗಮನ ಸೆಳೆಯುವ ಸಾಧ್ಯತೆ ಇದೆ.

ಕಾರ್ಯಕ್ಷಮತೆಯ ದೃಷ್ಟಿಯಿಂದ iPhone 17e ನಲ್ಲಿ A19 ಚಿಪ್‌ಸೆಟ್ ಬಳಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದೇ ಚಿಪ್ ಸಾಮಾನ್ಯ iPhone 17 ಮಾದರಿಯಲ್ಲೂ ಬಳಕೆಯಾಗಿದ್ದು, ಹಿಂದಿನ ತಲೆಮಾರಿನಿಗಿಂತ ಸುಮಾರು 40 ಶೇಕಡಾ ವೇಗವಾದ CPU ಕಾರ್ಯಕ್ಷಮತೆ ನೀಡುತ್ತದೆ ಎನ್ನಲಾಗಿದೆ. 16-ಕೋರ್ ನ್ಯೂರಲ್ ಎಂಜಿನ್ ಹೊಂದಿರುವ ಈ ಚಿಪ್, ಕೃತಕ ಬುದ್ಧಿಮತ್ತೆ ಆಧಾರಿತ ವೈಶಿಷ್ಟ್ಯಗಳಲ್ಲಿ ಹೆಚ್ಚು ಶಕ್ತಿಸೇವ್ ಮತ್ತು ವೇಗವನ್ನು ಒದಗಿಸಲಿದೆ.

ನೆಟ್‌ವರ್ಕ್ ಸಾಮರ್ಥ್ಯದಲ್ಲೂ ದೊಡ್ಡ ಬದಲಾವಣೆ ಸಾಧ್ಯತೆ ಇದೆ. iPhone 17e ನಲ್ಲಿ ಆಪಲ್ ತನ್ನ ಹೊಸ C1X ಮೋಡೆಮ್ ಅನ್ನು ಬಳಸಬಹುದು ಎಂಬ ವರದಿಗಳಿವೆ. ಈ ಮೋಡೆಮ್ ಮೊದಲ ಬಾರಿಗೆ iPhone Air ನಲ್ಲಿ ಪರಿಚಯವಾಗಿದ್ದು, ಹಳೆಯ C1 ಮೋಡೆಮ್‌ಗೆ ಹೋಲಿಸಿದರೆ ಎರಡು ಪಟ್ಟು ವೇಗದ ಡೇಟಾ ಸ್ಪೀಡ್ ಮತ್ತು ಉತ್ತಮ ಬ್ಯಾಟರಿ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ದಿನನಿತ್ಯದ ಇಂಟರ್‌ನೆಟ್ ಬಳಕೆ, ವೀಡಿಯೊ ಕಾಲ್ ಮತ್ತು ಸ್ಟ್ರೀಮಿಂಗ್ ಅನುಭವ ಇನ್ನಷ್ಟು ಸುಧಾರಿಸಲಿದೆ.

ಫೆಬ್ರವರಿಯಲ್ಲೇ iPhone 17e ಬಿಡುಗಡೆ ಸಾಧ್ಯತೆ: ಇದು ₹50 ಸಾವಿರ ಒಳಗಿನ ಐಫೋನ್?!

ಚಾರ್ಜಿಂಗ್ ವಿಭಾಗದಲ್ಲೂ ಬಳಕೆದಾರರಿಗೆ ಖುಷಿ ನೀಡುವ ಅಪ್‌ಗ್ರೇಡ್ ಸಾಧ್ಯ. iPhone 16e ನಲ್ಲಿ ಕೇವಲ Qi ವೈರ್‌ಲೆಸ್ ಚಾರ್ಜಿಂಗ್ (ಸುಮಾರು 7.5W) ಇದ್ದರೆ, ಹೊಸ iPhone 17e ನಲ್ಲಿ MagSafe ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಸಿಗಬಹುದು. ಇದರಿಂದ 25W ವರೆಗೆ ವೇಗವಾದ ವೈರ್‌ಲೆಸ್ ಚಾರ್ಜಿಂಗ್ ಸಾಧ್ಯವಾಗಿದ್ದು, ಈ ಫೋನ್ ಅನ್ನು ಆಪಲ್‌ನ ಇತರ ಪ್ರೀಮಿಯಂ ಮಾದರಿಗಳ ಮಟ್ಟಕ್ಕೆ ತರುತ್ತದೆ.

ಬೆಲೆ ಮತ್ತು ವಿನ್ಯಾಸದ ವಿಷಯದಲ್ಲಿ ಆಪಲ್ ದೊಡ್ಡ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ವರದಿಗಳ ಪ್ರಕಾರ, iPhone 17e ಯ ಆರಂಭಿಕ ಬೆಲೆ $599 (ಸುಮಾರು ₹54,000) ಆಗಿಯೇ ಇರಬಹುದು. ಆದರೆ, ಮೂಲ ಸ್ಟೋರೇಜ್ 256GB ಆಗಿ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಇದು ನಡೆದರೆ, ಮಧ್ಯಮ ಬೆಲೆಯ iPhone ಬಳಕೆದಾರರಿಗೆ ಇದು ದೊಡ್ಡ ಪ್ಲಸ್ ಆಗಲಿದೆ.

ಬಿಡುಗಡೆ ದಿನಾಂಕದ ಕುರಿತು ನೋಡಿದರೆ, ಎಲ್ಲಾ ಸುಳಿವುಗಳು ಫೆಬ್ರವರಿ 19ರತ್ತ ಬಿಡುಗಡೆ ದಿನಾಂಕವನ್ನು ವರದಿ ಮಾಡುತ್ತಿವೆ. ಇದು iPhone 16e ಬಿಡುಗಡೆಯಾದ ದಿನಕ್ಕೆ ಸರಿಯಾಗಿ ಒಂದು ವರ್ಷವಾಗುತ್ತದೆ. ಆಪಲ್ ಇನ್ನೂ ಅಧಿಕೃತ ದೃಢೀಕರಣ ನೀಡಿಲ್ಲವಾದರೂ, ಇದೇ ದಿನಾಂಕದಲ್ಲಿ ಹೊಸ iPhone 17e ಅನಾವರಣವಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಒಟ್ಟಾರೆಯಾಗಿ, iPhone 17e ಕಾರ್ಯಕ್ಷಮತೆ, ನೆಟ್‌ವರ್ಕ್ ವೇಗ ಮತ್ತು ಚಾರ್ಜಿಂಗ್ ತಂತ್ರಜ್ಞಾನದಲ್ಲಿ ಮಹತ್ವದ ಸುಧಾರಣೆಗಳನ್ನು ತರುವ ನಿರೀಕ್ಷೆಯಿದೆ. ವಿಶೇಷವಾಗಿ ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡರೆ, ಈ ಫೋನ್ ಬೆಲೆ ಮತ್ತು ವೈಶಿಷ್ಟ್ಯಗಳ ಸಮತೋಲನದೊಂದಿಗೆ ಮಧ್ಯಮ ಸೆಗ್ಮೆಂಟ್‌ನಲ್ಲಿನ ಬಲಿಷ್ಠ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿರಿ

Best Mobiles in India

English summary
Apple is reportedly preparing to launch the iPhone 17e in early 2026, possibly as soon as February. According to Bloomberg’s Mark Gurman, the device will focus on emerging markets like India and enterprise users, with pricing expected around the affordable mid-range segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+