ಯಾರೂ ಊಹಿಸಲಾಗದಷ್ಟು ಬೆಲೆ ಕಳೆದುಕೊಂಡಿದೆ 'ನೋಕಿಯಾ 6.1 ಪ್ಲಸ್'!

|

ಇದೇ ಆಗಸ್ಟ್ 8 ರಿಂದ ಅಮೆಜಾನ್ ಆಯೋಜಿಸಿರುವ ಭರ್ಜರಿ ಮಾರಾಟ ಮೇಳದಲ್ಲಿ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನ್ ಊಹಿಸಲಾಗದಷ್ಟು ಬೆಲೆ ಕಳೆದುಕೊಂಡಿದೆ. ಭಾರತದಲ್ಲೇ ಅತಿ ಹೆಚ್ಚು ಮಾರಾಟವಾಗುತ್ತಿರುವ ನೋಕಿಯಾ ಕಂಪೆನಿ ಸ್ಮಾರ್ಟ್‌ಪೋನ್ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ ಇದೀಗ ಕೇವಲ 10,999 ರೂಪಾಯಿಗಳಿಗೆ ಮಾರಾಟಕ್ಕಿದೆ. ಅದು ಕೂಡ 6GB RAM ಮತ್ತು 64ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯದ ಫೋನ್!

ಯಾರೂ ಊಹಿಸಲಾಗದಷ್ಟು ಬೆಲೆ ಕಳೆದುಕೊಂಡಿದೆ 'ನೋಕಿಯಾ 6.1 ಪ್ಲಸ್'!

ಹೌದು, ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್ ಎಂದು ಕರೆಸಿಕೊಡಿರುವ ನೋಕಿಯಾ 6.1 ಪ್ಲಸ್ (6GB RAM ಮತ್ತು 64ಜಿಬಿ ಆಂತರಿಕ ಸಾಮರ್ಥ್ಯ) ಸ್ಮಾರ್ಟ್‌ಪೋನ್ ಅನ್ನು ಅಮೆಜಾನ್ ತಾಣದಲ್ಲಿ ಕೇವಲ 10,999 ರೂಪಾಯಿಗಳಿಗೆ ಮಾರಾಟಕ್ಕೆ ಇಡಲಾಗಿದೆ. ಇದರ ಮೇಲೆ 10 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಸಹ ದೊರೆಯುತ್ತಿರುವುದರಿಂದ, 6GB RAM ಸಾಮರ್ಥ್ಯದ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನ್ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಮೊಬೈಲ್ ಪ್ರಿಯರ ಕೈಸೇರುತ್ತಿದೆ.

ಯಾರೂ ಊಹಿಸಲಾಗದಷ್ಟು ಬೆಲೆ ಕಳೆದುಕೊಂಡಿದೆ 'ನೋಕಿಯಾ 6.1 ಪ್ಲಸ್'!

ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಎಲ್ಲಾ ಫೀಚರ್ಸ್‌ಗಳಲ್ಲಿಯೂ ಒಂದು ಕೈ ಮುಂದಾಗಿರುವ 'ನೋಕಿಯಾ 6.1 ಪ್ಲಸ್'' ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಹವಾ ಎಬ್ಬಿಸಿದೆ. ಇದೀಗ ಕೇವಲ 10,999 ರೂಪಾಯಿಗಳಿಗೆ ಲಭ್ಯವಿರುವ ಈ ಡ್ಯುಯಲ್ ಕ್ಯಾಮೆರಾ ಫೋನ್ ಇಂದಿನ ಹಾಟ್‌ ಫೇವರೇಟ್ ಸ್ಮಾರ್ಟ್‌ಫೋನ್ ಎನ್ನಬಹುದು. ಹಾಗಾದರೆ, 'ನೋಕಿಯಾ 6.1 ಪ್ಲಸ್'' ಸ್ಮಾರ್ಟ್‌ಫೋನ್ ಹೊಂದಿರುವ ವಿಶೇಷ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಮತ್ತು ಡಿಸೈನ್!

ಡಿಸ್‌ಪ್ಲೇ ಮತ್ತು ಡಿಸೈನ್!

ಅತ್ಯಾಕರ್ಷಕ ವಿನ್ಯಾಸದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿರುವ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ 19: 9 ಆಕಾರ ಅನುಪಾತದ 5.84 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. 1080 x 2280 ಸಾಮರ್ಥ್ಯದ ಡಿಸ್‌ಪ್ಲೇ ಇದಾಗಿದೆ. ಇನ್ನು ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಐಫೋನ್ 10 ಮಾದರಿಯ ನೋಚ್ ಡಿಸ್‌ಪ್ಲೇಯನ್ನು ಹೊಂದಿದೆ.

ಕ್ಯಾಮೆರಾ ಸಾಮರ್ಥ್ಯ

ಕ್ಯಾಮೆರಾ ಸಾಮರ್ಥ್ಯ

ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದು, ಎಫ್ / 2.0 ಅಪಾರ್ಚರ್ ಮತ್ತು 1-ಮೈಕ್ರಾನ್ ಪಿಕ್ಸೆಲ್ಗಳಲ್ಲಿ 16-ಮೆಗಾಪಿಕ್ಸೆಲ್ ಮತ್ತು 5-ಮೆಗಾಪಿಕ್ಸೆಲ್ ಮೊನೊಕ್ರೋಮ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 2.0 ಅಪಾರ್ಚರ್ ಮತ್ತು 1ಮೈಕ್ರಾನ್ ಪಿಕ್ಸೆಲ್ ಸೆನ್ಸಾರ್‌ನೊಂದಿಗೆ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಸ್ಮಾರ್ಟ್‌ಫೋನಿನಲ್ಲಿ ನೋಡಬಹುದಾಗಿದೆ.

ಬ್ಯಾಟರಿ ಸಾಮರ್ಥ್ಯ ಎಷ್ಟು?

ಬ್ಯಾಟರಿ ಸಾಮರ್ಥ್ಯ ಎಷ್ಟು?

ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ 3060mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಅಲ್ಲದೇ, ಸ್ಮಾರ್ಟ್‌ಫೋನ್‌ 18W ಚಾರ್ಜರ್ ಸಹಾಯದಿಂದ ಕೇವಲ 30 ನಿಮಿಷಗಳಲ್ಲಿ 50 ಪರ್ಸೆಂಟ್ ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು 3.5MM ಹೆಡ್‌ಪೋನ್ ಜಾಕ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

4G ವೋಲ್ಟ್, ಬ್ಲೂಟೂತ್ V5.0, 2.3 ಕರ್ವರ್ ಗ್ಲಾಸ್ 3 ಸ್ಕ್ರೀನ್ ಪ್ರೊಟೆಕ್ಷನ್ ಹೊಂದಿರುವ ಸ್ಮಾರ್ಟ್‌ಫೋನ್, ಅಕ್ಸೆಲೆರೊಮೀಟರ್, ಸುತ್ತುವರಿದ ಬೆಳಕಿನ ಸಂವೇದಕ, ಡಿಜಿಟಲ್ ದಿಕ್ಸೂಚಿ, ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕಗಳನ್ನು ಹೊಂದಿದೆ. ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಫೇಸ್‌ಲಾಕ್ ಫೀಚರ್ ಅನ್ನು ಒಳಗೊಂಡಿರುವುದು ವಿಶೇಷತೆಯಾಗಿದೆ.

Best Mobiles in India

English summary
To give you a quick walkthrough, Nokia 6.1 Plus packs a Snapdragon 636 Octa-Core CPU, 4GB of primary memory and 64GB of internal storage. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X