Subscribe to Gizbot

ಎಲ್ಲಾ ರೀತಿಯಲ್ಲಿ ಆಕರ್ಷಕವಾಗಿದೆ ಈ ಮ್ಯಾಕ್ಸ್ ಫೋನ್

Posted By:
ಎಲ್ಲಾ ರೀತಿಯಲ್ಲಿ ಆಕರ್ಷಕವಾಗಿದೆ ಈ ಮ್ಯಾಕ್ಸ್ ಫೋನ್
ಮ್ಯಾಕ್ಸ್ ಮೊಬೈಲ್ ಅನೇಕ ಮಲ್ಟಿ ಮೀಡಿಯಾ ಹ್ಯಾಂಡ್ ಸೆಟ್ ಗಳನ್ನು ಮಾರುಕಟ್ಟೆಗೆ ಈಗಾಗಲೆ ಪರಿಚಯಿಸಿದೆ. ಇದರ ಪ್ರಮುಖ ಗುಣವೊಂದು ಇದನ್ನುಇತರ ಮೊಬೈಲ್ ಗಳಿಗಿಂತ ಭಿನ್ನವಾಗಿಸುತ್ತದೆ. ಆ ಗುಣ ಮತ್ತಾವುದು ಅಲ್ಲ ಇದರ ಬೆಲೆಯಾಗಿದೆ.

ಇದೀಗ ಮ್ಯಾಕ್ಸ್ ತನ್ನ ಮತ್ತೊಂದು ಮಲ್ಟಿ ಮೀಡಿಯಾ ಫೋನ್ ಪರಿಚಯಿಸಿದ್ದು ಇದನ್ನು ಪ್ರೈಮೊ MX428 ಎಂದು ಕರೆಯಲಾಗಿದೆ. ಇದರ ಬ್ಯಾಟರಿಯ ಜೀವಿತಾವಧಿ ಅತ್ಯುತ್ತಮವಾಗಿದ್ದು ಇದರಲ್ಲಿ ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಕಾಣಬಹುದು.

* ಅಧಿಕ ಬ್ಯಾಟರಿ ಸಾಮರ್ಥ್ಯ

* 39 ದಿನದ ಸ್ಷ್ಯಾಂಡ್ ಬೈ ಟೈಮ್

* TFT ಸ್ಕ್ರೀನ್

* 1.3 ಮೆಗಾ ಪಿಕ್ಸಲ್ ಕ್ಯಾಮೆರಾ

* ಇಂಟಿಗ್ರೇಟಡ್ ಫ್ಲಾಷ್

* ಕಿಂಗ್ ಮೂವಿ ಪ್ಲೇಯರ್

* ದೊಡ್ಡ ಸ್ಪೀಕರ್

* GPRS

* FM ರೇಡಿಯೊ

* ಬ್ಲೂಟೂಥ್

* USB

* ಮೆಮೊರಿ 4GB ಇದ್ದು 8GBವರೆಗೆ ವಿಸ್ತರಿಸಬಹುದಾಗಿದೆ

ಕಪ್ಪು ಮತ್ತು ಚಿನ್ನದ ಬಣ್ಣದ ಮೊಬೈಲ್ ನೋಡಲು ಆಕರ್ಷಕವಾಗಿದ್ದು ಉತ್ತಮವಾದ ಗುಣಮಟ್ಟವನ್ನು ಹೊಂದಿದೆ. ಈ ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ರು. 2, 100 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot