3GB RAM ಇರುವ ಮೀಜು ಎಂ 5 ಫೋನ್, ಶಿಯೋಮಿ ನೋಟ್ 4ಗೆ ಸ್ಪರ್ಧಿ..!!
ಮೀಜು ಕಂಪನಿಯ ಹೊಸ ಪರಿಚಯ ಮೀಜು ಎಂ 5.
ಸದ್ಯ ದೇಶಿಯಾ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳ ಆರ್ಭಟವು ಜಾಸ್ತಿಯಾಗಿದ್ದು, ಇದೇ ಲೆಕ್ಕಕ್ಕೆ ಮತ್ತೊಂದು ಫೋನ್ ಸೇರಿಕೊಳ್ಳುತ್ತಿದೆ ಮೀಜು ಕಂಪನಿಯ ಹೊಸ ಪರಿಚಯ ಮೀಜು ಎಂ 5. ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಪ್ರಬಲ ಸ್ಪರ್ಧೆಯನ್ನು ಈ ಫೋನ್ ನೀಡಲಿದೆ ಎನ್ನಲಾಗಿದೆ.

ಮೊದಲು ಚೀನಾ ಮಾರುಕಟ್ಟೆಯಲ್ಲಿ ಪರಿಚಯಗೊಂಡಿದ್ದ ಮೀಜು ಎಂ 5 ಸದ್ಯ ಭಾರತ ಹಾಗೂ ಇನ್ನಿತ್ತರೇ ದೇಶಗಳಲ್ಲಿ ಮಾರಾಟವನ್ನು ಆರಂಭಿಸಲಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಮಧ್ಯಮ ಬೆಲೆಯ ಫೋನ್‌ಗಳು ಹೆಚ್ಚಾಗಿದ್ದು, ಈ ಫೋನ್ ಸಹ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ.

5.2 ಇಂಚಿನ HD ಡಿಸ್‌ಪ್ಲೇ:
ಮೀಜು ಎಂ 5 ಸ್ಮಾರ್ಟ್‌ಫೋನಿನಲ್ಲಿ 5.2 ಇಂಚಿನ HD ಡಿಸ್‌ಪ್ಲೇ ಅಳವಡಿಸಲಾಗಿದ್ದು, 2.5D ಗ್ಲಾಸ್ ಇದರ ಮೇಲಿದೆ. ಅಲ್ಲದೇ ಮೇಟಲ್ ಬಾಡಿ ಇದರದ್ದಾಗಿದೆ.

3GB RAM:
ವೇಗದ ಕಾರ್ಯಚರಣೆಗಾಗಿ ಈ ಫೋನಿನಲ್ಲಿ 3GB RAM ನೀಡಲಾಗಿದ್ದು, ಇದರೊಂದಿಗೆ ಆಕ್ಟಾಕೋರ್ ಮಿಡಿಯಾಟೆಕ್ ಪ್ರೋಸೆಸರ್ ಸಹ ಇದ್ದು, 32GB ಇಂಟರ್ನಲ್ ಮೆಮೋರಿ ಸಹ ಈ ಫೋನಿನಲ್ಲಿದ್ದು, ಅಲ್ಲದೇ ಮೈಕ್ರೋ ಎಸ್‌ಡಿ ಕಾರ್ಡಿನ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

13 MP/5 MP ಕ್ಯಾಮೆರಾ:
ಇದಲ್ಲದೇ ಈ ಫೋನ್ ಫೋಟೋಗ್ರಫಿಗೆ ಹೇಳಿ ಮಾಡಿಸಿದಂತೆ. ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ನೀಡಲಾಗಿದ್ದು ಜೊತೆಗೆ LED ಫ್ಲಾಷ್ ಸಹ ಇದೆ. ಇದೇ ಮಾದರಿಯಲ್ಲಿ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಇತರೇ ವಿಶೇಷತೆಗಳು:
4G VoLTE ಸಪೋರ್ಟ್ ಮಾಡುವ ಈ ಫೋನಿನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇದೇ. ಅಲ್ಲದೇ 3,070 mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಡ್ಯುಯಲ್ ಸಿಮ್, ವೈ-ಫೈ, ಬ್ಲೂಟೂಟ್ 4.0 ಹಾಗೂ ಹಲವಾರು ಆಯ್ಕೆಗಳನ್ನು ನೀಡಲಾಗಿದೆ.


Click it and Unblock the Notifications