ಶಿಯೋಮಿಗೆ ನಡುಕ : ಮಾರುಕಟ್ಟೆಗೆ ಬಂದಿದೆ ಮತ್ತೊಂದು ಬಜೆಟ್ ಫೋನ್..!
ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಲಾಂಚ್ ಆಗಲು ಶುರುವಾಗಿದೆ. ಈಗಾಗಲೇ ಹಲವು ಬಜೆಟ್ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿರುವ ಮಿಜು ಸದ್ಯ ಹೊಸದೊಂದು ಫೋನ್ ಅನ್ನು ಬಿಡುಗಡೆ ಮಾಡಿದೆ. ಮಿಜು M6 ಸ್ಮಾರ್ಟ್ ಫೋನ್ ಸದ್ಯ ಮಾರುಕಟ್ಟೆಯಲ್ಲಿ ಕಾಣಿಸಿಕೊಮಡಿರುವ ಹೊಸ ಸ್ಮಾರ್ಟ್ ಫೋನ್ ಆಗಿದ್ದು, ರೂ. 7699 ಕ್ಕೆ ಮಾರಾಟವಾಗುತ್ತಿದೆ.

ಅಮೆಜಾನ್ ನಲ್ಲಿ ಮಾರಾಟವಾಗುತ್ತಿರುವ ಮಿಜು M6 ಸ್ಮಾರ್ಟ್ ಫೋನ್, ಆರು ತಿಂಗಳ ಹಿಂದಯೇ ಚೀನಾ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿತ್ತು. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅದರಲ್ಲಿಯೂ ಬಜೆಟ್ ವಿಭಾಗದಲ್ಲಿ ಮಿಜು M6 ಸ್ಮಾರ್ಟ್ ಫೋನ್ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಳ್ಳಲಿದೆ ಎನ್ನುವ ಮಾತು ಕೇಳಿ ಬಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಶಿಯೋಮಿ ಫೋನ್ ಗಳಿಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.

ಎರಡು ಆವೃತ್ತಿಯಲ್ಲಿ ಲಭ್ಯ
ಮಿಜು M6 ಸ್ಮಾರ್ಟ್ ಫೋನಿನಲ್ಲಿ ನೀವು ವೇಗದ ಕಾರ್ಯಚರಣೆಗಾಗಿ ಮೀಡಿಯಾ ಟೆಕ್ MT 6750 ಚಿಪ್ ಸೆಟ್ ಅಳವಡಿಆಳಗಿದ್ದು, 2 GB RAM ಮತ್ತು 3 GB RAM ಆವೃತ್ತಿಯಲ್ಲಿ ದೊರೆಯಲಿದೆ. ಇದರೊಂದಿಗೆ 16 GB ಮತ್ತು 32 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದಲ್ಲದೇ 128 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

5.2 ಇಂಚಿನ ಡಿಸ್ ಪ್ಲೇ
ಮಿಜು M6 ಸ್ಮಾರ್ಟ್ ಫೋನಿನಲ್ಲಿ 5.2 ಇಂಚಿನ ಡಿಸ್ ಪ್ಲೇಯನ್ನು ನೀಡಲಾಗಿದೆ. ಆದರೆ ಇದು 16:9 ಅನುಪಾತದ ಡಿಸ್ ಪ್ಲೇ ಎನ್ನುವುದೇ ಕೊರತೆ ಎನ್ನಬಹುದಾಗಿದೆ. ಅಲ್ಲದೇ ಇದು HD ಗುಣಮಟ್ಟವನ್ನು ಹೊಂದಿದೆ. ಬಜೆಟ್ ಸ್ಮಾರ್ಟ್ ಫೋನಿನಲ್ಲಿ ಇರಬೇಕಾದ ಡಿಸ್ ಪ್ಲೇ ಇದಾಗಿದೆ. ಮುಂಭಾಗದಲ್ಲಿಯೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ.

ಕ್ಯಾಮೆರಾ
ಮಿಜು M6 ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಗುಣಮಟ್ಟದ ಫೋಟೋವನ್ನು ಕ್ಲಿಕ್ ಮಾಡಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೇ ಹಿಂಭಾಗ ಮತ್ತು ಮುಂಭಾಗದಲ್ಲಿ LED ಪ್ಲಾಷ್ ಲೈಟ್ ಅನ್ನು ಕಾಣಬಹುದಾಗಿದೆ.

ಆಂಡ್ರಾಯ್ಡ್ ನ್ಯಾಗ
ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಆಂಡ್ರಾಯ್ಡ್ ನ್ಯಾಗಾದಲ್ಲಿ ಮಿಜು M6 ಸ್ಮಾರ್ಟ್ ಫೋನ್, ಸುಲಭದ ಬಳಕೆಗೆ ಸಹಾಯವನ್ನು ಮಾಡಲಿದೆ. ಇದರಿಂದಾಗಿ ಹೆಚ್ಚಿನ ಆಪ್ ಗಳನ್ನು ಬಳಕೆ ಮಾಡುವುದಲ್ಲದೇ, ಬ್ಯಾಟರಿ ಬಾಳಿಕೆಯೂ ಉತ್ತಮವಾಗಿರಲಿದೆ. ಜೊತೆಗೆ ಫೈಮಿ UI 6.0ವನ್ನು ಕಾಣಬಹುದಾಗಿದೆ.

ಬ್ಯಾಟರಿ
ಮಿಜು M6 ಸ್ಮಾರ್ಟ್ ಫೋನ್ ಉತ್ತಮ ಬ್ಯಾಕಪ್ ಹೊಂದಿದ್ದು, ಇದಕ್ಕಾಗಿ 3070mAh ಬ್ಯಾಟರಿಯನ್ನು ಹೊಂದಿದ್ದು, ಕಂಪನಿಯೂ ಹೇಳಿರುವಂತೆ ಈ ಬ್ಯಾಟರಿ ಒಂದುವರೆ ದಿನಗಳ ಕಾಲ ಬ್ಯಾಕಪ್ ಅನ್ನು ಹೊಂದಿದೆ. ಇದಲ್ಲದೇ 4G VoLTE ಸಪೋರ್ಟ್ ಮಾಡಲಿದ್ದು, ಜಿಯೋ ಸಿಮ್ ಬಳಕೆ ಮಾಡಬಹುದಾಗಿದೆ.


Click it and Unblock the Notifications