Home
ಮೊಬೈಲ್

ಶಿಯೋಮಿ Mi A2 ಸ್ಮಾರ್ಟ್ ಫೋನ್: ಬಿಡುಗಡೆ ಡೇಟ್ ಫಿಕ್ಸ್....!

By Srinidhi

ಶಿಯೋಮಿ ಮಾರುಕಟ್ಟೆಗೆ ಲಾಂಚ್ ಮಾಡಿದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಆದಂತಹ Mi A1 ಸ್ಮಾರ್ಟ್ ಫೋನಿನ ಯಶಸ್ಸಿನ ನಂತರದಲ್ಲಿ ಶಿಯೋಮಿ, ಮುಂದುವರೆದ ಭಾಗವಾಗಿ ಹೊಸದೊಂದು ಸ್ಮಾರ್ಟ್ ಫೋನ್ ಅನ್ನು ಲಾಂಚ ಮಾಡಲು ಮುಂದಾಗಿದ್ದು, M1 A2 ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದೆ. ಈ ಸ್ಮಾರ್ಟ್ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಹವಾ ಎಬ್ಬಿಸಿದೆ.

ಶಿಯೋಮಿ Mi A2 ಸ್ಮಾರ್ಟ್ ಫೋನ್: ಬಿಡುಗಡೆ ಡೇಟ್ ಫಿಕ್ಸ್....!

ಈ ಸ್ಮಾರ್ಟ್ ಫೋನ್ ಮೊದಲಿಗೆ ಸ್ಪೇನ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಇದಾದ ನಂತರದಲ್ಲಿ ಬೇರೆ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ. M1 A2 ಸ್ಮಾರ್ಟ್ ಫೋನ್ ಮಾದರಿಯಲ್ಲಿಯೇ ಬೇರೆ ಬೇರೆ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದರೂ ಸಹ M1 A2 ಸ್ಮಾರ್ಟ್ ಫೋನ್ ಬೇಡಿಕೆ ಮಾತ್ರವೇ ಹಾಗೆಯೇ ಇದೆ ಎನ್ನಲಾಗಿದೆ.

ಜುಲೈ 25ಕ್ಕೆ ಲಾಂಚ್:

ಜುಲೈ 25ಕ್ಕೆ ಲಾಂಚ್:

M1 A2 ಸ್ಮಾರ್ಟ್ ಫೋನ್ ಜುಲೈ 25 ರಂದು ಸ್ಪೇನ್ ನಲ್ಲಿ ಲಾಂಚ್ ಆಗಲಿದ್ದು, ಮೊದಲಿಗೆ ಅಲ್ಲಿಯೇ ಸೇಲ್ ಆಗಲಿದೆ. ಇದಾದ ನಂತರದಲ್ಲಿ ಬೇರೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿಯೂ ಈ ಸ್ಮಾರ್ಟ್ ಫೋನ್ ಶೀಘ್ರವೇ ಲಾಂಚ್ ಆಗುವ ಸಾಧ್ಯತೆ ದಟ್ಟವಾಗಿದೆ.

ನಾಲ್ಕು ಆವೃತ್ತಿಯಲ್ಲಿ ಮಾರಾಟ:

ನಾಲ್ಕು ಆವೃತ್ತಿಯಲ್ಲಿ ಮಾರಾಟ:

M1 A2 ಸ್ಮಾರ್ಟ್ ಫೋನ್ ಒಟ್ಟು ನಾಲ್ಕು ಆವೃತ್ತಿಯಲ್ಲಿ ಮಾರಾಟವಾಗಲಿದೆ ಎನ್ನಲಾಗಿದ್ದು, 4 GB RAM + 32 GB ಇಂಟರ್ನಲ್ ಮೆಮೊರಿಯೊಂದಿಗೆ, 4 GB + 64 GB ಇಂಟರ್ನಲ್ ಮೆಮೊರಿಯೊಂದಿಗೆ ಮತ್ತೊಂದು ಆವೃತ್ತಿ, 4 GB RAM + 128 GB ಇಂಟರ್ನಲ್ ಮೆಮೊರಿಯೊಂದಿಗೆ ಹಾಗೂ 6 GB RAM + 128 GB ಇಂಟರ್ನಲ್ ಮೆಮೊರಿಯೊಂದಿಗೆ ಮತ್ತೊಂದು ಆವೃತ್ತಿಯೂ ಲಾಂಚ್ ಆಗಿದೆ ಎನ್ನಲಾಗಿದೆ.

M1 A2 ಸ್ಮಾರ್ಟ್ ಫೋನ್ ವಿಶೇಷತೆ:

M1 A2 ಸ್ಮಾರ್ಟ್ ಫೋನ್ ವಿಶೇಷತೆ:

M1 A2 ಸ್ಮಾರ್ಟ್ ಫೋನ್ ಸ್ಮಾರ್ಟ್ ಫೋನ್ 5.99 ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, FHD + ಗುಣಮಟ್ಟವನ್ನು ಹೊಂದಿದೆ. ಇದಲ್ಲದೇ 2.5D ಕರ್ವಡ್ ಗ್ಲಾಸ್ ವಿನ್ಯಾಸದಿಂದ ಕೂಡಿದೆ. ಅಲ್ಲದೇ 18:9 ಅನುಪಾತದಿಂದ ಕೂಡಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಸ್ಮಾರ್ಟ್ ಫೋನ್ ಗೇಮ್ ಮತ್ತು ವಿಡಿಯೋ ನೋಡಲು ಉತ್ತಮವಾಗಿರಲಿದೆ ಎನ್ನಲಾಗಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

M1 A2 ಸ್ಮಾರ್ಟ್ ಫೋನ್ ನಿನಲ್ಲಿ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಅನ್ನು ನೀಡಲಾಗಿದ್ದು, 2.2 GHz ವೇಗದ ಪ್ರೋಸೆಸರ್ ಅನ್ನು ನೀಡಲಾಗಿದೆ. ಇದಲ್ಲದೇ ಆಡ್ರಿನೋ 512 GPU ವನ್ನು ನೀಡಲಾಗಿದ್ದು, ಇದು ಹೆಚ್ಚಿನ ಗ್ರಾಫಿಕ್ಸ್ ಅನ್ನು ಪ್ಲೇ ಮಾಡಲು ಸಹಾಯ ಮಾಡಲಿದೆ. ಇದಲ್ಲದೇ ಗೇಮ್ ಗಳನ್ನು ಆಡಲು ಹೇಳಿ ಮಾಡಿಸಿದಂತೆ ಇದೆ.

ಸ್ಟಾಕ್ ಆಂಡ್ರಾಯ್ಡ್:

ಸ್ಟಾಕ್ ಆಂಡ್ರಾಯ್ಡ್:

M1 A2 ಸ್ಮಾರ್ಟ್ ಫೋನ್ ಸ್ಮಾರ್ಟ್ ಫೋನಿನಲ್ಲಿ ಸ್ಟಾಕ್ ಆಂಡ್ರಾಯ್ಡ್ ಬಳಕೆಗೆ ದೊರೆಯಲಿದೆ. ಇದಲ್ಲದೇ ಆಂಡ್ರಾಯ್ಡ್ 8.1 ಒರಿಯೋವನ್ನು ಕಾಣಬಹುದಾಗಿದೆ. ಇದಲ್ಲದೇ ಹೆಚ್ಚು ಆಪ್ ಡೇಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಶಿಯೋಮಿಯೊಂದಿಗೆ ಸ್ಟಾಕ್ ಆಂಡ್ರಾಯ್ಡ್ ಸೇರಿಕೊಂಡು ಉತ್ತಮ ಅನುಭವನ್ನು ನೀಡಲಿದೆ.

Best Mobiles in India

English summary
Mi A2 Colour, Storage Variants Leaked ahead of July 25 Launch in Spain. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+