ಶಿಯೋಮಿ MI A2 ಸ್ಮಾರ್ಟ್‌ಫೋನ್ ಖರೀದಿಸಲು ಕಾಯುತ್ತಿರುವವರಿಗೆ ಸಿಹಿ ಸುದ್ದಿ...!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಶಿಯೀಮಿ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ ಇದೇ ಜುಲೈ 24ರಂದು ಶಿಯೋಮಿ MI A2 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದ್ದು, ಇದರೊಂದಿಗೆ ಶಿಯೋಮಿ MI A2 ಲೈಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಈಗಾಗಲೇ ಶಿಯೋಮಿ MI A2 ಸ್ಮಾರ್ಟ್‌ಫೋನ್ ಕುರಿತು ಸಾಕಷ್ಟು ನಿರೀಕ್ಷೆ ಮಾರುಕಟ್ಟೆಯಲ್ಲಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಒಟ್ಟು ಎರಡು ಆವೃತ್ತಿಯಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ. ಶಿಯೋಮಿ MI A2 ಸ್ಮಾರ್ಟ್‌ಫೋನ್ ಮತ್ತು ಶಿಯೋಮಿ MI A2 ಲೈಟ್ ಸ್ಮಾರ್ಟ್‌ಫೋನ್ ಗಳು ಹೊಸ ಸಾಧ್ಯತೆಯನ್ನು ಮಾರುಕಟ್ಟೆಯಲ್ಲಿ ತೋರಿಸಿಕೊಡಲಿದೆ.

ಆಂಡ್ರಾಯ್ಡ್ ಒನ್ ಆವೃತ್ತಿ:
ಈ ಹಿಂದೆ ಶಿಯೋಮಿ MI A 1 ಸ್ಮಾರ್ಟ್‌ಫೋನ್ ಸಹ ಆಂಡ್ರಾಯ್ಡ್ ಒನ್ ಕಾರ್ಯಚರಣೆಯನ್ನು ಹೊಂದಿತ್ತು. ಇದಾದ ನಂತರದಲ್ಲಿ ಬೇಡಿಕೆಯ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ಶಿಯೋಮಿ MI A2 ಸ್ಮಾರ್ಟ್‌ಫೋನ್ ಬಿಡುಗಡೆ ಮುಂದಾಗಿದೆ. ಇದು ಸಹ ಆಂಡ್ರಾಯ್ಡ್ ಒನ್ ನಲ್ಲಿಯೇ ಕಾರ್ತನಿರ್ವಹಿಸಲಿದೆ. ಇದರೊಂದಿಗೆ ಶಿಯೋಮಿ MI A2 ಲೈಟ್ ಸ್ಮಾರ್ಟ್‌ಫೋನ್ ಸಹ ಇದೆ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.

ಡಿಸ್‌ಪ್ಲೇ:
ಶಿಯೋಮಿ MI A2 ಲೈಟ್ ಸ್ಮಾರ್ಟ್‌ಫೋನಿನಲ್ಲಿ 5.84 ಇಂಚಿನ FHD+ ಗುಣಮಟ್ಟದ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 19:9 ಅನುಪಾತದ ವಿನ್ಯಾಸವನ್ನು ಇದು ಹೊಂದಿದ್ದು, ವಿಡಿಯೋ ನೋಡಲು ಮತ್ತು ಗೇಮ್ ಆಡುವ ಸಂದರ್ಭದಲ್ಲಿ ಬಳಕೆದಾರರಿಗೆ ಇದು ಉತ್ತಮ ಅನುಭವವನ್ನು ನೀಡಲಿದೆ.

ವೇಗದ ಪ್ರೊಸೆಸರ್:
ಶಿಯೋಮಿ MI A2 ಲೈಟ್ ಸ್ಮಾರ್ಟ್ ಫೋನಿನಲ್ಲಿ ವೇಗದ ಕಾರ್ಯಚರಣೆ ಗಾಗಿ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಆಡ್ರಿನೋ 506 GPU ವನ್ನು ನೀಡಲಾಗಿದೆ. ಇದು ಹೆಚ್ಚಿನ ಗ್ರಾಫಿಕ್ಸ್ ಇರುವ ಗೇಮ್ಸ್ ಆಡಲು ಹೇಳಿಮಾಡಿಸಿದ ಹಾಗೆ ಇದೆ. ಇದರೊಂದಿಗೆ 4 GB RAM ಅನ್ನು ಮತ್ತು 64 GB ಇಂಟರ್ನಲ್ ಮೆಮೊರಿ ಯನ್ನು ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ:
ಶಿಯೋಮಿ MI A2 ಲೈಟ್ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಕೃತಕ ಬುದ್ದಿಮತ್ತೆಯ ಸಹಾಯದಿಂದ ಕಾರ್ಯನಿರ್ಹಿಸುವ ಡ್ಯುಯಲ್ ಕ್ಯಾಮರಾ ವನ್ನು ನೀಡಲಾಗಿದೆ. 12 MP + 5 MP
ಕ್ಯಾಮೆರಾ ಸುಂದರವಾದ ಫೋಟೋ ಗಳನ್ನು ಕ್ಲಿಕ್ ಮಾಡಲು ಸಹಾಯವನ್ನು ಮಾಡಲಿದೆ. ಇದಲ್ಲದೆ ಮುಂಭಾಗದಲ್ಲಿ ಸೆಲ್ಫಿಗಾಗಿ 5 MP ಕ್ಯಾಮೆರಾವನ್ನು ಕಾಣಬಹುದಾಗಿದೆ.

ಜುಲೈ 24ಕ್ಕೆ ಲಾಂಚ್
ಶಿಯೋಮಿ MI A2 ಸ್ಮಾರ್ಟ್‌ಫೋನ್ ಮತ್ತು ಶಿಯೋಮಿ MI A2 ಲೈಟ್ ಸ್ಮಾರ್ಟ್‌ಫೋನ್ ಜುಲೈ 24ಕ್ಕೆ ಲಾಂಚ್ ಆಗಲಿದೆ. ಮೊದಲಿಗೆ ವಿದೇಶಿ ಮಾರುಕಟ್ಟೆ ಯಲ್ಲಿ ಲಾಂಚ್ ಆಗಲಿದ್ದು, ಇದಾದ ನಂತರದಲ್ಲಿ ಭಾರತೀಯ ಮಾರುಕಟ್ಟೆ ಯನ್ನು ಪ್ರವೇಶಿಸಲಿದೆ.


Click it and Unblock the Notifications






