Subscribe to Gizbot

ಮತ್ತೊಂದು ಶಿಯೋಮಿ ನೋಟ್ 4 ಬ್ಲಾಸ್ಟ್: ಚಾರ್ಜ್ ಸರಿಯಾಗಿ ಮಾಡಿ..!

Written By:

ದಿನಕ್ಕೊಂದು ಶಿಯೋಮಿ ಫೋನ್‌ಗಳು ಬ್ಲಾಸ್ಟ್ ಆಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ. ಇದೇ ಮಾದರಿಯಲ್ಲಿ ಕೊಪ್ಪಳದಲ್ಲಿ ದೇಶದಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ.

ಇದು ಕರ್ನಾಟಕದಲ್ಲಿಯೇ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಬ್ಲಾಸ್ಟ್ ಎರಡನೇ ಪ್ರಕರಣವಾಗಿದ್ದು, ಈ ಹಿಂದೆ ಬೆಂಗಳೂರಿನ ಮಳಿಗೆಯೊಂದರಲ್ಲಿ ಮೊಬೈಲ್ ಫೋನ್ ಖರೀದಿಸಿದ ಸಂದರ್ಭದಲ್ಲಿ ಸಿಮ್‌ ಹಾಕಬೇಕಾದರೆ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗಿದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಮತ್ತೊಂದು ಶಿಯೋಮಿ ನೋಟ್ 4 ಬ್ಲಾಸ್ಟ್: ಚಾರ್ಜ್ ಸರಿಯಾಗಿ ಮಾಡಿ..!

ಊಟ ಮಾಡುವ ವೇಳೆಯಲ್ಲಿ 

ಗಂಗಾವತಿ ತಾಲೂಕಿನ ಗ್ರಾಮದಲ್ಲಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಸ್ಫೋಟಗೊಂಡಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಮನೆಯಲ್ಲಿ ಊಟ ಮಾಡುವ ವೇಳೆಯಲ್ಲಿ ಪಕ್ಕದಲ್ಲಿ ಇಟ್ಟುಕೊಂಡಿದ್ದ ಫೋನ್ ಇದಕ್ಕಿದ್ದ ಹಾಗೆಯೇ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ.

ಹೊಸ ಫೋನ್:

ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಅನ್ನು ಖರೀದಿಸಿ ಇನ್ನು ಮೂರು ತಿಂಗಳು ಆಗಿಲ್ಲ ಎನ್ನಲಾಗಿದ್ದು, ಈ ಸ್ಮಾರ್ಟ್‌ಫೋನ್ ಅನ್ನು ಆನ್ ಲೈನ್ ಮೂಲಕ ಖರೀದಿ ಮಾಡಿದ್ದರು ಎಂದು ಎನ್ನಲಾಗಿದೆ. ಮೊಬೈಲ್ ಬ್ಲಾಸ್ಟ್ ಆಗಲು ಕಾರಣವೇನು ಎಂಬುದು ತಿಳಿದು ಬಂದಿಲ್ಲ.

ಚಾರ್ಜ್ ಮಾಡುವಾಗ ಎಚ್ಚರ..!

ಶಿಯೋಮಿ ಫೋನ್‌ಗಳು ಚಾರ್ಜ್‌ಗೆ ಹಾಕುವ ಸಂದರ್ಭದಲ್ಲಿ ಹೆಚ್ಚು ಬಿಸಿಯಾಗುತ್ತವೆ ಎನ್ನುವ ಮಾತು ಕೇಳಿಬಂದಿದ್ದಾರೆ. ಈ ಹಿನ್ನಲೆಯಲ್ಲಿ ಈ ಫೋನ್‌ಗಳನ್ನು ಅಗತ್ಯಕ್ಕಿಂತ ಹೆಚ್ಚು ಚಾರ್ಜ್ ಮಾಡಿದರೆ ಈ ಮಾದರಿಯಲ್ಲಿ ಬ್ಲಾಸ್ಟ್ ಆಗುವ ಸಾಧ್ಯತೆ ಇರಲಿದೆ ಎನ್ನಲಾಗಿದೆ.

English summary
mi note 4 blast in karnataka, to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot