Subscribe to Gizbot

ಭಾರತದ ಮಾರುಕಟ್ಟೆಯಲ್ಲಿ ಮೈಕ್ರೊಮ್ಯಾಕ್ಸ್‌ A101 ಲಭ್ಯ

Posted By: Staff

ಹೊಸವರ್ಷಕ್ಕೆ ಮೈಕ್ರೊಮ್ಯಾಕ್ಸ್‌ ಕಂಪೆನಿಯ ಪ್ಯಾಬ್ಲೆಟ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮೈಕ್ರೊಮ್ಯಾಕ್ಸ್‌ A101 ಪ್ಯಾಬ್ಲೆಟ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದ್ದು 10,299 ರೂಪಾಯಿ ನೀಡಿ ನೀವು ಖರೀದಿಸಬಹುದು. ಮೈಕ್ರೊಮ್ಯಾಕ್ಸ್‌ A101 ಪ್ಯಾಬ್ಲೆಟ್ ನಲ್ಲಿ ಆಂಡ್ರಾಯ್ಡ್‌ 4.0 ಐಸ್‌ಕ್ರೀಮ್‌ ಸ್ಯಾಂಡ್‌ವಿಚ್‌ ಆಪರೆಟಿಂಗ್‌ ಸಿಸ್ಟಮ್‌ ಹೊಂದಿದೆ.

ಈ ಹಿಂದೆ ಬಿಡುಗಡೆ ಮಾಡಿದ ಮೈಕ್ರೊಮ್ಯಾಕ್ಸ್‌A100 ಮತ್ತು ಮೈಕ್ರೊಮ್ಯಾಕ್ಸ್‌ A101 ಮಧ್ಯೆ ಅಂತಹ ವಿಶೇಷ ಬದಲಾವಣೆ ಇಲ್ಲ. ಆದರೆ ಮೈಕ್ರೊಮ್ಯಾಕ್ಸ್‌A100ನಲ್ಲಿ ಬ್ಯಾಟರಿ 2000 mAh ಇದ್ರೆ ಮೈಕ್ರೊಮ್ಯಾಕ್ಸ್‌ A101ನಲ್ಲಿ ಬ್ಯಾಟರಿ 2100 mAh ಇದೆ. ಹಾಗಾಗಿ ನೀವು ಹೆಚ್ಚು ಕಾಲ ಬಳಕೆ ಮಾಡಬಹುದು. ಇನ್ನು ಆಂತರಿಕ ಸ್ಟೋರೆಜ್ ವಿಷಯಕ್ಕೆ ಬಂದರೆ A100ನಲ್ಲಿ 4 GB ನೀಡಿದ್ರೆ, ಮೈಕ್ರೊಮ್ಯಾಕ್ಸ್‌ A101ನಲ್ಲಿ 2GB ನೀಡಿದ್ದಾರೆ.

 

 

ಭಾರತದ ಮಾರುಕಟ್ಟೆಯಲ್ಲಿ ಮೈಕ್ರೊಮ್ಯಾಕ್ಸ್‌ A101 ಲಭ್ಯ

ಮೈಕ್ರೊಮ್ಯಾಕ್ಸ್‌ A101 ಡ್ಯೂಯಲ್‌ -ಕೋರ್‌ ಪ್ರೊಸೆಸರ್‌, 5 ಇಂಚಿನ WVGA ದರ್ಶಕ, 512MB RAM, 2GB ಆಂತರಿಕ ಮೆಮರಿ , microSD ಕಾರ್ಡ್ ಸ್ಲಾಟ್‌, 2,100 mAh ಬ್ಯಾಟರಿ ಹೊಂದಿದೆ. ಮೈಕ್ರೊಮ್ಯಾಕ್ಸ್‌ A101 GSM ಡ್ಯೂಯಲ್‌ ಸಿಮ್‌ ಹಾಕುವ ವ್ಯವಸ್ಥೆಯಿದ್ದು , ವೈ-ಫೈ, ಬ್ಲೂಟೂತ್‌ ಕನೆಕ್ಟ್‌ ಮಾಡಬಹುದು. ಕ್ಯಾಮೆರಾಕ್ಕೆ ಸಂಬಂಧಿಸಿದಂತೆ ಹಿಂದುಗಡೆ 5 ಮೆಗಾಪಿಕ್ಸಲ್‌ ಕ್ಯಾಮೆರಾ ನೀಡಿದ್ದು, ಎದುರುಗಡೆ 0.3 ಮೆಗಾಪಿಕ್ಸಲ್ ಕ್ಯಾಮೆರಾ ಇದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot