Subscribe to Gizbot

ಮೈಕ್ರೋಮ್ಯಾಕ್ಸ್‌ ಎ110 ಕ್ಯಾನ್ವಾಸ್‌ 2 VS ಎಲ್‌ಜಿ ಆಪ್ಟಿಮಸ್‌ ವಿಯು

Posted By: Vijeth

ಮೈಕ್ರೋಮ್ಯಾಕ್ಸ್‌ ಎ110 ಕ್ಯಾನ್ವಾಸ್‌ 2 VS ಎಲ್‌ಜಿ ಆಪ್ಟಿಮಸ್‌ ವಿಯು

2012 ನೇ ಸಾಲಿನಲ್ಲಿ ಮಾರುಕಟ್ಟೆಗೆ ಸಾಲುಸಾಲಾಗಿ 5-ಇಂಚಿನ ಹಾಗೂ 7-ಇಂಚಿನ ಆಕರ್ಷಕ ಹ್ಯಾಂಡ್‌ಸೆಟ್‌ಗಳು ಬಿಡುಗಡೆಯಾಗಿವೆ. ಅದರಲ್ಲಿಯೂ 5-ಇಂಚಿನ ಫಾಬ್ಲೆಟ್‌ ಎಂದೇ ಕರೆಯಲ್ಪಡುವ ಹ್ಯಾಂಡ್‌ಸೆಟ್‌ಗಳಂತೂ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು, ಈಗಾಗಲೇ ಹಲವಾರು ಸ್ಥಳೀಯ ತಯಾರಕರುಗೂ ಹಾಗೂ ಜಾಗತಿಕ ತಯಾರಕರುಗಳು ಭಾರತಯ ಮಾರುಕಟ್ಟೆಗೆ ತಮ್ಮ ತಮ್ಮ ನೂತನ ಫಾಬ್ಲೆಟ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿವೆ.

ಈ ಸಾಲಿಗೆ ಇತ್ತೀಚೆಗೆ ದಕ್ಷಿಣ ಕೊರಿಯಾ ಮೂಲದ ತಾಂತ್ರಿಕ ಸರಕುಗಳ ತಯಾರಿಕಾ ಸಂಸ್ಥೆಯಾದ ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಭಾರತೀಯ ಮಾರುಕಟ್ಟೆಗೆ ತನ್ನಯ ನೂತನ ಆಪ್ಟಿಮಸ್‌ ವಿಯು ಫಾಬ್ಲೆಟ್‌ಬಿಡುಗಡೆ ಮಾಡಿದೆ. ಇದಕ್ಕೆ ಪ್ರಬಲ ಪೈಪೋಟಿ ಎಂಬಂತೆ ಸ್ಥಳೀಯ ಮೊಬೈಲ್‌ ತಯಾರಿಕಾ ಸಂಸ್ಥೆಯಾದ ಮೈಕ್ರೋಮ್ಯಾಕ್ಸ್‌ ತನ್ನಯ ಎ100 ಕ್ಯಾನ್ವಾಸ್‌ 2 ಬಿಡುಗಡೆ ಮಾಡಿದ್ದು ಗ್ರಾಹಕರು ಬಜೆಟ್‌ ಫಾಬ್ಲೆಟ್‌ ಅಥವಾ ದುಬಾರಿ ಫಾಬ್ಲೆಟ್‌ನ ನಡುವೆ ಯಾವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೋ ಕಾದು ನೋಡಬೇಕಿದೆ.

ಅಂದಹಾಗೆ ನೀವೂ ಕೂಡಾ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಕೊಂಚ ದೊಡ್ಡ ಗಾತ್ರದ ಪರದೆ ಹೊಂದಿರುವ ಫಾಬ್ಲೆಟ್‌ ಖರೀದಿಸ ಬೇಕೆಂದಿದ್ದೀರಾ, ಅದರಲ್ಲಿಯೂ ದುಬಾರಿ ಫಾಬ್ಲೆಟ್‌ ಖರೀದಿಸುವುದೋ ಅಥವಾ ಸ್ಥಳೀಯ ತಯಾರಿಕೆಯ ಅಗ್ಗದ ಬೆಲೆಯಲ್ಲಿನ ಫಾಬ್ಲೆಟ್‌ ಖರೀದಿಸುವುದೋ ಎಂದು ಆಲೋಚಿಸುತ್ತಿದ್ದೀರಾ? ಹಾಗಿದ್ದಲ್ಲಿ ಗಿಜ್ಬಾಟ್‌ ನಿಮಗಾಗಿ ಅಗ್ಗದ ಬೆಲೆಯ ಹಾಗೂ ದುಬಾರಿ ಬೆಲೆಯ ಫಾಬ್ಲೆಟ್‌ಗಳಾದ ಮೈಕ್ರೋಮ್ಯಾಕ್ಸ್‌ ಎ100 ಕ್ಯಾನ್ವಾಸ್‌ 2 ಹಾಗೂ ಎಲ್‌ಜಿ ಕ್ಯಾನ್ವಾಸ್‌ ನಡುವಿನ ಹೋಲಿಕೆಯನ್ನು ತಂದಿದೆ ಒಮ್ಮೆ ಓದಿ ನೋಡಿ.

ತೂಕ ಹಾಗೂ ಸುತ್ತಳತೆ: ಎ110 ಕ್ಯಾನ್ವಾಸ್‌ 2 ಸುತ್ತಳತೆಯ ಕುರಿತಾದ ಮಾಹತಿಯನ್ನು ಸಂಸ್ಥೆ ಈವರೆಗೂ ಬಹಿರಂಗ ಪಡಿಸಿಲ್ಲ್. ಅಂದಹಾಗೆ ಆಪ್ಟಿಮಸ್‌ ವಿಯು 139.6 x 90.4 x 8.5mm ಸುತ್ತಳತೆಯೊಂದಿಗೆ 168 ಗ್ರಾಂ ತೂಕವಿದೆ.

ದರ್ಶಕ: ಎ110 ಕ್ಯಾನ್ವಾಸ್‌ 2 ಹಾಗೂ ಆಪ್ಟಿಮಸ್‌ ವಿಯು ಎರಡೂ ಫಾಬ್ಲೆಟ್‌ಗಳಲ್ಲಿ 5 ಇಂಚಿನ ಉತ್ತಮ ಕ್ಲಾರಿಟಿ ಹೊಂದಿರುವ ಐಪಿಎಸ್‌ ದರ್ಶಕ ನೀಡಲಾಗಿದೆ. ಮೈಕ್ರೋಮ್ಯಾಕ್ಸ್‌ ಕ್ಯಾನ್ವಾಸ್‌ 2 ಬಜೆಟ್‌ ಫಾಬ್ಲೆಟ್‌ ಆದ್ದರಿಂದ ಕೇವಲ 800 x 480 ಪಿಕ್ಸೆಲ್‌ ನೀಡಲಾಗಿದೆ ಹಾಗೂ ಆಪ್ಟಿಮಸ್‌ ವಿಯು ನಲ್ಲಿ ಅತ್ಯುತ್ತಮವಾದ XGA ಐಪಿಎಸ್‌ ದರ್ಶಕ ದೊಂದಿಗೆ 1280 x 768 ಪಿಕ್ಸೆಲ್‌ ಹೊಂದಿದೆ.

ಪ್ರೊಸೆಸರ್‌: ಎ110 ಕ್ಯಾನ್ವಾಸ್‌ 2 ನಲ್ಲಿ 1GHz ಪ್ರೊಸೆಸರ್‌ ಹಾಗೂ ಇಂಟಿಗ್ರೇಟೆಡ್‌ ಜಿಪಿಯು ಹೊಂದಿದ್ದರೆಸ, ಆಪ್ಟಿಮಸ್‌ ವಿಯುನಲ್ಲಿ ಕೊಂಚ ಶಕ್ತಿಶಾಲಿಯಾದ 1.5GHz ಕ್ವಾಡ್‌ಕೋರ್ ಎನ್‌ವಿಡಿಯಾ ಟೆಗ್ರಾ 3 ಪ್ರೊಸೆಸರ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಎರಡೂ ಫಾಬ್ಲೆಟ್‌ಗಳಲ್ಲಿ ಆಂಡ್ರಾಯ್ಡ್‌ 4.0 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಕ್ಯಾಮೆರಾ: ಮೈಕ್ರೋಮ್ಯಾಕ್ಸ್‌ನ ಎ110 ಕ್ಯಾನ್ವಾಸ್‌ 2 ನಲ್ಲಿ ಆಟೋ ಫೋಕಸ್‌ ಹಾಗೂ ಎಲಲಿಡಿ ಫ್ಲಾಷ್‌ನೊಂದಿಗೆ ಹಿಂಬದಿಯ 5ಎಂಪಿ ಕ್ಯಾಮೆರಾ ನೀಡಲಾಗಿದೆ ಹಾಗೂ ಆಪ್ಟಿಮಸ್‌ ವಿಯುನಲ್ಲಿ ಕೊಂಚ ಉತ್ತಮವಾದ 8MP ಕ್ಯಾಮೆರಾ ಹೊಂದಿದೆ. ಅಂದಹಾಗೆ ವಿಡಿಯೋ ಕರೆಗಾಗಿ ಎ110 ಕ್ಯಾನ್ವಾಸ್‌ 2 ನಲ್ಲಿ 0.3ಎಂಪಿ ವಿಜಿಎ ಕ್ಯಾಮೆರಾ ಇದ್ದರೆ ಆಪ್ಟಿಮಸ್‌ ವಿಯುನಲ್ಲಿ 1.3MP ಕ್ಯಾಮೆರಾ ನೀಡಲಾಗಿದೆ.

ಮೆಮೊರಿ:ಕ್ಯಾನ್ವಾಸ್‌ 2 ನಲ್ಲಿ 4ಜಿಬಿ ಆಂತರಿಕ ಮೆಮೊರಿ ಹಾಗೂ 512ಎಂಬಿ RAM ನೀಡಲಾಗಿದೆ. ಮತ್ತೊಂದೆಡೆ ಆಪ್ಟಿಮಸ್‌ ವಿಯು ನಲ್ಲಿ ದೊಡ್ಡ ಪ್ರಮಾಣದ ಅಂದರೆ 32ಜಿಬಿ ಆಂತರಿಕ ಮೆಮೊರಿ ಹಾಗೂ, 1ಜಿಬಿ RAM ಹೊಂದಿದೆ. ಅಂದಹಾಗೆ ಎರಡೂ ಫಾಬ್ಲೆಟ್‌ಗಳಲ್ಲಿ ಮೈಕ್ರೋ ಎಸ್‌ಡಿ ಕಾರ್ಟ್‌ಸ್ಲಾಟ್‌ ನೀಡಲಾಗಿದ್ದು 32ಜಿಬಿ ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ.

ಕನೆಕ್ಟಿವಿಟಿ:ಕ್ಯಾನ್ವಾಸ್‌ 2 ನಲ್ಲಿ 3ಜಿ, ಬ್ಲೂಟೂತ್‌, ಜಿಪಿಎಸ್‌, ಎ-ಜಿಪಿಎಸ್‌ ಹಾಗೂ USB 2.0 ಸೇರಿದಂತೆ ವೈ-ಫೈ ಫೀಚರ್ಸ್‌ ಹೊಂದಿದೆ. ಆದರೆ ಆಪ್ಟಿಮಸ್‌ ವಿಯುನಲ್ಲಿ NFC ಸೇರಿದಂತೆ ಬ್ಲೂಟೂತ್‌ 4.0, ವೈ-ಫೈ 802.11 b/g/n, ಎ-ಜಿಪಿಎಸ್‌ ಹಾಗೂ ಮೈಕ್ರೋ ಯುಎಸ್‌ಬಿ 2.0 ನಂತಹ ಫೀಚರ್ಸ್‌ನಿಂದ ಕೂಡಿದೆ.

ಬ್ಯಾಟರಿ: ಎ110 ಕ್ಯಾನ್ವಾಸ್‌ 2 ನಲ್ಲಿ 2,000 mAh Li-ion ಬ್ಯಾಟರಿ ಇದ್ದು 5 ಗಂಟೆಗಳ ಟಾಕ್‌ಟೈಮ್‌ ಹಾಗೂ 180 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ. ಮತ್ತೊಂದೆಡೆ ಆಪ್ಟಿಮಸ್‌ ವಿಯು ನಲ್ಲಿ 2,080 mAh Li-ion ಬ್ಯಾಟರಿ ನೀಡಲಾಗಿದ್ದು16.54 ಗಂಟೆಗಳ 2ಜಿಸ ಟಾಕ್‌ಟೈಮ್‌ ಹಾಗೂ 14.99 ಗಂಟೆಗಳ 3ಜಿ ಟಾಕ್‌ಟೈಮ್‌ ನೀಡುತ್ತದೆ.

ಬೆಲೆ: ಖರೀದಿಸುವುದಾದರೆ ಮೈಕ್ರೋಮ್ಯಾಕ್ಸ್‌ ಎ110 ಕ್ಯಾನ್ವಾಸ್‌ 2 ರೂ. 10,399 ದರದಲ್ಲಿ ಲಭ್ಯವಿದ್ದರೆ, ಎಲ್‌ಜಿ ಆಪ್ಟಿಮಸ್‌ ವಿಯು ಭಾರತದಲ್ಲಿ ಮೊದಲಿಗೆ ರೂ.34,500 ದರದಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡು ಇದೀಗ ದರ ಇಳಿಕೆ ಕಂಡು ರೂ. 29,999 ದರದಲ್ಲಿ ಲಭ್ಯವಿದ್ದು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸ ಬಹುದಾಗಿದೆ.

Read In English...

ಮೈಕ್ರೋಮಾಕ್ಸ್‌ ಎ90ಎಸ್‌ VS ನೋಕಿಯಾ ಲೂಮಿಯಾ 510

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot