ಮೈಕ್ರೋಮ್ಯಾಕ್ಸ್ ವಾಯ್ಸ್ ರೆಕಗ್ನಿಶನ್ ಫೋನ್ :A50

By Varun
|
ಮೈಕ್ರೋಮ್ಯಾಕ್ಸ್ ವಾಯ್ಸ್ ರೆಕಗ್ನಿಶನ್ ಫೋನ್ :A50

ನಿಮಗೆ ಆಪಲ್ ನ ವಾಯ್ಸ್ ರೆಕಗ್ನಿಶನ್ ತಂತ್ರಾಂಶ "ಸಿರಿ" ಬಗ್ಗೆ ಗೊತ್ತೇ ಇರುತ್ತೆ. ಆಪಲ್ ನ ಐಫೋನುಗಳಿಗೆ ಮಾತ್ರ ಸೀಮಿತವಾಗಿರುವ ಈ ಸಾಫ್ಟ್ವೇರ್ ನಿಂದ ನೀವು ಮಾತಿನ ಮೂಲಕವೇ ಎಸ್.ಎಂ.ಎಸ್ ಕಳಿಸಬಹುದು, ಮೀಟಿಂಗ್ ಶೆಡ್ಯೂಲ್ ತಯಾರಿಸಬಹುದು ಹಾಗು ಕರೆ ಮಾಡಬಹುದು.

ಈಗ ಭಾರತದ ಕಂಪನಿ ಮೈಕ್ರೋಮ್ಯಾಕ್ಸ್ A50 ನಿಂಜಾ ಹೆಸರಿನ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿದ್ದು, ಸಿರಿ ಮಾದರಿಯಲ್ಲೇ ಕೆಲಸ ಮಾಡುವ AISHA (Artificial Intelligence Speech Handset Assistant) ಹೆಸರಿನ ವಾಯ್ಸ್ ರೆಕಗ್ನಿಶನ್ ತಂತ್ರಾಂಶವನ್ನು ಹೊಂದಿದೆ. ಈ AISHA ದ ಮೂಲಕ ಗೂಗಲ್ ಸರ್ಚ್, ಶೇರು ಮಾರುಕಟ್ಟೆ ಮಾಹಿತಿ, ಕರೆ ಮಾಡುವುದು,ಫಿಲಂ ನ ರಿವ್ಯೂ ಕೂಡ ಮಾಡಬಹುದು.

ಈ ನಿಂಜಾ ಸ್ಮಾರ್ಟ್ ಫೋನಿನ ಇತರೆ ಸ್ಪೆಸಿಫಿಕೇಶನ್ ಈ ರೀತಿ ಇದೆ:

  • 7.9 cm ಕೆಪಾಸಿಟಿವ್ ಟಚ್ ಸ್ಕ್ರೀನ್

  • ಆಂಡ್ರಾಯ್ಡ್ 2.3.6 ಜಿಂಜರ್ ಬ್ರೆಡ್ ತಂತ್ರಾಂಶ

  • ಕೃತಕ ಬುದ್ಧಿಮತ್ತೆ ಭಾಷಣ ಹ್ಯಾಂಡ್ಸೆಟ್ ಸಹಾಯಕ (ಅಇಶ)

  • ದ್ವಿ SIM, 3G

  • Wi-Fi, GPRS ಸಂಪರ್ಕ, ಬ್ಲೂಟೂತ್

  • 2.0 ಮೆಗಾ ಪಿಕ್ಸೆಲ್ ಹಿಂದಿನ ಕ್ಯಾಮೆರಾ

  • ಗ್ರಾವಿಟಿ ಸಂವೇದಕ

  • SD ಕಾರ್ಡ್ ಮೂಲಕ 32GB ವರೆಗೆ ವಿಸ್ತರಿಸಬಹುದಾದ ಮೆಮೊರಿ
ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನಿನ ಬೆಲೆ 4,999 ರೂಪಾಯಿ ಮಾತ್ರ.
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X