ಮೈಕ್ರೊ ಮ್ಯಾಕ್ಸ್ ನಿಂದ ಎರಡು ನೂತನ ಆಂಡ್ರಾಯ್ಡ್ ಫೋನ್

By Super
|
ಮೈಕ್ರೊ ಮ್ಯಾಕ್ಸ್ ನಿಂದ ಎರಡು ನೂತನ ಆಂಡ್ರಾಯ್ಡ್ ಫೋನ್

ಆಂಡ್ರಾಯ್ಡ್ ಫೋನ್ ಗಳ ಭರಾಟೆ ಪ್ರಾರಂಭವಾದಾಗಿನಿಂದ ಮೈಕ್ರೊ ಮ್ಯಾಕ್ಸ್ ಮೊಬೈಲ್ ಕಂಪನಿ ಹೆಚ್ಚು ಸುದ್ದಿಯಲ್ಲಿರಲಿಲ್ಲ. ಇದೀಗ ಮೈಕ್ರೊ ಮ್ಯಾಕ್ಸ್ ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಎರಡು ಸ್ಟೈಲಿಶ್ ಹ್ಯಾಂಡ್ ಸೆಟ್ ಗಳನ್ನು ಬಿಡುಗಡೆಮಾಡಲು ಸಜ್ಜಾಗಿದೆ.

ಮೈಕ್ರೊಮ್ಯಾಕ್ಸ್ A85 ಮತ್ತು ಮೈಕ್ರೊಮ್ಯಾಕ್ಸ್ A75 ಎಂಬ ಎರಡು ಮೊಬೈಲ್ ಗಳು ಇನ್ನೇನು ಕೆಲವೇ ದಿನಗಳಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ಸುದ್ದಿ ಮಾಡಲಿವೆ.

ಎರಡೂ ಮೊಬೈಲ್ ಗಳು ಕಪ್ಪು ಬಣ್ಣದಲ್ಲಿ ಲಭ್ಯವಾಗಲಿದೆ. ಮೈಕ್ರೊ ಮ್ಯಾಕ್ಸ್ ಹ್ಯಾಂಡ್ ಸೆಟ್ ಗಳಿಗೆ ಅನೇಕ ದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ಕೈಗೆಟುಕುವ ದರದಲ್ಲಿ ಅನೇಕ ಸೌಲಭ್ಯಗಳನ್ನು ಕೊಡುವುದರಿಂದ ಈ ಹ್ಯಾಂಡ್ ಸೆಟ್ ಗಳು ಹೆಚ್ಚು ಪ್ರಸಿದ್ಧ.

ಮೈಕ್ರೊಮ್ಯಾಕ್ಸ್ A85 ಮೊಬೈಲ್ ಗೂಗಲ್ ಆಂಡ್ರಾಯ್ಡ್ v2.2 ಫ್ರೊಯೊ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. ಇದರೊಂದಿಗೆ NVIDIA ಟೆಗ್ರಾ 2 AP20H ಚಿಪ್ ಸೆಟ್ ಕೂಡ ಇದೆ. 1 GHz ಡ್ಯೂಯಲ್ ಕೋರ್ ಕಾರ್ಟೆಕ್ಸ್-A9 ಪ್ರೊಸೆಸರ್ ಪಡೆದುಕೊಂಡಿದ್ದು, ಗ್ರಾಫಿಕ್ಸ್ ಗಾಗಿ ULP GeForce ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್ ಸೌಲಭ್ಯವಿದೆ.

ಮೈಕ್ರೊಮ್ಯಾಕ್ಸ್ A75 ಮೊಬೈಲ್ ಗೂಗಲ್ ಆಂಡ್ರಾಯ್ಡ್ v2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದ್ದು, 650 MHz ಪ್ರೊಸೆಸರ್ ಪಡೆದುಕೊಂಡಿದೆ. ಈ ಎರಡೂ ಮೊಬೈಲ್ ಗಳ ವಿಶೇಷತೆಯನ್ನು ಮುಂದೆ ತಿಳಿದುಕೊಳ್ಳಿ.

ಮೈಕ್ರೊಮ್ಯಾಕ್ಸ್ A85 ಮೊಬೈಲ್ ವಿಶೇಷತೆ:

* ಜಿಎಸ್ ಎಂ ಹ್ಯಾಂಡ್ ಸೆಟ್

* 118.7 x 60.1 x 13.8 ಎಂಎಂ ಸುತ್ತಳತೆ

* 3.8 ಇಂಚಿನ TFT ಟಚ್ ಸ್ಕ್ರೀನ್ ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್

* 8 ಜಿಬಿ ಆಂತರಿಕ ಮೆಮೊರಿ, 512 ಎಂಬಿ RAM

* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ಪಿಕ್ಸಲ್ ರೆಸೊಲ್ಯೂಷನ್

* VGA ಫ್ರಂಟ್ ಕ್ಯಾಮೆರಾ

* ಮೈಕ್ರೊ USB v2.0 ಪೋರ್ಟ್

ಮೈಕ್ರೊಮ್ಯಾಕ್ಸ್ A75 ಮೊಬೈಲ್ ವಿಶೇಷತೆ:

* ಜಿಎಸ್ ಎಂ ಹ್ಯಾಂಡ್ ಸೆಟ್

* 120 x 63.5 x 10.9 ಎಂಎಂ ಸುತ್ತಳತೆ

* 135 ಗ್ರಾಂ ತೂಕ

* 3.75 ಇಂಚಿನ TFT ಟಚ್ ಸ್ಕ್ರೀನ್, 320 x 480 ಪಿಕ್ಸಲ್ ರೆಸೊಲ್ಯೂಷನ್

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್

* V3.0 ಬ್ಲೂಟೂಥ್ ಜೊತೆ A2DP

* V2.0 ಮೈಕ್ರೊ USB ಪೋರ್ಟ್

* 3.15 ಮೆಗಾ ಪಿಕ್ಸಲ್ ಕ್ಯಾಮೆರಾ, LED ಫ್ಲಾಶ್, 2048 x 1536 ಪಿಕ್ಸಲ್ ರೆಸೊಲ್ಯೂಷನ್

* ಸೆಕೆಂಡರಿ VGA ಕ್ಯಾಮೆರಾ

ಎರಡೂ ಮೊಬೈಲ್ ಗಳು GPRS ಮತ್ತು EDGE ಬೆಂಬಲಿತವಾಗಿದ್ದು, 802.11 b/g/n ವೈ-ಫೈ, ವೈ-ಫೈ ಹಾಟ್ ಸ್ಪಾಟ್ ಮತ್ತು ಹೆಚ್ಚು ವೇಗದ 3ಜಿ ಸಂಪರ್ಕವನ್ನು ಬೆಂಬಲಿಸುತ್ತದೆ. ಎರಡರಲ್ಲೂ GPS, A-GPS ಸೌಲಭ್ಯವನ್ನೂ ನೀಡಲಾಗಿದೆ. ಮೈಕ್ರೊಮ್ಯಾಕ್ಸ್ A75 ಮತ್ತು A85 ನಲ್ಲಿ ಅಕ್ಸೆಲೆರೊಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅಳವಡಿಸಲಾಗಿದೆ.

ಮೈಕ್ರೊ ಮ್ಯಾಕ್ಸ್ A85 1500 mAh Li ion ಬ್ಯಾಟರಿ ಹೊಂದಿದ್ದರೆ A75 1300 mAh Li ion ಬ್ಯಾಟರಿ ಪಡೆದುಕೊಂಡಿದೆ. ಎರಡೂ ಮೊಬೈಲಿನ ಬ್ಯಾಟರಿಗಳು ಉತ್ತಮ ಟಾಕ್ ಟೈಂ ಮತ್ತು ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ ಎನ್ನಲಾಗಿದೆ.

ಮೈಕ್ರೊ ಮ್ಯಾಕ್ಸ್ A85 ಮೊಬೈಲ್ ಬೆಲೆ ಸುಮಾರು 19,000 ರು ಇದ್ದರೆ ಮೈಕ್ರೊ ಮ್ಯಾಕ್ಸ್ A75 ಮೊಬೈಲ್ ಸುಮಾರು 9,000 ರು ಅಥವಾ ಅದಕ್ಕಿಂತ ಕಡಿಮೆ ಬೆಲೆಗೆ ನಿಮಗೆ ಲಭ್ಯವಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X