Subscribe to Gizbot

ಮೈಕ್ರೊಮ್ಯಾಕ್ಸ್‌ A87 ನಿಂಜಾ 4 vs ಇಂಟೆಕ್ಸ್‌ ಆಕ್ವಾ 4.0

Posted By: Super
ಮೈಕ್ರೊಮ್ಯಾಕ್ಸ್‌ A87 ನಿಂಜಾ 4 vs ಇಂಟೆಕ್ಸ್‌ ಆಕ್ವಾ 4.0

ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್‌ ಫೊನ್‌ ಖರೀದಿಸಲು ಇಚ್ಚಿಸುವ ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರುಗಳ ಬೇಡಿಕೆಯನ್ನು ಪೂರೈಸುವ ಸಲುವಾಗಿ ಇಂದು ಹಲವು ತಯಾರಕರುಗಳು ಅಗ್ಗದ ಬೆಲೆಯಲ್ಲಿನ ವಿವಿಧ ಬಗೆಯ ಆಂಡ್ರಾಯ್ಡ್‌ ಪೊನ್‌ಗಳನ್ನು ತಂದು ನಿಲ್ಲಿಸಿವೆ. ಅಂದಹಾಗೆ ಇದೇ ಸಾಲಿನಲ್ಲಿ ಸ್ಥಳೀಯ ಫೊನ್‌ ತಯಾರಕರುಗಳಾದ ಮೈಕ್ರೋಮ್ಯಾಕ್ಸ್‌ ಹಾಗೂ ಇನ್‌ಟೆಕ್ಸ್‌ ಸಂಸ್ಥೆಗಳು ನೂತನವಾಗಿ ಸೂಪರ್‌ಫೋನ್‌ A87 ನಿಂಜಾ 4 ಹಾಗೂ ಆಕ್ವಾ 4.0 ಎಂಬ ಅಗ್ಗದ ಬೆಲೆಯ ಫೋನ್‌ ಗಳನ್ನು ಹೊರತಂದಿದ್ದಾರೆ.

ಅಂದಹಾಗೆ ಈ ಫೋನ್‌ಗಳಲ್ಲಿ ಯಾವುದಾದರು ಒಂದನ್ನು ಕೊಳ್ಳುವ ಮನಸು ನಿಮ್ಮದಾಗಿದಲ್ಲಿ ಕೊಳ್ಳುವುದಕ್ಕೂ ಮುನ್ನ ಎರಡೂ ಸ್ಮಾರ್ಟ್‌ಪೋನ್‌ಗಳ ನಡುವಿನ ವೆತ್ಯಾಸ ಹಾಗು ವಿಶೇಷತೆಗಳ ಹೋಲಿಕೆಯನ್ನು ಒಮ್ಮೆ ಓದಿ ನೋಡಿ.

ವಿನ್ಯಾಸ: ನಿಂಜಾ 4 ಸೂಪರ್‌ಫೋನ್‌ 124.8 x 64 x 11.7 mm ಸುತ್ತಳತೆ ಹೊಂದಿದ್ದರೆ, ಆಕ್ವಾ 4.0 ಫೋನ್‌ 115.3 x 61.4 x 11.9 mm ಸುತ್ತಳತೆಯೊಂದಿಗೆ 113.2 ಗ್ರಾಂ ತೂಕವಿದೆ.

ದರ್ಶಕ: ಈ ವಿಭಾಗದಲ್ಲಿ A87 ನಿಂಜಾ 4 ನಲ್ಲಿ 4 ಇಂಚಿನ ಟಚ್‌ ಸ್ಕ್ರೀನ್‌ ಹಾಗೂ 480 x 800 ಪಿಕ್ಸೆಲ್‌ ಹೊಂದಿದ್ದರೆ ಆಕ್ವಾ 4.0 ನಲ್ಲಿ 3.5 ಇಂಚಿನ ಟಚ್‌ ಸ್ಕ್ರೀನ್‌ ದರ್ಶಕ ಹಾಗೂ 480 x 320 ಪಿಕ್ಸೆಲ್‌ ರೆಸೆಲ್ಯೂಷನ್‌ ಒಳಗೊಂಡಿದೆ.

ಪ್ರೊಸೆಸರ್‌: A87 ನಿಂಜಾ 4 ನಲ್ಲಿ ಉತ್ತಮವಾದ 1 GHz ನ ಕ್ವಾಲ್‌ಕಾಮ್‌ ಸ್ನಾಪ್‌ಟ್ರಾಗನ್‌ ಪ್ರಸೆಸರ್‌ ಹೊಂದಿದ್ದರೆ, ಆಕ್ವಾ 4.0 ಕೊಂಚ ಮಂದಗತಿಯ 800 MHz ಪ್ರೊಸೆಸರ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಅಗ್ಗದ ಬೆಲೆಯ ಫೋನ್‌ಗಳಾದ್ದರಿಂದ ಎರಡೂ ಫೊನ್‌ಗಳು ಆಂಡ್ರಾಯ್ಡ್‌ 2.3 ಜಿಂಜರ್‌ಬ್ರೆಡ್‌ ಚಾಲಿತವಾಗಿವೆ.

ಕ್ಯಾಮೆರಾ: ಈ ವಿಭಾಗದಲ್ಲಿ ಆಕ್ವಾ 4.0, 3MP ಸಾಮರ್ತ್ಯದ ಮುಂಬದಿಯ ಕ್ಯಾಮೆರಾ ಹಾಗೂ 0.3MP VGA ಮುಂಬದಿಯ ಕ್ಯಾಮೆರಾ ಹೊಂದಿದ್ದರೆ. ಮತ್ತೊಂದೆಡೆ A87 ನಿಂಜಾ 4 ನಲ್ಲಿ 2MP ನ ಹಿಂಬದಿಯ ಕ್ಯಾಮೆರಾ ಇದ್ದು ವಿಡಿಯೋ ಕರೆಗಾಗಿ ಮುಂಬದಿಯ ಕ್ಯಾಮೆರಾ ಹೊಂದಿಲ್ಲಾ.

ಸ್ಟೋರೇಜ್‌: ಆಕ್ವಾ 4.0 ನಲ್ಲಿ 131MB ಆಂತರಿಕ ಸ್ಟೋರೇಜ್‌ ಇದ್ದರೆ, A87 ನಿಂಜಾ 4 ನಲ್ಲಿ ಯಾವುದೇ ಆಂತರಿ ಸ್ಟೋರೇಜ್‌ಗಳಿಲ್ಲ. ಅಂದಹಾಗೆ ಎರಡೂ ಫೊನ್‌ಗಳಲ್ಲಿ ಮೈಕ್ರೋ SD ಕಾರ್ಡ್‌ ಸ್ಲಾಟ್‌ಗಳಿದ್ದು 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.

ಕನೆಕ್ಟಿವಿಟಿ: ಈ ವಿಭಾಗದಲ್ಲಿ ಎರಡೂ ಫೊನ್‌ಗಳಲ್ಲಿ ಮೈಕ್ರೋ USB 2.0, Wi-Fi ಫೀಚರ್ಸ್‌, 3G ಹಾಗೂ ಬ್ಲೂಟೂತ್‌ ಸೌಲಭ್ಯಗಳನ್ನು ಹೊಂದಿವೆ.

ಬ್ಯಾಟರಿ: ಎರಡೂ ಫೊನ್‌ಗಳಲ್ಲಿ 1,400 mAh Li-ionಬ್ಯಾಟರಿ ಇದ್ದರೂ ಕೂಡ, ನಿಂಜಾ 4 ಸೂಪರ್‌ ಫೋನ್‌ 5 ಗಂಟೆಗಳ ಟಾಕ್‌ಟೈಮ್‌ ಹಾಗೂ 175 ಗಂಟೆಗಳ ಸ್ಟ್ಯಾಂಡ್‌ಬೈ ನೀಡಿದರೆ, ಆಕ್ವಾ 4.0 ಕೇವಲ 3 ಗಂಟೆಗಳ ಟಾಕ್‌ಟೈಮ್‌ ಹಾಗೂ 140 ಗಂಟೆಗಳ ಸ್ಟ್ಯಾಂಡ್‌ಬೈ ನೀಡುತ್ತದೆ.

ಬೆಲೆ: ಕೊಳ್ಳುವ ಆಲೋಚನೆ ನಿಮಗಿದ್ದಲ್ಲಿ A87 ನಿಂಜಾ 4 ಸೂಪರ್‌ಫೊನ್‌ 5,999 ರೂ ಬೆಲೆಗೆ ಲಭ್ಯವಿದ್ದರೆ, ಆಕ್ವಾ 4.0 ಕೊಂಚ ಕಡಿಮೆ ಬೆಲೆಗೆ ಅಂದರೆ ರೂ. 5,490 ಕ್ಕೆ ಲಭ್ಯವಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot