ಮೈಕ್ರೋಮಾಕ್ಸ್‌ ಎ90ಎಸ್‌ VS ನೋಕಿಯಾ ಲೂಮಿಯಾ 510

By Vijeth Kumar Dn
|

ಮೈಕ್ರೋಮಾಕ್ಸ್‌ ಎ90ಎಸ್‌ VS ನೋಕಿಯಾ ಲೂಮಿಯಾ 510
ಮಾರುಕಟ್ಟೆಯಲ್ಲಿನ ಬಜೆಟ್‌ ಸ್ಮಾರ್ಟ್‌ಫೋನ್‌ ಕುರಿತಾಗಿ ಹೇಳುವುದಾದರೆ ಆಂಡ್ರಾಯ್ಡ್‌ ಮಾದರಿಯ ಹ್ಯಾಂಡ್‌ಸೆಟ್‌ಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿವೆ. ಆದ್ದರಿಂದಲೇ ವಿಶ್ವದೆಲ್ಲೆಡೆಯ ಸ್ಥಳೀಯ ಸ್ಮಾರ್ಟ್‌ಫೋನ್ಸ್‌ ತಯಾರಕರುಗಳು ಈ ಆಂಡ್ರಾಯ್ಡ್‌ಆಪರೇಟಿಂಗ್‌ ಸಿಸ್ಟಂ ಬಳಸಿಕೊಂಡು ಕಡಿಮೆ ಬೆಲೆಯಲ್ಲಿನ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.

ಈ ಸಾಲಿಗೆ ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮೈಕ್ರೋಮ್ಯಾಕ್ಸ್‌ ಮೊಬೈಲ್ಸ್‌ ತನ್ನಯ ನೂತನ ಡ್ಯುಯೆಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಗಳಾದಂತಹ ಸೂಪರ್‌ಫೋನ್‌ ಎ90ಎಸ್‌ ಪಿಕ್ಸೆಲ್‌ ಹಾಗೂ ಸೂಪರ್‌ಫೋನ್‌ ಎ110 ಕ್ಯಾನ್ವಾಸ್‌ 2 ಬಿಡುಗಡೆ ಮಾಡಿದೆ.

ಅಂದಹಾಗೆ ಇದೇ ವೇಳೆಗೆ ಮೈಕ್ರೋಸಾಫ್ಟ್‌ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂ ಚಾಲಿತ ಸ್ಮಾರ್ಟ್‌ಫೋನ್‌ಗಳೂ ಕೂಡಾ ದಿನೇ ದಿನೇ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದುಕೊಳ್ಳುತಿವೆ. ಈ ಸಾಲಿಗೆ ಉತ್ತಮ ಗುಣಮಟ್ಟದ ಮೊಬೈಲ್‌ ಫೋನ್‌ಗಳ ಮೂಲಕ ಭಾರತೀಯ ಗ್ರಾಹಕರುಗಳ ಮನಗೆದ್ದಿರುವ ನೀಕಿಯಾ ತನ್ನಯ ನೂತನ ವಿಂಡೋಸ್‌ ಚಾಲಿತ ಪ್ರಾಥಮಿಕ ಹಂತದ ಲೂಮಿಯಾ ಸರಣಿಯ ಸ್ಮಾರ್ಟ್‌ಫೋನ್‌ ಆದಂತಹ ಲೂಮಿಯಾ 510 ಬಿಡುಗಡೆ ಮಾಡಿದೆ.

ಆಂಡ್ರಾಯ್ಡ್‌ ಅಥವಾ ವಿಂಡೋಸ್‌ ಯಾವ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ ಖರೀದಿಸುವುದು ಎಂದು ಆಲೋಚಿಸುತ್ತಿದ್ದೀರಾ? ಹಾಗಿದ್ದಲ್ಲಿ ಇದೀಗ ತಾನೆ ಮಾರುಕಟ್ಟೆಗೆ ಕಾಲಿರಿಸಿರುವ ಆಂಡ್ರಾಯ್ಡ್ ಹಾಗೂ ವಿಂಡೋಸ್‌ ಚಾಲಿತ ನೂತನ ಸ್ಮಾರ್ಟ್‌ಫೋನ್‌ಗಳಾದ ಮೈಕ್ರೋಮ್ಯಾಕ್ಸ್‌ ಸೂಪರ್‌ಫೋನ್‌ ಎ90ಎಸ್‌ ಪಿಕ್ಸೆಲ್‌ ಹಾಗೂ ನೋಕಿಯಾ ಲೂಮಿಯಾ 510 ನಡುವಿನ ಹೋಲಿಕೆಯನ್ನು ಗಿಜ್ಬಾಟ್‌ ನಿಮಗಾಗಿ ತಂದಿದೆ ಒಮ್ಮೆ ಓದಿ ನೋಡಿ.

ತೂಕ ಹಾಗೂ ಸುತ್ತಳತೆ : ಎ90ಎಸ್‌ ಪಿಕ್ಸೆಲ್ಸ ಸುಪರ್‌ಪೋನ್‌ 127.2 x 66.8 x 9.8 mm ಸುತ್ತಳತೆಯೊಂದಿಗೆ 118 ಗ್ರಾಂ ತೂಕವಿದ್ದರೆ. ನೋಕಿಯಾ ಲೂಮಿಯಾ 510ವಿಂಡೋಸ್‌ ಫೋನ್‌ 120.7 x 64.9 x 11.5 mm ಸುತ್ತಳತೆಯೊಂದಿಗೆ 129 ಗ್ರಾಂ ತೂಕವಿದೆ.

ದರ್ಶಕ : ಈ ವಿಚಾರದಲ್ಲಿ ಎ90ಎಸ್‌ ಪಿಕ್ಸೆಲ್ಸ ನಲ್ಲಿ 4.3 ಇಂಚಿನ AMOLED ಸಾಮರ್ತ್ಯದ ಟಚ್‌ಸ್ಕ್ರೀನ್‌ ನೀಡಲಾಗಿದ್ದು 480 x 800 ಪಿಕ್ಸೆಲ್ಸ್‌ ಹೊಂದಿದೆ, ಮತ್ತೊಂದೆಡೆ ಲೂಮಿಯಾ 510 ನಲ್ಲಿ ಕೊಂಚ ಉತ್ತಮವಾದ 4 ಇಂಚಿನ WVGA ಟಚ್ಸ್ಕ್ರೀನ್‌ ನಿಡಲಾಗಿದ್ದು 800 x 480 ಪಿಕ್ಸೆಲ್ಸ್‌ ಹೊಂದಿದೆ.

ಪ್ರೊಸೆಸರ್‌ : ಎ90ಎಸ್‌ ಪಿಕ್ಸೆಲ್ಸ ನಲ್ಲಿ ಕೊಂಚ ಉತ್ತಮವಾದ 1GHz ಡ್ಯುಯೆಲ್‌ ಕೋರ್‌ ಪ್ರೊಸೆಸರ್‌ ನೀಡಲಾಗಿದ್ದರೆ, ಲೂಮಿಯಾ 510 ನಲ್ಲಿ ಕೊಂಚ ಕಡಿಮೆ ಸಾಮರ್ತ್ಯದ ಅಂದರೆ 800MHz ಸಿಂಗಲ್‌ ಕೋರ್‌ ಪ್ರೊಸೆಸರ್‌ ನೀಡಲಾಗಿದೆ.

ಆಪರೇಟಿಂಗ್‌ ಸಿಸ್ಟಂ : ಸೂಪರ್‌ಫೋನ್‌ ಎ90ಎಸ್‌ ಪಿಕ್ಸೆಲ್ಸ ಸ್ಮಾರ್ಟ್‌ಫೋನ್‌ ನಲ್ಲಿ ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌ ನೀಡಲಾಗಿದ್ದು, ನೋಕಿಯಾದ ಲೂಮಿಯಾ 510 ನಲ್ಲಿ ವಿಂಡೋಸ್‌ನ ಫೋನ್‌ 7.5 ಮ್ಯಾಂಗೋ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ, ಹಾಗೂ ಶೀಘ್ರದಲ್ಲೇ ವಿಂಡೋಸ್‌ ಫೋನ್‌ 7.8 ಆಪರೇಟಿಂಗ್‌ ಸಿಸ್ಟಂಗೆ ಅಪ್ಗ್ರೇಡ್‌ ಆಗಲಿದೆ.

ಕ್ಯಾಮೆರಾ : ಈ ವಿಚಾರದಲ್ಲಿ,ಎ90ಎಸ್‌ ಪಿಕ್ಸೆಲ್ಸ ಸ್ಮಾರ್ಟ್‌ಫೋನ್‌ನಲ್ಲಿ 8ಎಂಪಿ ನ ಹಿಂಬದಿಯ ಕ್ಯಾಮೆರಾ ನೀಡಲಾಗಿದ್ದು ಎಲ್‌ಇಡಿ ಫ್ಲಾಷ್‌, ಆಟೋಫೋಕಸ್‌, ಹಾಗೂ ವಿಡಿಯೋ ಕರೆಗಾಗಿ 0.3ಎಂಪಿನ ಮುಂಬದಿಯ ಕ್ಯಾಮೆರಾ ನೀಡಲಾಗಿದೆ. ಆದರೆ ನೋಕಿಯಾ ಲೂಮಿಯಾ 510 ವಿಂಡೋಸ್‌ ಸ್ಮಾರ್ಟ್‌ಫೋನ್‌ನಲ್ಲಿ ಕೇವಲ 5ಎಂಪಿ ಹಿಂಬದಿಯ ಕ್ಯಾಮೆರಾ ನೀಡಲಾಗಿದ್ದು ವಿಡಿಯೋಕರೆಗಾಗಿ ಮುಂಬದಿಯ ಕ್ಯಾಮೆರಾ ನೀಡಲಾಗಿಲ್ಲ.

ಸ್ಟೋರೇಜ್‌ : ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 4ಜಿಬಿ ಆಂತರಿಕ ಸ್ಟೋರೇಜ್‌ ನೀಡಲಾಗಿದೆ. ಅಂದಹಾಗೆ ಎ90ಎಸ್‌ ನಲ್ಲಿ ಉತ್ತಮವಾದ 512ಎಂಬಿ RAM ನೀಡಲಾಗಿದ್ದರೆ, ನೋಕಿಯಾದ ಲೂಮಿಯಾ 510 ನಲ್ಲಿ ಕೇವಲ 256ಎಂಬಿ RAM ನೀಡಲಾಗಿದೆ. ಇದಲ್ಲದೆ ಮೈಕ್ರೋಮ್ಯಾಕ್ಸ್‌ 32ಜಿಬಿ ವರೆಗಿನ ಮೆಮೊರಿ ವಿಸ್ತರಣೆಯ ಸೌಲಭ್ಯ ಕೂಡಾ ನೀಡಿದೆ, ಆದರೆ ನೋಕಿಯಾ ಸ್ಮಾರ್ಟ್‌ಫೋನ್‌ನಲ್ಲಿ ಮೆಮೊರಿ ವಿಸ್ತರಣೆಗೆ ದಮೈಕ್ರೋಎಸ್‌ಡಿ ಕಾರ್ಡ್‌ ಸ್ಲಾಟ್‌ ನೀಡಲಾಗಿಲ್ಲ ಬದಲಾಗಿ 7ಜಿಬಿ ವರೆಗಿನ ಸ್ಕೈ ಡೈವ್‌ ಕ್ಲೌಡ್‌ ಉಚಿತ ಸ್ಟೋರೇಜ್‌ ನೀಡುತ್ತಿದೆ.

ಕನೆಕ್ಟಿವಿಟಿ : ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ವೈ-ಫೈ 802.11 b/g/n, ಬ್ಲೂಟೂತ್‌, 3ಜಿ ಹಾಗೂ ಮೈಕ್ರೋ ಯುಎಸ್‌ಬಿ 2.0 ಫೀಚರ್ಸ್‌ ನೀಡಲಾಗಿದೆ.

ಬ್ಯಾಟರಿ : ಎ90ಎಸ್‌ ಪಿಕ್ಸೆಲ್ಸ ನಲ್ಲಿ 1,600 mAh Li-ion ಬ್ಯಾಟರಿ ಇದ್ದು 5 ಗಂಟೆಗಳ ಟಾಕ್‌ಟೈಮ್‌ ಅಥವಾ 174 ಗಂಟೆಗಳ ಸ್ಟ್ಯಾಂಡ್‌ಬೈ ನೀಡುತ್ತದೆ. ಹಾಗೂ ನೋಕಿಯಾದ ಲೂಮಿಯಾ 510 ಸ್ಮಾರ್ಟ್‌ಫೋನ್‌ನಲ್ಲಿ 1,300 mAh ಬಿಪಿ-3ಎಲ್‌ ಬ್ಯಾಟರಿ ಇದ್ದು 6.2 ಗಂಟೆಗಳ ಟಾಕ್‌ಟೈಮ್‌ ಅಥವಾ 653 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ಬೆಲೆ : ಖರೀದಿಸುವುದಾದರೆ ಎ90ಎಸ್‌ ಪಿಕ್ಸೆಲ್ಸ ಸ್ಮಾರ್ಟ್‌ಫೋನ್‌ ರೂ.12,990 ದರದಲ್ಲಿ ಲಭ್ಯವಿದ್ದರೆ ಲೂಮಿಯಾ 510 ರೂ. 11,000 ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಸ್ಮಾರ್ಟ್‌ಫೋನ್ಸ್‌ಳ ಉತ್ತಮ ಆಫರ್‌ಗಳಿಗಾಗಿ ಗೋಪ್ರೋಬೋಗೆ ಭೇಟಿ ನೀಡಿ.

Read In English...

ಗೂಗಲ್‌ ನೆಕ್ಸಸ್‌ 7 VS ಆಪಲ್‌ ಐಪ್ಯಾಡ್‌ ಮಿನಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X