ವೊಡಾಫೋನ್ ಸಹಯೋಗದಲ್ಲಿ 5,000mAh ಬ್ಯಾಟರಿ ಫೋನ್ ಲಾಂಚ್!..ಯಾವುವು ಗೊತ್ತಾ?

ಕಡಿಮೆ ಬೆಲೆಗೆ 4G ಸ್ಮಾರ್ಟ್‌ಫೋನ್‌ಗಳನ್ನು ಮೈಕ್ರೋಮ್ಯಾಕ್ಸ್ ಟೆಲಿಕಾಂ ಕಂಪೆನಿಗಳ ಸಹಯೋಗದೊಂದಿಗೆ ಬಿಡುಗಡೆ ಮಾಡುತ್ತಿದ್ದು, ನೂತನ ಭಾರತ್ 5 ಫೋನ್ ಟೆಲಿಕಾಂ ದಿಗ್ಗಜ ವೋಡಾಫೋನ್ ಸಹಭಾಗಿತ್ವದಲ್ಲಿ ಹೊರತರಲಾಗಿದೆ.

|

ಭಾರತ್ ಸರಣಿಯ ಸ್ಮಾರ್ಟ್‌ಫೋನ್‌ಗಳಿಂದ ಮತ್ತೆ ತನ್ನ ಅಸ್ತಿತ್ವ ಕಂಡುಕೊಳ್ಳುತ್ತಿರುವ ದೇಶಿಯ ಕಂಪೆನಿ ಮೈಕ್ರೋಮ್ಯಾಕ್ಸ್ ಮತ್ತೊಂದು ಭಾರತ್ ಸರಣಿಯ ಸ್ಮಾರ್ಟ್‌ಫೋನ್ ಹೊರಬಂದಿದೆ. ಭಾರತ್ 1, ಭಾರತ್ 2, ಭಾರತ್ 3 ಮತ್ತು ಭಾರತ್ 4 ಫೋನ್‌ನಂತರ ಬಿಡುಗಡೆಯಾಗಿರುವ ಭಾರತ್ 5 ಫೋನ್ 5,000mAh ಬ್ಯಾಟರಿ ಎಲ್ಲರ ಗಮನಸೆಳೆಯುತ್ತಿದೆ.!!

ಕಡಿಮೆ ಬೆಲೆಗೆ 4G ಸ್ಮಾರ್ಟ್‌ಫೋನ್‌ಗಳನ್ನು ಮೈಕ್ರೋಮ್ಯಾಕ್ಸ್ ಟೆಲಿಕಾಂ ಕಂಪೆನಿಗಳ ಸಹಯೋಗದೊಂದಿಗೆ ಬಿಡುಗಡೆ ಮಾಡುತ್ತಿದ್ದು, ನೂತನ ಭಾರತ್ 5 ಫೋನ್ ಅನ್ನು ಟೆಲಿಕಾಂ ದಿಗ್ಗಜ ವೋಡಾಫೋನ್ ಸಹಭಾಗಿತ್ವದಲ್ಲಿ ಹೊರತರಲಾಗಿದೆ. ಹಾಗಾದರೆ, ಭಾರತ್ 5 ಫೋನ್ ಫೀಚರ್ಸ್‌ಗಳು ಏನು? ಬೆಲೆ ಎಷ್ಟು? ಮತ್ತು ವೊಡಾಫೋನ್ ಆಫರ್ ಏನಿದೆ ಎಂದು ಮುಂದೆ ತಿಳಿಯಿರಿ.!!

ವೋಡಾಫೋನ್ ಆಫರ್!!

ವೋಡಾಫೋನ್ ಆಫರ್!!

ಮೈಕ್ರೋಮ್ಯಾಕ್ಸ್ ಮತ್ತು ವೋಡಾಫೋನ್ ಟೆಲಿಕಾಂಗಳ ಸಹಯೋಗದಲ್ಲಿ ಮೊಬೈಲ್ ಬಿಡುಗಡೆಯಾಗಿದ್ದು, ಭಾರತ್ 5 ಫೋನ್ ಮೇಲೆ ಮಾಸಿಕ 5ಜಿಬಿಯಂತೆ ಐದು ತಿಂಗಳ ವರೆಗೆ 50 ಜಿಬಿ ಡೇಟಾ ಆಫರ್ ಅನ್ನು ವೋಡಾಫೋನ್ ಘೋಷಿಸಿದೆ.!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್!!

ಮೈಕ್ರೋಮ್ಯಾಕ್ಸ್ ಭಾರತ್ 5 ಸ್ಮಾರ್ಟ್‌ಫೋನ್ 1280 x 720 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿರುವ 5.2 ಇಂಚುಗಳ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇನ್ನು ಫೋನ್‌ನಲ್ಲಿ ಮೀಡಿಯಾ ಟೆಕ್ ಪ್ರೊಸೆಸರ್ ಅಳವಡಿಸಲಾಗಿದ್ದು, ಆಂಡ್ರಾಯ್ಡ್ 7.0 ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ.!!

RAM ಮತ್ತು ಮೆಮೊರಿ

RAM ಮತ್ತು ಮೆಮೊರಿ

ಇದಲ್ಲದೇ ಭಾರತ್ 5 ಸ್ಮಾರ್ಟ್‌ಫೋನಿನಲ್ಲಿ 1GB RAM ಕಾಣಬಹುದಾಗಿದ್ದು, 16GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಲ್ಲದೇ ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು ಹೆಚ್ಚಿಸಬಹುದಾದ ಅವಕಾಶ ಕೂಡ ಈ ಸ್ಮಾರ್ಟ್‌ಫೋನ್‌ನಲ್ಲಿದೆ.!!

ಕ್ಯಾಮೆರಾ ಮತ್ತು ಬ್ಯಾಟರಿ!!

ಕ್ಯಾಮೆರಾ ಮತ್ತು ಬ್ಯಾಟರಿ!!

ಭಾರತ್ 5 ಸ್ಮಾರ್ಟ್‌ಫೋನ್‌ನಲ್ಲಿ 5 MP ರಿಯರ್ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಎರಡು ಕಡೆಯಲ್ಲಿ LED ಫ್ಲಾಷ್ ಲೈಟ್ ಇದೆ.! ಇನ್ನು ಈ ಫೋನಿನ ಪ್ರಮುಖ ವಿಶೇಷ ಎಂದರೆ ಈ ಫೋನಿನಲ್ಲಿ 5000mAh ಬ್ಯಾಟರಿಯಯ 2 ದಿನಗಳ ನಿರಂತರ ಬ್ಯಾಟರಿ ಬ್ಯಾಕಪ್ ನೀಲಿದೆ.!!

ಇತರ ಫೀಚರ್ಸ್ ಮತ್ತು ಬೆಲೆ!!

ಇತರ ಫೀಚರ್ಸ್ ಮತ್ತು ಬೆಲೆ!!

RAM ಮತ್ತು ಪ್ರೊಸೆಸರ್ ಆಯ್ಕೆಯಲ್ಲಿ ಹಿಂದೆಬಿಡದ್ದಿರುವ ಭಾರತ್ 5 ಸ್ಮಾರ್ಟ್‌ಫೋನ್‌ ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್‌ಫೋನ್ ಆಗಿದೆ. ಬ್ಯಾಟರಿ ಬಾಳಿಕೆ ಜೊತೆಗೆ 4G ಸ್ಮಾರ್ಟ್‌ಫೋನ್ ಒಂದು ಬೇಕೆನ್ನುವವರಿಗೆ 5555 ರೂಪಾಯಿಗಳ ಈ ಫೋನ್ ಬೆಸ್ಟ್ ಎನ್ನಬಹುದು.!!

ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಒಮ್ಮೆಲೆ ವಿಡಿಯೊ ಲೈವ್ ಮಾಡುವುದು ಹೇಗೆ?ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಒಮ್ಮೆಲೆ ವಿಡಿಯೊ ಲೈವ್ ಮಾಡುವುದು ಹೇಗೆ?

Best Mobiles in India

English summary
Micromax Bharat 5 will hit the stores starting next week.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X