ಮೈಕ್ರೋಮ್ಯಾಕ್ಸ್ ಬೋಲ್ಟ್ ಇನ್ನು ಬಳಕೆದಾರರ ತೆಕ್ಕೆಗೆ

Written By:

ಅದೇನೋ ಗೊತ್ತಿಲ್ಲ ಮಾರುಕಟ್ಟೆಯಲ್ಲಿ ಭರ್ಜರಿಯಾಗಿಯೇ ಆಂಡ್ರಾಯ್ಡ್ ತನ್ನ ಕಿಟ್‌ಕ್ಯಾಟ್ ಮೋಡಿಯನ್ನು ಗ್ರಾಹಕರಲ್ಲಿ ಉಂಟುಮಾಡುತ್ತಿದೆ. ಭಾರತೀಯ ಮೂಲದ ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳೂ ಕೂಡ ಕಡಿಮೆ ದರದ ಫೋನ್‌ಗಳನ್ನು ಮಾರುಕಟ್ಟೆಗೆ ತರುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದಾರೆ.

ಇದೇ ಆವೃತ್ತಿಯನ್ನು ತನ್ನಲ್ಲಿ ಮೈಗೂಡಿಸಿಕೊಂಡು ಬಳಕೆದಾರರ ಪ್ರಿಯಕರನಾಗಿ ಮಾರ್ಪಡುವ ನಿಟ್ಟಿನಲ್ಲಿರುವ ಫೋನ್ ಒಂದು ಮಾರುಕಟ್ಟೆಗೆ ಲಾಂಚ್ ಆಗಿದೆ. ಅದುವೇ ಮೈಕ್ರೋಮ್ಯಾಕ್ಸ್ ಬೋಲ್ಟ್ A069. ಇಬೇನಲ್ಲಿ ಕಿಟ್‌ಕ್ಯಾಟ್ ಸುವಾಸಿತ ಫೋನ್ ಈಗಾಗಲೇ ಲಭ್ಯವಾಗುತ್ತಿದೆ. ರೂ 5,301 ಕ್ಕೆ ಈ ಫೋನ್ ದೊರೆಯುತ್ತಿದ್ದು ಹಸಿರು, ಗ್ರೇ, ಕೆಂಪು, ಬಿಳಿ ಮತ್ತು ಹಳದಿ ಬಣ್ಣಗಳಲ್ಲಿ ಈ ಡಿವೈಸ್ ಲಭ್ಯವಾಗುತ್ತಿದೆ.

ಮೈಕ್ರೋಮ್ಯಾಕ್ಸ್ A069 ಕಿಟ್‌ಕ್ಯಾಟ್ ವಿಶೇಷತೆ

ಭಾರತದ ಎರಡನೆಯ ಅತಿ ದೊಡ್ಡ ಸ್ಮಾರ್ಟ್‌ಫೋನ್ ಬ್ರ್ಯಾಂಡ್, ಯುನೈಟ್ 2 A106 ಅನ್ನು ಕೂಡ ಲಾಂಚ್ ಮಾಡಿದ್ದು ಇದೇ ಸಾಲಿಗೆ, ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಂಟೈಸ್ A105, ಕ್ಯಾನ್‌ವಾಸ್ ಗೋಲ್ಡ್ ಆಂಡ್ರಾಯ್ಡ್ A300 ಮತ್ತು ಕ್ಯಾನ್‌ವಾಸ್ ನೈಟ್ A350 ಅನ್ನು ಇದೇ ಆಂಡ್ರಾಯ್ಡ್ ಆವೃತ್ತಿಯಲ್ಲಿ ಬಿಡುಗಡೆ ಮಾಡಿತ್ತು. ಈ ಎಲ್ಲಾ ಫೋನ್‌ಗಳು ಈಗ ಭಾರತದಲ್ಲಿ ಲಭ್ಯವಾಗುತ್ತಿವೆ.

ಇನ್ನು ಬೋಲ್ಟ್ A069 ಕುರಿತು ಮಾತನಾಡುವಾಗ, ಮೈಕ್ರೋಮ್ಯಾಕ್ಸ್ 5 ಇಂಚಿನ (854 x 480 ಪಿಕ್ಸೆಲ್‌ಗಳ) ಸಾಮರ್ಥ್ಯವುಳ್ಳ ಟಚ್ ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ 1.3GHz ಡ್ಯುಯೆಲ್ ಕೋರ್ ಮೀಡಿಯಾಟೆಕ್ MT6572 ಪ್ರೊಸೆಸರ್ ಇದ್ದು 512ಎಮ್‌ಬಿ RAM ಫೋನ್‌ನಲ್ಲಿದೆ. ಇದರಲ್ಲಿ ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಓಎಸ್ ಚಾಲನೆಯಾಗುತ್ತಿದೆ.

ಡ್ಯುಯೆಲ್ ಸಿಮ್ ಬೆಂಬಲದೊಂದಿಗೆ ಬಂದಿರುವ ಈ ಡಿವೈಸ್ 5 ಮೆಗಾಪಿಕ್ಸೆಲ್‌ಗಳ ರಿಯರ್ ಕ್ಯಾಮೆರಾವನ್ನು ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಹೊಂದಿದೆ ಮತ್ತು ಇದರ ಮುಂಭಾಗ ಕ್ಯಾಮೆರಾ ಸಾಮರ್ಥ್ಯ 0.3 ಮೆಗಾಪಿಕ್ಸೆಲ್ ಆಗಿದೆ. ಫೋನ್‌ನ ಆಂತರಿಕ ಮೆಮೊರಿ 4ಜಿಬಿಯಾಗಿದ್ದು ಇದನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ. ಇದರಲ್ಲಿ ಮೈಕ್ರೋಎಸ್‌ಡಿ, 2ಜಿ (EDGE), ವೈಫೈ, ಬ್ಲ್ಯೂಟೂತ್ ಮತ್ತು 1800 mAh ಬ್ಯಾಟರಿ ಇದೆ. ಇದು 7 ಗಂಟೆಗಳ ಟಾಕ್‌ ಟೈಮ್ ಅವಧಿಯನ್ನು ಒದಗಿಸುತ್ತಿದ್ದು 210 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ಒದಗಿಸುತ್ತಿದೆ.

ಇದು ಇಂಗ್ಲೀಷ್ ಸೇರಿದಂತೆ 20 ಭಾಷೆಗಳನ್ನು ಬೆಂಬಲಿಸುವ ತಾಕತ್ತನ್ನು ಹೊಂದಿದೆ. ಮತ್ತು ಯುನೈಟ್ 2 ನಂತೆಯೇ ಇಲ್ಲಿಯೂ ಅದೇ ಪುನರಾವರ್ತನೆಯನ್ನು ಗಮನಿಸಬಹುದಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot