ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ A105 ಇದೀಗ ರೂ. 6,999 ಕ್ಕೆ

Written By:

ಮೈಕ್ರೋಮ್ಯಾಕ್ಸ್ ಈಗಾಗಲೇ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಮೊಬೈಲ್ ಓಎಸ್‌ ಚಾಲನೆಯಾಗುವ ಎರಡು ಹ್ಯಾಂಡ್‌ಸೆಟ್‌ಗಳನ್ನು ಈಗಾಗಲೇ ಲಾಂಚ್ ಮಾಡಿದ್ದು ಇದೀಗ ಮಾರುಕಟ್ಟೆಗೆ ಇನ್ನೊಂದು ಮಿತದರದ ಫೋನ್ ಅನ್ನು ಬಿಟಡುಗಡೆಗೊಳಿಸಿದೆ. ಇದು ಕ್ಯಾನ್‌ವಾಸ್ A105 ಎಂಬ ಹೆಸರನ್ನು ಹೊಂದಿದ್ದು ಹೋಮ್‌ಶಾಪ್ 18 ನಲ್ಲಿ ರೂ. 6,999 ಕ್ಕೆ ದೊರೆಯಲಿದೆ.

ಕ್ಯಾನ್‌ವಾಸ್ A105 ಸ್ಟೈಲಿಶ್ ಆಗಿರುವ ಡ್ಯುಯೆಲ್ ಸಿಮ್ ಫೋನ್ ಆಗಿದ್ದು ಇದು ಇತ್ತೀಚಿನ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಅನ್ನು ಬೆಂಬಲಿಸುತ್ತದೆ ಎಂಬುದು ಮಹತ್ವದ ವಿಷಯವಾಗಿದೆ. ಇದು 5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು 480x800 ಪಿಕ್ಸೆಲ್ ರೆಸಲ್ಯೂಶನ್ ಫೋನ್‌ಗಿದೆ. 512ಎಂಬಿ ರ್‌ಯಾಮ್ ಜೊತೆಗೆ 1.2GHz ಕ್ವಾಡ್ - ಕೋರ್ ಪ್ರೊಸೆಸರ್ ಫೋನ್‌ನಲ್ಲಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ A105 ಇದೀಗ ರೂ. 6,999 ಕ್ಕೆ

4 ಜಿಬಿ ಆನ್ ಬೋರ್ಡ್ ಸಂಗ್ರಹಣೆ ಫೋನ್‌ನಲ್ಲಿದ್ದು ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 32 ಜಿಬಿಗೆ ವಿಸ್ತರಿಸಬಹುದು. ಫೋನ್‌ನ ಕ್ಯಾಮೆರಾ ವಿಶೇಷತೆ ಆಕರ್ಷಣೀಯವಾಗಿದ್ದು 5 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾದೊಂದಿಗೆ ಸಿಂಗಲ್ ಎಲ್‌ಇಡಿ ಫ್ಲ್ಯಾಶ್ ಇದಕ್ಕಿದೆ. ಮತ್ತು ವಿಜಿಎ ಗುಣಮಟ್ಟದ ಫ್ರಂಟ್-ಫೇಸಿಂಗ್ ಶೂಟರ್ ಫೋನ್‌ನಲ್ಲಿದೆ.

ಇನ್ನು ಕನೆಕ್ಟಿವಿಟಿ ಅಂಶಗಳನ್ನು ಗಮನಿಸಿದಾಗ ಕ್ಯಾನ್‌ವಾಸ್ A105 3ಜಿ, ವೈ-ಫೈ, ಎಫ್‌ಎಂ ರೃಡಿಯೋ, ಡ್ಯುಯೆಲ್-ಸಿಮ್, A-GPS ಹಾಗೂ ಬ್ಲೂಟೂತ್ ಅನ್ನು ಒಳಗೊಂಡಿದೆ.

ಫೋನ್ ತಯಾರಕರು ದೊಡ್ಡದಾದ 1,900mAh ಬ್ಯಾಟರಿಯನ್ನು ಫೋನ್‌ನಲ್ಲಿ ಇರಿಸಿದ್ದಾರೆ. ಫೋನ್ 10.5ಎಂಎಂ ದಪ್ಪವಾಗಿದ್ದು ಇದರ ತೂಕ 180 ಗ್ರಾಮ್‌ಗಳಾಗಿದೆ. ಫೋನ್‌ನ ವೈಶಿಷ್ಟ್ಯಗಳನ್ನು ಗಮನಿಸುವಾಗ ಇದು ಸಾಕಷ್ಟು ಆಶಾದಾಯಕವಾಗಿದೆ ಆದರೂ ಇದನ್ನು ಖರೀದಿಸುವ ಮುನ್ನ ಇದೇ ದರದಲ್ಲಿ ದೊರೆಯುವ ಇತರ ಫೋನ್‌ಗಳಾದ ಲಾವಾ ಐರಿಸ್ X1 ಕೂಡ ಮನಸೆಳೆಯುವಂತಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot