ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಅನ್ನು ರೂ 10,299 ಗಳಲ್ಲಿ ನಿಮ್ಮದಾಗಿಸಿಕೊಳ್ಳಿ

Written By:

ನೋಕಿಯಾ, ಸ್ಯಾಮ್ ಸಂಗ್‌ನಂತೆ ತನ್ನ ಬೇಡಿಕೆಯನ್ನು ಹೆಚ್ಚಿಕೊಳ್ಳುತ್ತಿರುವ ಮೈಕ್ರೋಮ್ಯಾಕ್ಸ್ ಎಂಬ ಕೂಲ್ ಹೆಡ್ ಸೆಟ್ 5 ಇಂಚಿನ ಎಚ್ ಡಿ ಡಿಸ್ ಪ್ಲೇಯೊಂದಿಗೆ ರೂ 10,299 ಗಳಲ್ಲಿ ನಿಮ್ಮ ಕೈ ಸೇರಲಿದೆ.

ಸಂಸ್ಥೆ ಈಗಾಗಲೇ ಈ ದರಗಳಲ್ಲಿ ಸಿಗುವ ವಿವಿಧ ಬಣ್ಣದ ಫೋನ್‌ಗಳು ಮತ್ತು ಅದರ ವೈಶಿಷ್ಟ್ಯಗಳನ್ನು ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ಗ್ರಾಹಕರ ಮನ ಮೆಚ್ಚುವಂತೆ ಫೋನ್‌ನ ಪ್ರತಿಯೊಂದು ವಿಧಾನವನ್ನು ರೂಪಿಸಲಾಗಿದೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ.

ವಾವ್! ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಬೆಲೆ ಇನ್ನಷ್ಟು ಕಡಿಮೆ ಆಗಿದೆ!

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನ 2 ಬಣ್ಣಗಳು A120 ಗಾಢ ಕೆಂಪು, ಹಳದಿ, ಹಸಿರು ಅಥವಾ ಕಪ್ಪು ಪ್ಯಾನಲ್ ಕವರ್‌ಗಳಲ್ಲಿ ದೊರೆಯಲಿದೆ. ಈ ಫೋನ್ ನ ವಿಶೇಷತೆಯೆಂದರೆ 5 ಇಂಚಿನ ಐಪಿಎಸ್ ಡಿಸ್ ಪ್ಲೇ ಯನ್ನು ಇದು ಒದಗಿಸಲಿದ್ದು 1280 720 ಎಚ್ ಡಿ ರೆಸಲ್ಯೂಶನ್ ಅನ್ನು ಇದು ನೀಡಲಿದೆ.

ಕ್ವಾಡ್ ಕೋರ್ ಮೀಡಿಯಾ ಟೆಕ್ MT6582 ಪ್ರೊಸೆಸರ್ ಇದರಲ್ಲಿದ್ದು 1 ಜಿಬಿ ರ್‌ಯಾಮ್ ನೊಂದಿಗೆ ನಮಗೆ ದೊರೆಯಲಿದೆ. ಆಂಡ್ರಾಯ್ಡ್ 4.2 (ಜೆಲ್ಲಿ ಬೀನ್) ಓಎಸ್ ನಲ್ಲಿ ಸಹ ಡಿವೈಸ್ ರನ್ ಆಗುತ್ತದೆ. 8MP ರಿಯರ್ ಕ್ಯಾಮೆರಾವನ್ನು ಇದು ಹೊಂದಿದ್ದು ಇದರಲ್ಲಿ LED ಫ್ಲ್ಯಾಶ್ ಹಾಗೂ 2 MP ಫ್ರಂಟ್ ಫೇಸಿಂಗ್ ಶೂಟರ್ ಇದೆ. ಆಂತರಿಕ ಸಂಗ್ರಹಣೆ ಸಾಮರ್ಥ್ಯ 4 ಜಿಬಿಯಾಗಿದ್ದು ಮೈಕ್ರೋ ಎಸ್ ಡಿ ಮೂಲಕ ಇದನ್ನು 32 ಜಿಬಿವರೆಗೆ ವಿಸ್ತರಿಸಬಹುದಾಗಿದೆ. ಕಂಪೆನಿ ಒದಗಿಸುವ 2000 mAh ಬ್ಯಾಟರಿ ಇದರಲ್ಲಿದ್ದು ಇದು 7 ಗಂಟೆಗಳ ಟಾಕ್ ಟೈಮ್ ಸಾಮರ್ಥ್ಯವನ್ನು ಈ ಫೋನ್ ನೀಡಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot