ಗೆಲಾಕ್ಸಿ ಎಸ್4 ಗೆ ಪೈಪೋಟಿ ನೀಡಲು ಬರುತ್ತಿದೆ ಕ್ಯಾನ್‌ವಾಸ್4
ಮೈಕ್ರೋಮ್ಯಾಕ್ಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಗೆಲಾಕ್ಸಿ ಎಸ್4ಗೆ ಪೈಪೋಟಿ ನೀಡಲು ಮೈಕ್ರೋಮ್ಯಾಕ್ಸ್ ಬಿಡುಗಡೆ ಮಾಡುತ್ತಿರುವ ಕ್ಯಾನ್‌ವಾಸ್ 4 ಸದ್ಯದಲ್ಲೇ ಆನ್‌ಲೈನ್ ಶಾಪಿಂಗ್ ಬರಲಿದೆ. ಈ ಸಂಬಂಧ ಆನ್‌ಲೈನ್ ಶಾಪಿಂಗ್ ತಾಣ ಸಾಹೋಲಿಕ್ ಈ ಮೊಬೈಲ್ ಬರಲಿರುವುದನ್ನು ಪ್ರಕಟಿಸಿದೆ. ಗ್ರಾಹಕರು ಇಮೇಲ್ ಐಡಿ ದಾಖಲಿಸಿ ಮಾಹಿತಿ ಪಡೆಯಬಹುದಾಗಿದೆ.
ಈ ಹಿಂದೆ ಕ್ಯಾನ್‌ವಾಸ್ 116 ಬಿಡುಗಡೆಯಾಗುವ ಹೇಗೆ ಭಾರೀ ಪ್ರಚಾರ ಪಡೆದಿತ್ತು, ಅದೇ ರೀತಿ ಈ ಸ್ಮಾರ್ಟ್‌ಫೋನ್ ಈಗ ಭಾರೀ ಪ್ರಚಾರ ಪಡೆದಿದೆ. ಕೆಲವೊಂದು ಮಾಹಿತಿಗಳ ಪ್ರಕಾರ ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4 ಪೈಪೋಟಿ ನೀಡುವುದಕ್ಕಾಗಿ ಈ ಸ್ಮಾರ್ಟ್‌ಫೋನ್‌ನ್ನು ಮೈಕ್ರೋಮ್ಯಾಕ್ಸ್ ಬಿಡುಗಡೆ ಮಾಡುತ್ತಿದೆ,ಜೊತಗೆ ಅಕ್ಟಾ ಕೋರ್ ಪ್ರೊಸೆಸರ್ ಫುಲ್ ಎಚ್‌ಡಿ ಸ್ಕ್ರೀನ್‌ನೊಂದಿಗೆ ಈ ಸ್ಮಾರ್ಟ್‌ಫೋನ್ ಬರುತ್ತದೆ ಎನ್ನುವ ಸುದ್ದಿಗಳು ಈಗ ಹರಿದಾಡತೊಡಗಿದೆ. ಕಡಿಮೆ ಬಜೆಟ್‌ನಲ್ಲಿ ಗುಣಮಟ್ಟವನ್ನು ಫೋನ್ ನೀಡುವುದೇ ನಮ್ಮ ಗುರಿ ಎಂದು ಹೇಳಿಕೊಂಡು ಬಂದಿರುವ ಮೈಕ್ರೋಮ್ಯಾಕ್ಸ್ ಈ ಸ್ಮಾರ್ಟ್‌ಫೋನ್ ಬೆಲೆಯನ್ನು ಇಪ್ಪತ್ತು ಸಾವಿರದ ಒಳಗೆ ನಿಗದಿ ಪಡಿಸುವ ಸಾಧ್ಯತೆ ಯಿದೆ ಎಂದು ಹೇಳಲಾಗುತ್ತಿದೆ.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4
ವಿಶೇಷತೆ:
- 5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1920 x 1080 ಪಿಕ್ಸೆಲ್)
- ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
- 8GB ಆಂತರಿಕ ಮೆಮೊರಿ
- 2GB RAM
- 13 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್, ಆಟೋ ಫೋಕಸ್)
- 5 ಎಂಪಿ ಮುಂದುಗಡೆ ಕ್ಯಾಮೆರಾ
- 3ಜಿ,ವೈಫೈ,ಬ್ಲೂಟೂತ್,ಮೈಕ್ರೋ ಯುಎಸ್‌ಬಿ
- 32/64GBವರೆಗೆ ವಿಸ್ತರಿಸಹುದಾದ ಶೇಖರಣಾ ಸಾಮರ್ಥ್ಯ
- 2300mAh ಬ್ಯಾಟರಿ

ಗೆಲಾಕ್ಸಿ ಎಸ್4 ಗೆ ಪೈಪೋಟಿ ನೀಡಲು ಬರುತ್ತಿದೆ ಕ್ಯಾನ್‌ವಾಸ್4

ಗೆಲಾಕ್ಸಿ ಎಸ್4 ಗೆ ಪೈಪೋಟಿ ನೀಡಲು ಬರುತ್ತಿದೆ ಕ್ಯಾನ್‌ವಾಸ್4

ಗೆಲಾಕ್ಸಿ ಎಸ್4 ಗೆ ಪೈಪೋಟಿ ನೀಡಲು ಬರುತ್ತಿದೆ ಕ್ಯಾನ್‌ವಾಸ್4

ಗೆಲಾಕ್ಸಿ ಎಸ್4 ಗೆ ಪೈಪೋಟಿ ನೀಡಲು ಬರುತ್ತಿದೆ ಕ್ಯಾನ್‌ವಾಸ್4

ಗೆಲಾಕ್ಸಿ ಎಸ್4 ಗೆ ಪೈಪೋಟಿ ನೀಡಲು ಬರುತ್ತಿದೆ ಕ್ಯಾನ್‌ವಾಸ್4

ಗೆಲಾಕ್ಸಿ ಎಸ್4 ಗೆ ಪೈಪೋಟಿ ನೀಡಲು ಬರುತ್ತಿದೆ ಕ್ಯಾನ್‌ವಾಸ್4

ಗೆಲಾಕ್ಸಿ ಎಸ್4 ಗೆ ಪೈಪೋಟಿ ನೀಡಲು ಬರುತ್ತಿದೆ ಕ್ಯಾನ್‌ವಾಸ್4

Click it and Unblock the Notifications