ಗೆಲಾಕ್ಸಿ ಎಸ್ 4ಗೆ ಫೈಟ್ ನೀಡಲು ಬರುತ್ತಿದೆ ಕ್ಯಾನ್‌ವಾಸ್ 4
ಮೈಕ್ರೋಮ್ಯಾಕ್ಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಮೈಕ್ರೋಮ್ಯಾಕ್ಸ್ ಸದ್ಯದಲ್ಲೇ ಕ್ಯಾನ್‌ವಾಸ್ ಸರಣಿಯಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಕ್ಯಾನ್‌ವಾಸ್ 4 ಎಂಬ ಹೆಸರಿನಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದ್ದು, ಜೂನ್ 28ರಿಂದ ಮುಂಗಡವಾಗಿ ಬುಕ್ಕಿಂಗ್ ಮಾಡಬಹುದು ಎಂದು ಹೇಳಿದೆ. ಈ ಹಿಂದೆ ಕ್ಯಾನ್‌ವಾಸ್ 116 ಬಿಡುಗಡೆಯಾಗುವ ಹೇಗೆ ಭಾರೀ ಪ್ರಚಾರ ಪಡೆದಿತ್ತು, ಅದೇ ರೀತಿ ಈ ಸ್ಮಾರ್ಟ್‌ಫೋನ್ ಈಗ ಭಾರೀ ಪ್ರಚಾರ ಪಡೆದಿದೆ. ಕೆಲವೊಂದು ಮಾಹಿತಿಗಳ ಪ್ರಕಾರ ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್4 ಪೈಪೋಟಿ ನೀಡುವುದಕ್ಕಾಗಿ ಈ ಸ್ಮಾರ್ಟ್‌ಫೋನ್‌ನ್ನು ಮೈಕ್ರೋಮ್ಯಾಕ್ಸ್ ಬಿಡುಗಡೆ ಮಾಡುತ್ತಿದೆ,ಜೊತಗೆ ಅಕ್ಟಾ ಕೋರ್ ಪ್ರೊಸೆಸರ್ ಫುಲ್ ಎಚ್‌ಡಿ ಸ್ಕ್ರೀನ್‌ನೊಂದಿಗೆ ಈ ಸ್ಮಾರ್ಟ್‌ಫೋನ್ ಬರುತ್ತದೆ ಎನ್ನುವ ಸುದ್ದಿಗಳು ಈಗ ಹರಿದಾಡತೊಡಗಿದೆ. ಕಡಿಮೆ ಬಜೆಟ್‌ನಲ್ಲಿ ಗುಣಮಟ್ಟವನ್ನು ಫೋನ್ ನೀಡುವುದೇ ನಮ್ಮ ಗುರಿ ಎಂದು ಹೇಳಿಕೊಂಡು ಬಂದಿರುವ ಮೈಕ್ರೋಮ್ಯಾಕ್ಸ್ ಈ ಸ್ಮಾರ್ಟ್‌ಫೋನ್ ಬೆಲೆಯನ್ನು ಇಪ್ಪತ್ತು ಸಾವಿರದ ಒಳಗೆ ನಿಗದಿ ಪಡಿಸುವ ಸಾಧ್ಯತೆ ಯಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಲ್ಲಿ ಈ ಸ್ಮಾರ್ಟ್‌ಫೋನ್ ಏನೆಲ್ಲ ವಿಶೇಷತೆಗಳು ಒಳಗೊಂಡಿದೆ ಎನ್ನುವುದಕ್ಕೆ ಕೆಲವು ಮಾಹಿತಿಗಳು ಲೀಕ್ ಆಗಿವೆ. ಈ ವಿಶೇಷತೆಗಳ ಮಾಹಿತಿಗ ಇಲ್ಲಿದೆ.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ 4
ವಿಶೇಷತೆ:
5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
8/16GB ಆಂತರಿಕ ಮೆಮೊರಿ
2GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್, ಆಟೋ ಫೋಕಸ್)
5 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್,ಮೈಕ್ರೋ ಯುಎಸ್‌ಬಿ
32/64GBವರೆಗೆ ವಿಸ್ತರಿಸಹುದಾದ ಶೇಖರಣಾ ಸಾಮರ್ಥ್ಯ
Click Here For New Micromax Canvas 4 Smartphones Gallery

ಗೆಲಾಕ್ಸಿ ಎಸ್ 4ಗೆ ಫೈಟ್ ನೀಡಲು ಬರುತ್ತಿದೆ ಕ್ಯಾನ್‌ವಾಸ್ 4

ಗೆಲಾಕ್ಸಿ ಎಸ್ 4ಗೆ ಫೈಟ್ ನೀಡಲು ಬರುತ್ತಿದೆ ಕ್ಯಾನ್‌ವಾಸ್ 4



Click it and Unblock the Notifications








