ಮೈಕ್ರೋಮ್ಯಾಕ್ಸ್‌ ಕ್ಯಾನ್ವಾಸ್‌ ಎ100 vs ಐಬಾಲ್‌ ಆಂಡಿ 5ಸಿ

By Super
|

ಮೈಕ್ರೋಮ್ಯಾಕ್ಸ್‌ ಕ್ಯಾನ್ವಾಸ್‌ ಎ100 vs ಐಬಾಲ್‌ ಆಂಡಿ 5ಸಿ
ಕಡಿಮೆ ಬೆಲೆಯಲ್ಲಿನ ಸ್ಮಾರ್ಟ್‌ಫೋನ್ಸ್‌, ಟ್ಯಾಬ್ಲೆಟ್ಸ್‌ ಹಾಗೂ ಫಾಬ್ಲೆಟ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದಂತೆಯೇ ತಯಾರಕರುಗಳು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಒಂದರ ನಂತರ ಒಂದರಂತೆ ಅಗ್ಗದ ಬೆಲೆಯ ಸಾಧನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದ್ದಾರೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಕೊಂಚ ದೊಡ್ಡಗಾತ್ರದ ಫಾಬ್ಲೆಟ್‌ಗಳನ್ನು ಖರೀದಿಸುವತ್ತ ಹೆಚ್ಚು ಆಸಕ್ತಿ ತೊರುತ್ತಿದ್ದಾರೆ, ಇದೇ ವೇಳೆ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌ನಂತಹ ಸಾಧನಗಳು ಮಾರುಕಟ್ಟೆಗೆ ಬಂದಮೇಲಂತು ಗ್ರಾಹಕರು ಸ್ಮಾರ್ಟ್‌ಫೊನ್‌ ಹಾಗೂ ಟ್ಯಾಬ್ಲೆಟ್‌ಗಳ ಬದಲಾಗಿ ಹೆಚ್ಚು ಫಾಬ್ಲೆಟ್‌ಗಳತ್ತ ಮುಖ ಮಾಡಿದ್ದಾರೆ.

ಇದೇ ಹಾದಿಯಲ್ಲಿ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಸ್ಥಳೀಯ ತಯಾರಕರು ಗಳಾದಂತಹ ಮೈಕ್ರೋಮ್ಯಾಕ್ಸ್‌ ಹಾಗೂ ಐಬಾಲ್‌ ಸಂಸ್ಥೆಗಳೂ ಕೂಡ ಅಗ್ಗದ ಬೆಲೆಯಲ್ಲಿನ ಕ್ಯಾನ್ವಾಸ್‌ ಎ100 ಹಾಗೂ ಆಂಡಿ 5ಸಿ ಎಂಬ ಹೆಸರಿನ ನೂತನ ಫಾಬ್ಲೆಟ್‌ಗಳನ್ನು ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ, ಎರಡೂ ಕೂಡ ಡ್ಯುಯೆಲ್‌ ಸಿಮ್‌ ಹಾಗೂ ಆಂಡ್ರಾಯ್ಡ್‌ ಐಸ್ಕ್ರೀಮ್‌ ಸ್ಯಾಂಡ್ವಿಚ್‌ ಚಾಲಿತ ಫಾಬ್ಲೆಟ್‌ಗಳಾಗಿದ್ದು ಆಕರ್ಷಕ ಫೀಚರ್ಸ್‌ಗಳಿಂದ ಕೂಡಿದೆ.

ಅಂದಹಾಗೆ ನೀವು ಕೂಡ ಫಾಬ್ಲೆಟ್‌ ಪ್ರಿಯರಾಗಿದ್ದಲ್ಲಿ ಈ ಎರಡು ಮಾದರಿಗಳಲ್ಲಿ ಯಾವುದನ್ನು ಖರೀದಿಸುವುದು ಎಂದು ಆಲೋಚಿಸುತ್ತದ್ದಲ್ಲಿ ಮೊದಲಿಗೆ ಇವೆರೆಡರ ನಡುವಿನ ಹೋಲಿಕೆಯನ್ನು ಒಮ್ಮೆ ಓದಿನೋಡಿ ವಿಶೇಷತೆಗಳನ್ನು ತಿಳಿದನಂತರ ಖರೀದಿಗೆ ಮುಂದಾಗುವುದು ಸೂಕ್ತ.

ಸುತ್ತಳತೆ ಹಾಗೂ ತೂಕ: ಆಂಡಿ 5c ಸುತ್ತಳತೆ ಕುರಿತಾಗಿ ತಯಾರಕರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ ಅಂದಹಾಗೆ ಮೈಕ್ರೋಮ್ಯಾಕ್ಸ ಕ್ಯಾನ್ವಾಸ್‌ A100 ನ ಸುತ್ತಳತೆ 72.6 x 142.2 x 11.9 mm ಹಾಗೂ 168 ಗ್ರಾಂ ತೂಕವಿದೆ.

ದರ್ಶಕ: ಈ ವಿಚಾರದಲ್ಲಿ ಎರಡೂ ಫಾಬ್ಲೆಟ್‌ಗಳಲ್ಲಿ 5 ಇಂಚಿನ ದರ್ಶಕ ಹೊಂದಿದ್ದು 480 x 800 ಒಳಗೊಂಡಿವೆ.

ಪ್ರೊಸೆಸರ್‌: ಮೈಕ್ರೋಮ್ಯಾಕ್ಸ ಕ್ಯಾನ್ವಾಸ್‌ 1GHz ಕ್ವಾಲ್ಕಾಮ್‌ ಸ್ಕಾರ್ಪಿಯನ್‌ ಪ್ರೊಸೆಸರ್‌ ಹೊಂದಿದ್ದರೆ, ಆಂಡಿ 5c ನಲ್ಲಿ 1GHz ಕೊರ್ಟೆಕ್ಸ್‌ A9 ಪ್ರೊಸೆಸರ್‌ ನಿಂದ ಕೂಡಿದೆ.

ಆಪರೇಟಿಂಗ್‌ ಸಿಸ್ಟಂ: ಎರೆಡೂ ಫಾಬ್ಲೆಟ್‌ಗಳು ಆಂಡ್ರಾಯ್ಡ್‌ 4.0 ಯಸ್‌ ಕ್ರೀಮ್‌ ಸ್ಯಾಂಡ್ವಿಚ್‌ ಆಪರೇಟಿಂಗ್ ಸಿಸ್ಟಂ ಹೊಂದಿವೆ.

ಕ್ಯಾಮೆರಾ: ಮೈಕ್ರೋಮ್ಯಾಕ್ಸ ಕ್ಯಾನ್ವಾಸ್‌ A100 and ಆಂಡಿ 5c ಎರೆಡರಲ್ಲೂ 5MP ಕ್ಯಾಮೆರಾ ಹಾಗೂ LED ಫ್ಲಾಷ್‌ ಸೇರಿದಂತೆ ವಿಡಿಯೋ ಕರೆಗಾಗಿ 0.3MP ನ ಮುಂಬದಿಯ ಕ್ಯಾಮೆರಾ ಹೊಂದಿವೆ.

ಸ್ಟೋರೇಜ್‌: ಮೈಕ್ರೋಮ್ಯಾಕ್ಸ ಕ್ಯಾನ್ವಾಸ್‌ A100 ನಲ್ಲಿ 2GB ಆಂತರಿಕ ಮೆಮೊರಿ ಹಾಗೂ 512MB RAM ಹೊಂದಿದೆ,ಮತ್ತೊಂದೆಡೆ ಆಂಡಿ 5c ನಲ್ಲಿ 4GB ಆಂತರಿಕ ಮೆಮೊರಿಯೊಂದಿಗೆ 512MB RAM ನಿಂದ ಕೂಡಿದೆ. ಅಂದಹಾಗೆ ಎರೆಡೂ ಫಾಬ್ಲೆಟ್‌ಗಳ ಮೆಮೊರಿಯನ್ನು 32GB ಗಳವರೆಗೂ ವಿಸ್ತರಿಸಿಕೊಳ್ಳ ಬಹುದಾಗಿದೆ.

ಕನೆಕ್ಟಿವಿಟಿ: ಈ ವಿಚಾರದಲೂ ಕೂಡ ಎರಡೂ ಫಾಬ್ಲೆಟ್‌ಗಳು 3G ಜೊತೆಗೆ HSDPA, 7.2 Mbps; HSUPA, 5.76 Mbps, ಬ್ಲೂಟೂತ್‌ ನೊಂದಿಗೆ A2DP, Wi-Fi 802.11 b/g/n ಹಾಗೂ ಮೈಕ್ರೋ USB 2.0 ಹೊಂದಿವೆ.

ಬ್ಯಾಟರಿ: ಮೈಕ್ರೋಮ್ಯಾಕ್ಸ ಕ್ಯಾನ್ವಾಸ್‌ A100 ನಲ್ಲಿ 2,000 mAh Li-ion ಬ್ಯಾಟರಿ ಇದ್ದು 5 ಗಂಟೆಗಳ ಟಾಕ್‌ಟೈಮ್‌ ಹಾಗೂ 180 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ, ಅಂದಹಾಗೆ ಆಂಡಿ 5c ನಲ್ಲಿ 2,300 mAh Li-ion ಬ್ಆಟರಿ ಇದ್ದು ವಿವರಗಳನ್ನು ಬಹಿರಂಗ ಪಡಿಸಲಾಗಿಲ್ಲ.

ಬೆಲೆ: ಅಗ್ಗದ ಬೆಲೆಯ ಫಾಬ್ಲೆಟ್‌ಗಳಾದ್ದರಿಂದ, ಮೈಕ್ರೋಮ್ಯಾಕ್ಸ ಕ್ಯಾನ್ವಾಸ್‌ A100 ರೂ. 9,999 ಬೆಲೆಗೆ ಲಭ್ಯವಿದ್ದು ಹಾಗೂ ಆಂಡಿ 5c ಕೊಂಚ ದುಬಾರಿಯಾಗಿದ್ದು ರೂ.12,999 ಬೆಲೆಗೆ ಲಭ್ಯವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X