ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ A100 vs ಕಾರ್ಬನ್ A18

ಅಂದಹಾಗೆ ಇತ್ತೀಚೆಗೆ ಫಾಬ್ಲೆಟ್‌ಗಳ ಟ್ರೆಂಡ್ ಶುರುವಾಗಿದ್ದು, ಗ್ರಾಹಕರನ್ನು ಹೆಚ್ಚಾಗಿ ತನ್ನತ್ತ ಸೆಳೆಯುತ್ತಿದೆ. ಈ ಸಾಕಿಗೆ ಇತ್ತೀಚೆಗೆ ತಾನೆ ಸ್ಥಳೀಯ ತಯಾರಕರಾದ ಐಬಾಲ್ ಹಾಗೂ ಕಾರ್ಬನ್ ಸಂಸ್ಥೆಗಳು ನೂತನವಾಗಿ ಕೈಗೆಟಕುವ ಬೆಲೆಯಲ್ಲಿ ಹೊಸ ಮಾದರಿಯ ಮೈಕ್ರೋಮ್ಯಾಕ್ಸ ಕ್ಯಾನ್ವಾಸ್ A100 ಹಾಗೂ ಕಾರ್ಬನ್ A18 ಫಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.
ಮಾರುಕಟ್ಟೆಗೆ ಕೆಲದಿನಗಳ ಹಿಂದೆಯಷ್ಟೇ ಕಾಲಿರಿಸಿರುವ ಈ ನೂತನ ಫಾಬ್ಲೆಟ್‌ಗಳಲ್ಲಿ ಯಾವುದನ್ನು ಖರೀದಿಸುವುದು ಎಂದು ನೀವು ಆಲೋಚಿಸುತ್ತದ್ದಲ್ಲಿ ಖರೀದಿಗೂ ಮುನ್ನ ಇವೆರಡರ ನಡುವಿನ ಹೋಲಿಕೆ ಹಾಗೂ ವಿಶೇಷತೆ ಕುರಿತು ತಿಳಿದುಕೊಳ್ಳಿ.
ಗಾತ್ರಾ ಹಾಗೂ ತೂಕ: ಕಾರ್ಬನ್ A18 ಕುರಿತಾದ ಮಾಹಿತಿಯನ್ನು ಸಂಸ್ಥೆ ಈವರೆಗೂ ಹೊರಹಾಕಿಲ್ಲ, ಅಂದಹಾಗೆ ಮೈಕ್ರೋಮ್ಯಾಕ್ಸ ಕ್ಯಾನ್ವಾಸ್ A100 ಫಾಬ್ಲೆಟ್ 72.6 x 142.2 x 11.9 mm ಸುತ್ತಳತೆಯೊಂದಿಗೆ 168 ಗ್ರಾಂ ತೂಕವಿದೆ.
ದರ್ಶಕ: ಮೈಕ್ರೋಮ್ಯಾಕ್ಸ ಕ್ಯಾನ್ವಾಸ್ A100 ನಲ್ಲಿ 5 ಇಂಚಿನ ಟಚ್‌ಸ್ಕ್ರೀನ್ ದರ್ಶಕ ಹಾಗು 480 x 800 ಪಿಕ್ಸೆಲ್ಸ್ ಹೊಂದಿದ್ದರೆ. ಕಾರ್ಬನ್ A18 ನಲ್ಲಿ 4.3 ಇಂಚಿನ ಮಲ್ಟಿಟಚ್ ಟಚ್‌ಸ್ಕ್ರೀನ್ ದರ್ಶಕ ಹಾಗೂ 480 x 800 ಪಿಕ್ಸೆಲ್ಸ್ ಹೊಂದಿದೆ.
ಆಪರೇಟಿಂಗ್ ಸಿಸ್ಟಂ: ಎರೆಡೂ ಫಾಬ್ಲೆಟ್‌ಗಳು ಆಂಡ್ರಾಯ್ಡ್ 4.0 ಐಸ್‌ಕ್ರೀಮ್ ಸ್ಯಾಂಡ್ವಿಚ್ ಆಪರೇಟಿಂಗ್ ಸಿಸ್ಟಂ ಚಾಲಿತ ವಾಗಿದೆ.
ಪ್ರೊಸೆಸರ್: ಮೈಕ್ರೋಮ್ಯಾಕ್ಸ ಕ್ಯಾನ್ವಾಸ್ A100 ಹಾಗೂ ಕಾರ್ಬನ್ A18 ಎರಡರಲ್ಲೂ 1GHz ಪ್ರೊಸೆಸರ್ ಹೊಂದಿವೆ.
ಕ್ಯಾಮೆರಾ: ಕ್ಯಾನ್ವಾಸ್ A100 ನಲ್ಲಿ 5MP ಕ್ಯಾಮೆರಾ ಇದ್ದು LED ಫ್ಲಾಷ್ ಹಾಗೂ ಆಟೋ ಫೋಕಸ್ ಹೊಂದಿದ್ದು ವಿಡಿಯೋ ಕರೆಗಾಗಿ 0.3MP ಮುಂಬದಿಯ ಕ್ಯಾಮೆರಾ ಹೊಂದಿದೆ. ಮತ್ತೊಂದೆಡೆ, ಕಾರ್ಬನ್ A18 ನಲ್ಲಿ 8MP ಹಿಂಬದಿಯ ಕ್ಯಾಮೆರಾ ಹಾಗೂ LED ಹೊಂದಿದ್ದು ವಿಡಿಯೋ ಕರೆಗಾಗಿ 0.3MP ಮುಂಬದಿಯ ಕ್ಯಾಮೆರಾ ಹೊಂದಿದೆ..
ಸ್ಟೋರೇಜ್: ಈ ವಿಭಾಗದಲ್ಲಿ ಕ್ಯಾನ್ವಾಸ್ A100 ನಲ್ಲಿ 2GB ಆಂತರಿಕ ಸ್ಟೋರೇಜ್ ಹಾಗೂ 512MB RAM ಹೊಂದಿದ್ದರೆ ಕಾರ್ಬನ್ A18 ನಲ್ಲಿ 1GB ಆಂತರಿಕ ಮೆಮೊರಿ ಹಾಗೂ 512MB RAM ಒಳಗೊಂಡಿದೆ. ಅಂದಹಾಗೆ ಎರಡೂ ಫಾಬ್ಲೆಟ್‌ಗಳಲ್ಲಿನ ಮೆಮೊರಿಯನ್ನು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 32GB ವರೆಗೂ ವಿಸ್ತರಿಸ ಬಹುದಾಗಿದೆ..
ಕನೆಕ್ಟಿವಿಟಿ: ಎರಡೂ ಫಾಬ್ಲೆಟ್‌ಗಳಲ್ಲಿ 3G, ಮೈಕ್ರೋ USB 2.0, ಬ್ಲೂಟೂತ್ ಹಾಗೂ Wi-Fi ಫೀಚರ್ಸ್‌ನಿಂದ ಕೂಡಿದೆ.
ಬ್ಯಾಟರಿ: ಕ್ಯಾನ್ವಾಸ್ A100 ನಲ್ಲಿ 2,000 mAh Li-ion ಬ್ಯಾಟರಿ ಇದ್ದು 5 ಗಂಟೆಗಳ ಟಾಕ್ ಟೈಮ್ ಹಾಗೂ 180 ಗಂಟೆಗಳ ಸ್ಟ್ಯಾಂಡ್‌ಬೈ ನೀಡಿದರೆ, ಕಾರ್ಬನ್ A18 ನಲ್ಲಿ 1,500 mAh ಬ್ಯಾಟರಿ ಹಾಗು 5 ಗಂಟೆಗಳ ಟಾಕ್ ಟೈಮ್ ಸೇರಿದಂತೆ 200 ಗಂಟೆಗಳ ಸ್ಟ್ಯಾಂಡ್‌ಬೈ ನೀಡುತ್ತದೆ..
ಬೆಲೆ: ಖರೀದಿಸುವುದಾದರೆ ಮೈಕ್ರೋಮ್ಯಾಕ್ಸ ಕ್ಯಾನ್ವಾಸ್ A100, ರೂ. 9,999 ಬೆಲೆಗೆ ಲಭ್ಯವಿದೆ ಹಾಗು ಕಾರ್ಬನ್ A18 ರೂ 9,790 ಗಳಿಗೆ ಖರೀದಿಸ ಬಹುದಾಗಿದೆ.


Click it and Unblock the Notifications