Subscribe to Gizbot

ಕ್ಯಾನ್‌ವಾಸ್ ಡ್ಯುಯೆಟ್ AE90 ಆಕರ್ಷಕ ಫೋನ್ ಹೇಗೆ?

Written By:

ಭಾರತ ಮತ್ತು ಇತರ ದೇಶಗಳಲ್ಲಿ ಮಧ್ಯಮ ಶ್ರೇಣಿಯ ಫೋನ್‌ಗಳು ಈಗ ಫೋನ್ ಪ್ರಿಯರ ಕಣ್ಮಣಿ ಆಗುತ್ತಿದ್ದು ಹೆಚ್ಚಿನ ಪ್ರಖ್ಯಾತ ಕಂಪೆನಿಗಳು ಈ ದಿಸೆಯಲ್ಲಿ ಉತ್ತಮ ವೈಶಿಷ್ಟ್ಯಗಳಿಂದ ಕೂಡಿದ ಮತ್ತು ಕೈಗೆಟಕುವ ಬೆಲೆಯಲ್ಲಿ ದೊರೆಯಬಹುದಾದ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯನ್ನು ಮಾಡುತ್ತಿದ್ದು ಮುಂಚೂಣಿಯಲ್ಲಿರುವ ಕಂಪೆನಿಗಳಲ್ಲಿ ಮೊತ್ತ ಮೊದಲು ನೆನಪಿಗೆ ಬರುವುದು ಮೈಕ್ರೋಮ್ಯಾಕ್ಸ್ ಆಗಿದೆ.

ಕಂಪೆನಿಯು ಇತ್ತೀಷೆಗಷ್ಟೇ ಕ್ಯಾನ್‌ವಾಸ್ ಬೀಟ್ ಅನ್ನು ರೂ 10,000 ದಲ್ಲಿ ಲಾಂಚ್ ಮಾಡಿದ್ದು, ಇದೇ ಬೆಲೆಯಲ್ಲಿ ಕ್ಯಾನ್‌ವಾಸ್ ಡ್ಯುಯೆಟ್ AE90 ಫೋನ್ ಅನ್ನು ಕಂಪೆನಿ ಲಾಂಚ್ ಮಾಡುತ್ತಿದೆ. ಇದು ಮೂಲ ಕ್ಯಾನ್‌ವಾಸ್ ಡ್ಯುಯೆಟ್ 2 ನ ಡೌನ್‌ಗ್ರೇಡೆಡ್ ಆವೃತ್ತಿಯಾಗಿ ಇದು ಕಂಡುಬರುತ್ತಿದೆ.

ಮೈಕ್ರೋಮ್ಯಾಕ್ಸ್‌ನಿಂದ ಇನ್ನೊಂದು ಧಮಾಕಾ

ಜನಪ್ರಿಯ ಮೈಕ್ರೋಮ್ಯಾಕ್ಸ್ ತನ್ನ ಬ್ಲಾಗ್‌ಸೈಟ್ ಆದ micromaxcanvas.co.in ಗೆ ಹೆಚ್ಚು ಲಕ್ಷ್ಯವನ್ನು ನೀಡಿದ್ದು ಕ್ಯಾನ್‌ವಾಸ್ ನೈಟ್ A350 ತಯಾರಕರು Canvas Duet AE90 ಆಂಡ್ರಾಯ್ಡ್ ಫೋನ್‌ನೊಂದಿಗೆ ಕೂಡಲೇ ಬರುತ್ತಿದ್ದು ಇದು CDMA ಮತ್ತು GSM SIM ಗಳನ್ನು ಬೆಂಬಲಿಸಲಿದೆ.

ಸ್ಪೆಕ್ಸ್ ವೈಸ್ ಕ್ಯಾನ್‌ವಾಸ್ DuetAE90 4.5 ಇಂಚಿನ ಕ್ಯುಎಚ್‌ಡಿ (960 x 540) ಪಿಕ್ಸೆಲ್‌ ರೆಸಲ್ಯೂಶನ್‌ನೊಂದಿಗೆ ಬಂದಿದ್ದು 1.2GHz ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. ಪೋನ್‌ನಲ್ಲಿ ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಚಾಲನೆಯಾಗುತ್ತಿದ್ದು, 1800mAh ಬ್ಯಾಟರಿಯನ್ನು ಇದರಲ್ಲಿ ಜೋಡಿಸಲಾಗಿದೆ.

ಫೋನ್‌ನ ಫ್ರಂಟ್ ಕ್ಯಾಮೆರಾ 5 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ LED ಫ್ಲ್ಯಾಶ್ ಅನ್ನು ಹೊಂದಿದ್ದು ಸೆಕೆಂಡರಿ ಕ್ಯಾಮೆರಾವು VGA ಗುಣಮಟ್ಟದ ಫ್ರಂಟ್ ಫೇಸಿಂಗ್ ಶೂಟರ್ ಅನ್ನು ಹೊಂದಿದೆ. ಇದರ RAM ಮತ್ತು ಆಂತರಿಕ ಮೆಮೊರಿ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ.

ವರದಿಯು ಹೇಳುವಂತೆ, ಕ್ಯಾನ್‌ವಾಸ್ ಡ್ಯುಯೆಟ್ AE90 ಭಾರತದಲ್ಲಿ ಕೂಡಲೇ ಮಾರಾಟವಾಗಲಿದೆ, ಇದರ ಅಂದಾಜು ಬೆಲೆ ರೂ. 9,000 ಆಗಿದ್ದು ಮೈಕ್ರೋಮ್ಯಾಕ್ಸ್ ಅಭಿಮಾನಿಗಳ ಹೃದಯವನ್ನು ಈ ಫೋನ್ ಗೆಲ್ಲಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot