Subscribe to Gizbot

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್ ರೂ 6,999 ಕ್ಕೆ

Posted By:

ಕ್ಯಾನ್‌ವಾಸ್ ಫೈರ್ ಸ್ಮಾರ್ಟ್‌ಫೋನ್ @maheshtelecom ನಲ್ಲಿ ಕಂಡುಬಂದಿರುವ ಇದು ದೇಶದಾದ್ಯಂತ ಮೂರನೇ ವ್ಯಕ್ತಿ ಆನ್‌ಲೈನ್ ರೀಟೈಲರ್ Infibeam ನಲ್ಲಿ ರೂ 6,999 ಕ್ಕೆ ಇದೀಗ ಲಭ್ಯವಾಗುತ್ತಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್ A093 ಇನ್ನೊಂದು ಬಜೆಟ್ ಸ್ನೇಹಿ ಫೋನ್ ಆಗಿದ್ದು ಮಾರುಕಟ್ಟೆಯಲ್ಲಿ ಈಗಾಗಲೇ ಕಾರುಬಾರು ಮಾಡುತ್ತಿರುವ ಇತರ ಸ್ಮಾರ್ಟ್‌ಫೋನ್‌ಗಳಾದ Xolo Q600s, ಮೋಟೋ ಇ, ಲಾವಾ ಐರಿಸ್ X1, ಸ್ವೈಪ್ ಕನೆಕ್ಟ್ 5.0 ಮತ್ತು ತನ್ನದೇ ಡಿವೈಸ್ ಆದ ಕ್ಯಾನ್‌ವಾಸ್ ಯುನೈಟ್ 2, ಕ್ಯಾನ್‌ವಾಸ್ ಎಂಗೇಜ್‌ಗೆ ಭರ್ಜರಿ ಪೈಪೋಟಿಯನ್ನು ನೀಡುವುದು ಖಾತ್ರಿಯಾಗಿದೆ.

ಕ್ಯಾನ್‌ವಾಸ್ ಫೈರ್‌ನಿಂದ ಇತರೆ ಫೋನ್‌ಗೆ ಪೈಪೋಟಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್ A093: ಪ್ರಮುಖ ವೈಶಿಷ್ಟ್ಯಗಳು
ಇದು 4 ಇಂಚಿನ WVGA ಡಿಸ್‌ಪ್ಲೇಯೊಂದಿಗೆ ಬಂದಿದ್ದು, 1.3GHz ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. ಈ ಫೋನ್ ಕಡಿಮೆ RAM ಅನ್ನು ಒಳಗೊಂಡಿದೆ ಅಂದರೆ 512ಎಮ್‌ಬಿಯಾಗಿದೆ. ಇದು 4ಜಿಬಿ ಮೆಮೊರಿ ಸಾಮರ್ಥ್ಯದೊಂದಿಗೆ ಬಂದಿದ್ದು ಇದನ್ನು ಎಸ್‌ಡಿ ಕಾರ್ಡ್ ಮೂಲಕ 32ಜಿಬಿಗೆ ವಿಸ್ತರಿಸಬಹುದಾಗಿದೆ. ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಫೈರ್ 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ಎಲ್‌ಇಡಿ ಫ್ಲ್ಯಾಶ್ ಅನ್ನು ಒಳಗೊಂಡಿದೆ. ಇದರೊಂದಿಗೆ VGA ಮುಂಭಾಗ ಕ್ಯಾಮೆರಾ, HSPA+, ಬ್ಲ್ಯೂಟೂತ್ 4.0, ವೈ-ಫೈ 802.11 b/g/n, GPS, ಡ್ಯುಯೆಲ್ ಸಿಮ್ ಬೆಂಬಲ ಹಾಗೂ 1750 mAh ಬ್ಯಾಟರಿ ಇದರಲ್ಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಕಿಟ್‌ಕ್ಯಾಟ್ ಸುವಾಸನೆಯನ್ನು ಪಸರಿಸಿದ ಮೋಟೋರೋಲಾ ಮೋಟೋ ಇ ಶ್ರೇಣಿಯ ಹ್ಯಾಂಡ್‌ಸೆಟ್‌ ಹಾದಿಯನ್ನೇ ಹೆಚ್ಚಿನ ಮಧ್ಯಮ ಶ್ರೇಣಿಯ ಫೋನ್‌ಗಳು ಅನುಸರಿಸುತ್ತಿದ್ದು ಕಿಟ್‌ಕ್ಯಾಟ್ ಓಎಸ್‌ ಅನ್ನೇ ತಮ್ಮ ಫೋನ್‌ನಲ್ಲಿ ಅಳವಡಿಸಿ ಮಾರುಕಟ್ಟೆಗೆ ಬಿಡುವ ಪ್ರಯತ್ನವನ್ನು ಮಾಡುತ್ತಿದೆ.

ಈಗ ಮಾರುಕಟ್ಟೆಗೆ ಕಾಲಿಡುತ್ತಿರುವ ಇನ್ನೊಂದು ಚೀನಾ ಹ್ಯಾಂಡ್‌ಸೆಟ್ Xiaomi ಹೆಚ್ಚು ಪ್ರಚಲಿತದಲ್ಲಿದೆ. ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಹ್ಯಾಂಡ್‌ಸೆಟ್‌ನ ಬೆಲೆಯನ್ನು ರೂ 14,999 ಎಂದು ಅಂದಾಜಿಸಲಾಗಿದ್ದು ಹಿಂದೆ ಇದ್ದ ಸ್ಮಾರ್ಟ್‌ಫೋನ್‌ಗಳಿಗಿಂತ ಭರ್ಜರಿ ನಿರೀಕ್ಷೆಯ ಸರಮಾಲೆಯನ್ನೇ ಈ ಫೋನ್ ಸೃಷ್ಟಿಸಿದೆ.

ಮಾರುಕಟ್ಟೆಯಲ್ಲಿರುವ ಉತ್ತಮ ಬ್ರ್ಯಾಂಡ್ ಫೋನ್‌ಗಳಾದ ಮೈಕ್ರೋಮ್ಯಾಕ್ಸ್, ಕಾರ್ಬನ್, ಲಾವಾ ಮತ್ತು ಇತರ ಫೋನ್‌ಗಳ ಸ್ಥಾನವನ್ನು ಕಬಳಿಸಲಿರುವ Xiaomi ತನ್ನದೇ ಫ್ಲ್ಯಾಗ್‌ಶಿಪ್ ಡಿವೈಸ್‌ಗಳನ್ನು ಮಾರುಕಟ್ಟೆಗೆ ಹೆಚ್ಚು ಹೆಚ್ಚು ತರುವ ಪ್ರಯತ್ನದಲ್ಲಿದೆ.

ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ!

Read more about:
English summary
Micromax Canvas fire A093 Now available for rs 6999
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot