Subscribe to Gizbot

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಚ್‌ಡಿ ಇನ್ನು 13,500 ಕ್ಕೆ

Written By:

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಯುದ್ಧದಲ್ಲಿ ಪ್ರಮುಖ ಸೇನಾನಿಗಳೆಂದರೆ ಮೈಕ್ರೋಮ್ಯಾಕ್ಸ್, ಕಾರ್ಬನ್ ಮತ್ತು ಲಾವಾ ಕಂಪೆನಿಗಳಾಗಿವೆ. ಇವುಗಳೂ ಪ್ರತಿಯೊಂದು ಸಮಯದಲ್ಲೂ ಅನನ್ಯವಾಗಿರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ತಂದು ಹುಬ್ಬೆರಿಸುವಂತೆ ಮಾಡುತ್ತವೆ.

ಇತ್ತೀಚಿನ ದಿನಗಳಲ್ಲಿ, ಸಿಕ್ಸ್ ಕೋರ್ ಮೊಬೈಲ್ ಸಿಪಿಯು ಆಧಾರಿತ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತಿವೆ. ಮೊದಲಿಗೆ ಕಾರ್ಬನ್ ಟೈಟಾನಿಯಮ್ ಹೆಕ್ಸಾದೊಂದಿಗೆ ಬಂದಿದ್ದು ತದನಂತರ, ಲಾವಾದ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಶ್ರೇಣಿ ಕ್ಸೋಲೋ ಲಾಂಚ್ ಆಯಿತು. ಇವೆರಡೂ ಫೋನ್‌ಗಳು 1.5GHz ಹೆಕ್ಸಾ ಕೋರ್ ಪ್ರೊಸೆಸರ್‌ನೊಂದಿಗೆ ಬಂದಿವೆ.

ಉತ್ತಮ ಬೆಲೆಯಲ್ಲಿ ಅತ್ಯುತ್ತಮ ಫೋನ್ ಕ್ಯಾನ್‌ವಾಸ್

ಇದನ್ನೇ ಅನುಸರಿಸಿಕೊಂಡು ಭಾರತೀಯ ಸ್ಮಾರ್ಟ್‌ಫೋನ್ ತಯಾರಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಕೂಡಾ ತನ್ನ ಹೆಕ್ಸಾ ಕೋರ್ ಸ್ಮಾರ್ಟ್‌ಫೋನ್ ಅನ್ನು ಸ್ಥಾಪಿಸಿದೆ. ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ HD A190 ಆಗಿರುವ ಈ ಡಿವೈಸ್ ದರ ರೂ 13,500 ಆಗಿದೆ. ಇದು ಕಪ್ಪು ಚಿನ್ನದ ಬಣ್ಣ ಮತ್ತು ಬಿಳಿ ಚಿನ್ನದ ಬಣ್ಣದಲ್ಲಿ ಬಂದಿವೆ.

ಕ್ಯಾನ್‌ವಾಸ್ ಎಚ್‌ಡಿ A190 ಪ್ರಮುಖ ವೈಶಿಷ್ಟ್ಯಗಳು
ಮೈಕ್ರೋಮ್ಯಾಕ್ಸ್ 5 ಇಂಚಿನ 1280 x 720 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬಂದಿದ್ದು ಗೋರಿಲ್ಲಾ ಗ್ಲಾಸ್ ಅನ್ನು ಒಳಗೊಂಡಿದೆ. ಕಾರ್ಬನ್, ಲಾವಾ ಒದಗಿಸುವಂತೆ ಕ್ಯಾನ್‌ವಾಸ್ A190 ನಲ್ಲಿ 1.5GHz ಮೀಡಿಯಾ ಟೆಕ್ MT6591 ಹೆಕ್ಸಾ ಕೋರ್ CPU ಇದೆ ಮತ್ತು ಡಿವೈಸ್‌ನ RAM ಸಾಮರ್ಥ್ಯ 1 ಜಿಬಿಯಾಗಿದೆ. ಇದು ಆಂಡ್ರಾಯ್ಡ್‌ನ ಇತ್ತೀಚಿನ ಆವೃತ್ತಿಯಾಗಿರುವ ಕಿಟ್‌ಕ್ಯಾಟ್ 4.4 ಓಎಸ್ ಅನ್ನು ಚಾಲನೆ ಮಾಡುತ್ತಿದ್ದು, 8ಜಿಬಿ ಮೆಮೊರಿ ಸಾಮರ್ಥ್ಯವನ್ನು ಫೋನ್ ಹೊಂದಿದೆ. ಇದನ್ನು ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ.

ಇದರ ರಿಯರ್ ಕ್ಯಾಮೆರಾ ಸಾಮರ್ಥ್ಯ 8 ಮೆಗಾಪಿಕ್ಸೆಲ್ ಆಗಿದ್ದು ಇದು LED ಫ್ಲ್ಯಾಶ್ ಅನ್ನು ಒಳಗೊಂಡಿದೆ. ಫೋನ್ 2 ಮೆಗಪಿಕ್ಸೆಲ್ ಫ್ರಂಟ್ ಫೇಸಿಂಗ್ ಶೂಟರ್ ಅನ್ನು ಕೂಡ ಹೊಂದಿದೆ. ಇತರೆ ವೈಶಿಷ್ಟ್ಯಗಳೆಂದರೆ 3ಜಿ, ಡ್ಯುಯೆಲ್ ಸಿಮ್, ವೈ-ಫೈ, ಬ್ಲ್ಯೂಟೂತ್ ಮತ್ತು 2000mAh ಬ್ಯಾಟರಿಯನ್ನು ಡಿವೈಸ್ ಒಳಗೊಂಡಿದೆ.

English summary
This article tells that Micromax Canvas HD Plus hexa core smartphone at rs 13,500.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot