Subscribe to Gizbot

ಇಂದು ಬಿಡುಗಡೆಯಾದ 'ಇನ್ಫಿನಿಟಿ' ಪೋನ್ ಮುಂದೆ ವಿವೋ, ಒಪ್ಪೋ, ಶಿಯೋಮಿ ಎಲ್ಲಾ ವೇಸ್ಟ್!!

Written By:

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಕಳೆದ ವಾರವಷ್ಟೆ ಅತ್ಯದ್ಬುತ 'ಇವೊಕ್ ಡ್ಯುಯಲ್ ನೋಟ್' ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಮೈಕ್ರೋಮ್ಯಾಕ್ಸ್ ಮತ್ತೆ ಭಾರಿ ಸುದ್ದಿಯಲ್ಲಿದೆ.! ಚೀನಾ ಮೊಬೈಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಭಾರಿ ಫೀಚರ್ಸ್ ಹೊಂದಿರುವ ''ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಇನ್ಫಿನಿಟಿ'' ಸ್ಮಾರ್ಟ್‌ಫೋನ್ ಅನ್ನು ಇಂದು ಬಿಡುಗಡೆ ಮಾಡಿದೆ.!!

5.7 ಇಂಚ್ ಡಿಸ್‌ಪ್ಲೇ, 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು ಇನ್ನು ಹಲವು ಅದ್ಬುತ ವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ ಅನ್ನು ಮೈಕ್ರೋಮ್ಯಾಕ್ಸ್ ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದ್ದು, ಹಾಗಾದರೆ, ಸ್ಮಾರ್ಟ್‌ಫೋನ್ ಫೀಚರ್ಸ್ ಏನು? ಬೆಲೆ ಎಷ್ಟು? ಬೇರೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಎಷ್ಟು?

ಡಿಸ್‌ಪ್ಲೇ ಎಷ್ಟು?

ಚೀನಾದ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಕ್ಯಾನ್ವಾಸ್ ಇನ್ಫಿನಿಟಿ 5.7 ಇಂಚ್ ಗಾತ್ರದ ಅತ್ಯದ್ಬುತ ಡಿಸ್‌ಪ್ಲೇ ಹೊಂದಿದೆ. 720x1440 ಪಿಕ್ಸೆಲ್ ರೆಸ್ಯೂಲೇಶನ್‌ನೊಂದಿಗೆ ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ಆಗುವಂತೆ ಈ ಫೋನ್ ಅನ್ನು ರೂಪಿಸಲಾಗಿದೆ.!!

ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್!

ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್!

ಇಷ್ಟು ದಿವಸ ಕೇವಲ ಮಿಡಿಯಾಟೆಕ್ ಪ್ರೊಸೆಸರ್‌ಗಳಿಗೆ ಸೀಮಿತವಾಗಿದ್ದ ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಇನ್ಫಿನಿಟಿ ಪೋನ್‌ನಲ್ಲಿ ಸ್ನ್ಯಾಪ್‌ಡ್ರಾಗನ್ 425 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಜೊತೆಗೆ ಆಂಡ್ರಾಯ್ಡ್ 7.0 ನ್ಯೂಗಾಕ್ಕೆ ಸ್ಮಾರ್ಟ್‌ಫೋನ್ ಸಪೋರ್ಟ್ ನೀಡಲಿದೆ!!

RAM ಮತ್ತು ROM ಎಷ್ಟು?

RAM ಮತ್ತು ROM ಎಷ್ಟು?

ಇಂದು ಬಿಡುಗಡೆಯಾದ ಕ್ಯಾನ್ವಾಸ್ ಇನ್ಫಿನಿಟಿ ಅತ್ಯದ್ಬುತ ಫೀಚರ್ಸ್ ಹೊಂದಿದ್ದು, 3GB RAM ಮತ್ತು 32GB ಆಂತರಿಕ ಮೆಮೊರಿಯನ್ನು ಹೊಂದಿದೆ. ಜೊತೆಗೆ ಮೈಕ್ರೊ SD ಕಾರ್ಡ್ ಮೂಲಕ 124GBವರೆಗೆ ಮೆಮೊರಿ ವಿಸ್ತರಿಸಬಹುದು.

16MP ಸೆಲ್ಫಿ ಕ್ಯಾಮೆರಾ!!

16MP ಸೆಲ್ಫಿ ಕ್ಯಾಮೆರಾ!!

ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಇನ್ಫಿನಿಟಿ ಪೋನ್ 16ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಒಪ್ಪೊ ಮತ್ತು ವಿವೋಗಳಿಗೆ ಸೆಡ್ಡು ಹೊಡೆಯಲು ಕ್ಯಾಮೆರಾಗೆ ಹೆಚ್ಚು ಪ್ರಾಶ್ಯಸ್ತ್ಯ ನೀಡಿದ್ದು, ಇದರ ಜೊತೆ 16 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ.!!

ಬ್ಯಾಟರಿ ಮತ್ತು ಇತರ ಫೀಚರ್ಸ್.!!

ಬ್ಯಾಟರಿ ಮತ್ತು ಇತರ ಫೀಚರ್ಸ್.!!

ಕ್ಯಾನ್ವಾಸ್ ಇನ್ಫಿನಿಟಿ 2900mAh ಲಿ-ಐಯಾನ್ ಬ್ಯಾಟರಿ ಹೊಂದಿದ್ದು, 240 ಗಂಟೆಗಳ ಸ್ಟ್ಯಾಂಡ್ಬೈ ನೀಡಲಿದೆ ಎಂದು ಮೈಕ್ರೋ ಮ್ಯಾಕ್ಸ್ ಹೊಂದಿದೆ. ಬ್ಯಾಟರಿ ವಿಷಯದಲ್ಲಿ ಮತ್ತಷ್ಟು ಅಪ್‌ಡೇಟ್ ಹೊಂದಿರುವ ಮೈಕ್ರೋಮ್ಯಾಕ್ಸ್ ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆದಿದೆ.

ಬೇರೆ ಏನೆಲ್ಲಾ ಫೀಚರ್ಸ್? ಬೆಲೆ ಎಷ್ಟು?

ಬೇರೆ ಏನೆಲ್ಲಾ ಫೀಚರ್ಸ್? ಬೆಲೆ ಎಷ್ಟು?

ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಇನ್ಫಿನಿಟಿ ಫೋನ್‌ನಲ್ಲಿ ಅತ್ಯಾಧುನಿಕ ಫೀಚರ್‌ಗಳಾದ ಫಿಂಗರ್ಪ್ರಿಂಟ್, 4G ವೋಲ್ಟ್ ಸೇರದಂತೆ ಬಹುತೇಕ ಎಲ್ಲಾ ಸೌಲಭ್ಯಗಳು ಲಭ್ಯವಿದ್ದು, ಮಾರುಕಟ್ಟೆಗೆ ಕೇವಲ 9,999 ರೂಪಾಯಿಗಳಿಗೆ ಬಿಡುಗಡೆಯಾಗಿದೆ.!!

ಓದಿರಿ:9,999ಕ್ಕೆ ರೆಡ್‌ಮಿಗೂ ಸೆಡ್ಡುಹೊಡೆಯುವ 'ಡ್ಯುಯಲ್ ಕ್ಯಾಮೆರಾ' ಫೋನ್ 'ಇವೊಕ್'!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
After launching the Evok Dual Note in India last week, Micromax on Tuesday launched the Canvas Infinity smartphone in India.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot