Subscribe to Gizbot

ಕ್ಯಾನ್‌ವಾಸ್ ನೈಟ್ ಕ್ಯಾಮಿಯೋ A290 ರೀಟೈಲ್ ತಾಣಗಳಲ್ಲಿ

Written By:

ಡೊಮೆಸ್ಟಿಕ್ ವೆಂಡೋರ್ ಮೈಕ್ರೋಮ್ಯಾಕ್ಸ್ ಇತ್ತೀಚೆಗೆ ಕ್ಯಾನ್‌ವಾಸ್ ನೈಟ್ ಕ್ಯಾಮಿಯೋ A290 ಅನ್ನು ವಿಶೇಷ ದರವಾದ ರೂ 11, 990 ಕ್ಕೆ ಲಾಂಚ್ ಮಾಡಿದೆ. ಈ ಡಿವೈಸ್ ತನ್ನ ಹಳೆಯ ಸಹೋದರ ಕ್ಯಾನ್‌ವಾಸ್ ನೈಟ್ A350 ನಂತಿದ್ದು ಅದರದ್ದೇ ಪಡಿಯಚ್ಚಿನಂತಿದೆ. ಕ್ಯಾನ್‌ವಾಸ್ ನೈಟ್ Cameo A290 ನ ವಿಶೇಷತೆಗಳನ್ನು ನೋಡ ಹೊರಟಾಗ ಇದು 4.7 ಇಂಚಿನ (1280 x 720 pixels) IPS ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಪ್ರೊಸೆಸರ್ 1.4 GHz ಓಕ್ಟಾ ಕೋರ್ ಮೀಡಿಯಾ ಟೆಕ್ MT6592M ಆಗಿದ್ದು 1GB RAM ಅನ್ನು ಫೋನ್ ಒಳಗೊಂಡಿದೆ.

ಡಿವೈಸ್ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್ ಅನ್ನು ಬೆಂಬಲಿಸುತ್ತಿದ್ದು ಫೋನ್‌ನ ರಿಯರ್ ಕ್ಯಾಮೆರಾ 8MP ಆಗಿದ್ದು ಮುಂಭಾಗ ಕ್ಯಾಮೆರಾ 5MP ಆಗಿದೆ. ಇದು ಎಲ್‌ಇಡಿ ಫ್ಲ್ಯಾಶ್ ಅನ್ನು ಕೂಡ ಒಳಗೊಂಡಿದೆ ಎಂಬುದು ಅತಿ ವಿಶೇಷ ಅಂಶವಾಗಿದೆ. ಫೋನ್ 8GB ಆಂತರಿಕ ಮೆಮೊರಿಯನ್ನು ಹೊಂದಿದ್ದು ಎಸ್‌ಡಿ ಕಾರ್ಡ್ ಮೂಲಕ ಇದನ್ನು ವಿಸ್ತರಿಸಬಹುದಾಗಿದೆ. ಇದು ಡ್ಯುಯಲ್ ಸಿಮ್ ಅನ್ನು ಹೊಂದಿದ್ದು ಇತರೇ ಅಂಶಗಳಾದ 3G HSPA+, Wi-Fi 802.11 b/g/n, ಬ್ಲ್ಯೂಟೂತ್ 4.0, GPS ಅನ್ನು ಡಿವೈಸ್ ಒಳಗೊಂಡಿದೆ.

ಇನ್ನು ಈ ಹ್ಯಾಂಡ್‌ಸೆಟ್ ಅನ್ನು ಕೆಳಗೆ ನಾವು ಪಟ್ಟಿ ಮಾಡಿರುವ ರೀಟೈಲ್ ತಾಣಗಳಲ್ಲಿ ಖರೀದಿ ಮಾಡಬಹುದಾಗಿದ್ದು ನಿಮಗೆ ಇದು ಅತ್ಯುತ್ತಮ ಕೊಡುಗೆಗಳನ್ನು ಕೂಡ ಒದಗಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Micromax Canvas knight cameo A290: Top 10 Best Online Deals To Buy in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot