ಶೀಘ್ರವೇ ಮಾರುಕಟ್ಟೆಗೆ ಕ್ಯಾನ್ವಸ್ ಮೆಗಾ-2 ಪ್ಲಸ್ ಸ್ಮಾರ್ಟ್‌ಪೋನ್: ವಿಶೇಷತೆಗಳೆನು..?
ಮೆಕ್ರೋಮ್ಯಾಕ್ ಮತ್ತೆ ಹೊಸದೊಂದು ಸ್ಮಾರ್ಟ್‌ಪೋನ್ ಪರಿಚಯಿಸಲು ತಯಾರಿ ನಡೆಸಿದ್ದು, ಕ್ಯಾನ್ವಸ್ ಮೆಗಾ-2 ಪ್ಲಸ್ ಸ್ಮಾರ್ಟ್‌ಪೋನ್ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ತವಕದಲ್ಲಿದೆ.
ಭಾರತೀಯ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿದ ಮೈಕ್ರೋಮ್ಯಾಕ್ ಮತ್ತೆ ಹೊಸದೊಂದು ಸ್ಮಾರ್ಟ್‌ಪೋನ್ ಪರಿಚಯಿಸಲು ತಯಾರಿ ನಡೆಸಿದ್ದು, ಕ್ಯಾನ್ವಸ್ ಮೆಗಾ-2 ಪ್ಲಸ್ ಸ್ಮಾರ್ಟ್‌ಪೋನ್ ಮೂಲಕ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ತವಕದಲ್ಲಿದೆ.

ಓದಿರಿ: ನೋಕಿಯಾ 3310 ರಿಬೋಟ್: ಹಳೇ ಪೋನಿನ 5 ಹೊಸ ಆಯ್ಕೆಗಳು..!!
ಸದ್ಯ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳು ಸ್ಪರ್ಧೆಯಲ್ಲಿ ನಿಂತಿದ್ದು, ಈ ಹಿನ್ನಲೆಯಲ್ಲಿ ಮೈಕ್ರೋಮ್ಯಾಕ್ ಕಡಿಮೆ ಬೆಲೆಗೆ ಡೊಡ್ಡ ಪೋನನ್ನು ಗ್ರಾಹಕರ ಕೈಗೆ ನೀಡಲು ಮುಂದಾಗಿದೆ.

ಮೆಗಾ ಸ್ಕ್ರಿನ್:
ಕ್ಯಾನ್ವಸ್ ಮೆಗಾ-2 ಪ್ಲಸ್ ಸ್ಮಾರ್ಟ್‌ಪೋನ್ ಹೆಸರಿಗೆ ತಕ್ಕಂತೆ ಮೆಗಾ ಸ್ಕ್ರಿನ್ ಹೊಂದಿದ್ದು, 6 ಇಂಚಿನ HD ಪರದೆ ಈ ಪೋನಿನಲ್ಲಿದೆ. ಅಲ್ಲದೇ ಈ ಪೋನು ಕ್ವಾಡ್‌ಕೋರ್ ಪ್ರೋಸೆಸರ್ ಹೊಂದಿದೆ. ವೇಗದ ಕಾರ್ಯನಿರ್ವಹಣೆಗೆ ಇದು ಸಹಾಯಕಾರಿಯಾಗಲಿದೆ.

2GB RAM
ಅಲ್ಲದೇ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯೂ ಈ ಪೋನಿನಲ್ಲಿದ್ದು, ಕಾರ್ಡ್ ಹಾಕಿಕೊಳ್ಳುವ ಮೂಲಕ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಈ ಪೋನ್ ಹೊಂದಿದೆ ಎನ್ನಲಾಗಿದೆ. ಇದರೊಂದಿಗೆ 3000mAh ಬ್ಯಾಟರಿಯೂ ಈ ಪೋನಿನಲ್ಲಿ ಅಡಕವಾಗಿದೆ.

ಆಂಡ್ರಾಯ್ಡ್ 6:
ಈ ಸ್ಮಾರ್ಟ್‌ಪೊನ್ ಸದ್ಯಕ್ಕೆ ಆಂಡ್ರಾಯ್ಡ್ 6 ನಲ್ಲಿ ಕಾರ್ಯನಿರ್ವಹಿಸಲಿದ್ದು, ಹಿಂಭಾಗದಲ್ಲಿ LED ಫ್ಲಾಷ್‌ನೊಂದಿಗೆ 8MP ಕ್ಯಾಮೆರಾವನ್ನು ಹೊಂದಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾವೂ ಇದರಲಿದೆ.

4G ಸಪೋರ್ಟ್:
4G ಸಪೋರ್ಟ್ ಮಾಡಲಿರುವ ಈ ಪೋನ್ ಬೆಲೆಯೂ ಕಡಿಮೆ ಇದೆ. 7,499 ರೂಗೆ ಮಾರಾಟವಾಗಲಿದೆ ಎನ್ನಲಾಗಿದೆ. ಡುಯಲ್ ಸಿಮ್ ಹಾಕಬಹುದಾಗಿದ್ದು, Wi-Fi, Bluetooth, Micro-USB, GPRS/ EDGE, GPS ಆಯ್ಕೆಗಳನ್ನು ಒಳಗೊಂಡಿದೆ.


Click it and Unblock the Notifications