ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೋ A310 ರೂ 12,990 ಕ್ಕೆ

Written By:

ಅಂತೂ ಬಹು ನಿರೀಕ್ಷೆಗಳ ನಂತರ, ಹೆಚ್ಚು ಪ್ರಖ್ಯಾತಿಯ ಭಾರತದ ಸ್ಮಾರ್ಟ್‌ಫೋನ್ ಪ್ರಮುಖ ಎಂದೇ ಕರೆಯಿಸಿಕೊಂಡಿರುವ ಮೈಕ್ರೋಮ್ಯಾಕ್ಸ್ ತನ್ನ ಫ್ಲ್ಯಾಗ್‌ಶಿಪ್ ಡಿವೈಸ್ ಕ್ಯಾನ್‌ವಾಸ್ ನಿಟ್ರೋ A310 ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದನ್ನು ಈಗಾಗಲೇ ಸ್ನ್ಯಾಪ್‌ ಡೀಲ್‌ನಲ್ಲಿ ಮಾರಾಟ ಮಾಡಲಾಗುತ್ತಿದ್ದು ಬೆಲೆ 12,990 ಎಂದು ನಿಗದಿಪಡಿಸಲಾಗಿದೆ.

ಮೋಟೋ ಜಿ (2014) ಮತ್ತು ಶಯೋಮಿ Mi3 ಯೊಂದಿಗೂ ಹೊಸ ಮೈಕ್ರೋಮ್ಯಾಕ್ಸ್ ಕಾದಾಡಬೇಕಾಗಿದ್ದು ಇದಕ್ಕೆ ಹೆಚ್ಚಿನ ಸವಾಲುಗಳನ್ನು ಎದುರಿಸಿ ಭಾರತದಲ್ಲಿ ತನ್ನ ಹ್ಯಾಂಡ್‌ಸೆಟ್‌ನ ಕಮಾಲನ್ನು ಮೈಕ್ರೋಮ್ಯಾಕ್ಸ್ ಪ್ರದರ್ಶಿಸಬೇಕಾಗಿದೆ. ಹೆಚ್ಚಿನ ಕಾತರವನ್ನು ಉಂಟುಮಾಡುವ ಈ ಫೋನ್‌ನ ವಿಶೇಷತೆಗಳನ್ನು ನಾವಿಲ್ಲಿ ನೀಡುತ್ತಿದ್ದು ನಿಜಕ್ಕೂ ಇದು ಮೈಸೆಳೆಯುವಂತಿದೆ.

ಅತ್ಯಾಧುನಿಕ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೋ A310 5 ಇಂಚಿನ IPS ಡಿಸ್‌ಪ್ಲೇಯನ್ನು ಹೊಂದಿದ್ದು HD ರೆಸಲ್ಯೂಶನ್ 1280 x 720 ಪಿಕ್ಸೆಲ್‌ಗಳನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ ಡೆನ್ಸಿಟಿ 294ppi ಆಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ 6592 ಚಿಪ್‌ಸೆಟ್ ಅನ್ನು ಹೊಂದಿದ್ದು 1.7GHz ಇದರಲ್ಲಿ ಒಳಗೊಂಡಿದೆ. 450 GPU ಹಾಗೂ 700MHz ಇದರಲ್ಲಿದೆ. ಫೋನ್‌ನ RAM ಸಾಮರ್ಥ್ಯ 2ಜಿಬಿಯಾಗಿದ್ದು ಆಂಡ್ರಾಯ್ಡ್ 4.4.2 ಇದರಲ್ಲಿ ಚಾಲನೆಯಾಗುತ್ತಿದೆ.

ಇನ್ನು ಫೋನ್ 13MP ಆಟೋ ಫೋಕಸ್ ಉಳ್ಳ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಇದು LED ಫ್ಲ್ಯಾಶ್ ಮತ್ತು 5MP ಮುಂಭಾಗ ಕ್ಯಾಮೆರಾವನ್ನು ಹೊಂದಿದೆ. ಇದರ ಆಂತರಿಕ ಸಂಗ್ರಹಣೆ ಸಾಮರ್ಥ್ಯ 8 ಜಿಬಿಯಾಗಿದ್ದು ಎಸ್‌ಡಿ ಕಾರ್ಡ್ ಮೂಲಕ ಇದನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ. ಇನ್ನು ಫೋನ್‌ನ ಸಂಪರ್ಕ ವಿಶೇಷತೆಗಳೆಂದರೆ 3G, 2G, Wi-Fi, GPS ಹಾಗೂ ಬ್ಲ್ಯೂಟೂತ್ ಆಗಿದೆ. ಫೋನ್ ಡ್ಯುಯಲ್ ಸಿಮ್ ಹ್ಯಾಂಡ್‌ಸೆಟ್‌ನಲ್ಲಿ ಬಂದಿರುವುದು ಫೋನ್‌ನ ಇನ್ನೊಂದು ವಿಶೇಷತೆಯಾಗಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೋ A310 ಇದು ಆಕರ್ಷಕ ನೀಲಿ ಹಾಗೂ ಪ್ರಿಸ್ಟಿನ್ ಬಿಳಿ ಬಣ್ಣಗಳಲ್ಲಿ ಲಭ್ಯವಿದ್ದು ಬ್ಯಾಟರಿ ಸಾಮರ್ಥ್ಯ 2500 mAh ಆಗಿದೆ. ಇದು ನಿಮಗೆ 10 ಗಂಟೆಗಳ ಟಾಕ್ ಟೈಮ್ ಅವಧಿಯನ್ನು ನೀಡುತ್ತಿದೆ ಎಂಬುದು ಕಂಪೆನಿ ಅಭಿಪ್ರಾಯವಾಗಿದೆ. ಇದು ಫೋನ್ ಜೊತೆಗೆ ಉಚಿಯ ಸ್ಕ್ರೀನ್ ಸುರಕ್ಷೆ (ಪ್ರೊಟೆಕ್ಟರ್) ಅನ್ನು ಒದಗಿಸುತ್ತಿದ್ದು ಇದು ಲೆದರೆಟ್ ಬ್ಯಾಕ್ ಪ್ಯಾನಲ್‌ನೊಂದಿಗೆ ಬರುತ್ತಿದೆ. ಕಂಪೆನಿಯ ಇತರ ಡಿವೈಸ್‌ಗಳಿಗೆ ಹೋಲಿಸಿದಾಗ ಈ ಪ್ಯಾನೆಲ್ ಮನವನ್ನ ಕದಿಯುವಂತಿದೆ. ಇನ್ನು ಡಿವೈಸ್ ಉತ್ತಮ ಗುಣಮಟ್ಟದ UI ಒಳಗೊಂಡಂತೆ ಎಚ್‌ಟಿಸಿಯ ಬ್ಲಿಂಕ್ ಫೀಡ್ ಅನ್ನು ಹೊಂದಿದೆ.

ಇದು ಓಕ್ಟಾ ಕೋರ್ CPU ನೊಂದಿಗೆ ಬಂದಿದ್ದು, 2ಜಿಬಿ RAM ಅನ್ನು ಡಿವೈಸ್ ಒಳಗೊಂಡಿದೆ. 13MP ಆಟೋ ಫೋಕಸ್ ಉಳ್ಳ ರಿಯರ್ ಕ್ಯಾಮೆರಾ ಮತ್ತು 5MP ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಹೊಂದಿದ್ದು ನಿಜಕ್ಕೂ ಇದು ಅಸದಳವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಚ್‌ಟಿಸಿ ಡಿಸೈರ್

#1

ಬೆಲೆ: 16,699
ಪ್ರಮುಖ ವಿಶೇಷತೆಗಳು
5.0 ಇಂಚಿನ 720x1280 ಪಿಕ್ಸೆಲ್, LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

ಪ್ಯಾನಸೋನಿಕ್ P81

#2

ಬೆಲೆ: 16,900
ಪ್ರಮುಖ ವಿಶೇಷತೆಗಳು
5.5 ಇಂಚಿನ 720x1280 ಪಿಕ್ಸೆಲ್, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2500 mAh, Li-Ion ಬ್ಯಾಟರಿ

ಜಿಯೋನಿ ಇಲೈಫ್ S5.5

#3

ಬೆಲೆ: 20,279
ಪ್ರಮುಖ ವಿಶೇಷತೆಗಳು
5.0 ಇಂಚಿನ 1080x1920 ಪಿಕ್ಸೆಲ್, Super AMOLED
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2300 mAh, Li-Ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಗೋಲ್ಡ್

#4

ಬೆಲೆ: 20,000
ಪ್ರಮುಖ ವಿಶೇಷತೆಗಳು
5.5 ಇಂಚಿನ 1080x1920 ಪಿಕ್ಸೆಲ್, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2300 mAh, Li-Polymer ಬ್ಯಾಟರಿ

ಕಾರ್ಬನ್ ಟೈಟಾನಿಯಮ್ ಒಕ್ಟೇನ್ ಪ್ಲಸ್

#5

ಬೆಲೆ: 14,599
ಪ್ರಮುಖ ವಿಶೇಷತೆಗಳು
5.0 ಇಂಚಿನ 1080x1920 ಪಿಕ್ಸೆಲ್, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
16 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿ ಗೆ ವಿಸ್ತರಿಸಬಹುದು
2 ಜಿಬಿ RAM
2000 mAh, Li-Polymer ಬ್ಯಾಟರಿ

ಕಾರ್ಬನ್ ಟೈಟಾನಿಯಮ್ ಒಕ್ಟೇನ್

#6

ಬೆಲೆ: 13,008
ಪ್ರಮುಖ ವಿಶೇಷತೆಗಳು
5.0 ಇಂಚಿನ 720x1080 ಪಿಕ್ಸೆಲ್, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
16 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿ ಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Polymer ಬ್ಯಾಟರಿ

ಅಲಾಕ್ಟೆಲ್ ಒನ್ ಟಚ್ ಐಡಲ್ X ಪ್ಲಸ್

#7

ಬೆಲೆ: 16,999
ಪ್ರಮುಖ ವಿಶೇಷತೆಗಳು
5.0 ಇಂಚಿನ 1080x1920 ಪಿಕ್ಸೆಲ್, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
13.1 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi, DLNA
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2500 mAh, Li-Ion ಬ್ಯಾಟರಿ

ಐಬೆರ್ರಿ ಆಕ್ಸಸ್ ನ್ಯೂಕ್ಲಿಯ

#8

ಬೆಲೆ: 14,299
ಪ್ರಮುಖ ವಿಶೇಷತೆಗಳು
5.0 ಇಂಚಿನ 720x1280 ಪಿಕ್ಸೆಲ್, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 ಜಿಬಿ ಆಂತರಿಕ ಮೆಮೊರಿ, 64 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
2800 mAh, Li-Ion ಬ್ಯಾಟರಿ

ಹುವಾಯಿ ಅಸ್ಕೆಂಡ್ G750

#9

ಬೆಲೆ: 20,100
ಪ್ರಮುಖ ವಿಶೇಷತೆಗಳು
5.5 ಇಂಚಿನ 720x1280 ಪಿಕ್ಸೆಲ್, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
2 ಜಿಬಿ RAM
3000 mAh, Li-Polymer ಬ್ಯಾಟರಿ

ಒಬಿ ಒಕ್ಟೋಪಸ್ S520

#10

ಬೆಲೆ: 11,970
ಪ್ರಮುಖ ವಿಶೇಷತೆಗಳು
5.0 ಇಂಚಿನ 720x1280 ಪಿಕ್ಸೆಲ್, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
1800 mAh, Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about micromax canvas nitro a310 launched get know it better.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot