Home
ಮೊಬೈಲ್

ಭಾರತಕ್ಕೆ ಮತ್ತೊಂದು ಬಜೆಟ್ ಸ್ಮಾರ್ಟ್ ಪೋನ್.. ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಪ್ಲಸ್ 2 ಲಾಂಚ್..!

By Avinash

ಭಾರತದ ಸ್ಮಾರ್ಟ್ ಪೋನ್ ಮಾರುಕಟ್ಟೆ ಬೆಳೆಯುತ್ತಿದ್ದು, ದಿನಕ್ಕೊಂದು ಸ್ಮಾರ್ಟ್ ಪೋನ್ ಲಾಂಚ್ ಆಗುತ್ತಿವೆ. ಈಗ ಆ ಪಟ್ಟಿಗೆ ಮೈಕ್ರೋಮ್ಯಾಕ್ಸ್ ಕೂಡ ಸೇರಿದ್ದು, ತನ್ನ ಹೊಸ ಬಜೆಟ್ ಪೋನ್ ಬಿಡುಗಡೆ ಮಾಡಿ ಗ್ರಾಹಕರನ್ನು ಸೆಳೆಯುತ್ತಿದೆ. ಬಜೆಟ್ ಗ್ರಾಹಕರನ್ನೇ ಗುರಿಯಾಗಿಸಕೊಂಡು ಬಿಡುಗಡೆ ಮಾಡಿರುವುದು ಸ್ಪಷ್ಟವಾಗಿದೆ.

ಮೈಕ್ರೋಮ್ಯಾಕ್ಸ್ ಲಾಂಚ್ ಮಾಡಿದ ಹೊಸ ಕ್ಯಾನ್ವಾಸ್ ಪ್ಲಸ್ 2 ಆಧುನಿಕ ಸ್ಮಾರ್ಟ್ ಪೋನ್ ವಿನ್ಯಾಸದೊಂದಿಗೆ ಸ್ಮಾರ್ಟ್ ಪೋನ್ ಪ್ರಿಯರಿಗೆ ಉತ್ತಮ ಬಜೆಟ್ ನಲ್ಲಿ ಸಿಗಲಿದ್ದು, ಗ್ರಾಹಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದೇ ಗಮನಿಸಬೇಕಾದ ಅಂಶ. ಹೊಸ ಬಜೆಟ್ ಪೋನ್ ನಲ್ಲಿ ಏನೆಲ್ಲಾ ಫೀಚರ್ಸ್ ಇದೆ ಎಂಬುದನ್ನು ಮುಂದೆ ನೋಡಿ.

ಬಜೆಟ್ ಸ್ಮಾರ್ಟ್ ಪೋನ್ ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಪ್ಲಸ್ 2 ಲಾಂಚ್..!

5.7 ಇಂಚ್ ಡಿಸ್ ಪ್ಲೇ

5.7 ಇಂಚ್ ಡಿಸ್ ಪ್ಲೇ

ಹೊಸ ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಪ್ಲಸ್ 2 ಸ್ಮಾರ್ಟ್ ಪೋನ್ 5.7 ಇಂಚ್ HD+ ಡಿಸ್ ಪ್ಲೇ ಹೊಂದಿದೆ. 1440X720 ಪಿಕ್ಸೆಲ್ಸ್ ರೆಸಲ್ಯೂಷನ್ ಹೊಂದಿದ್ದು, 18:9 ಆಸ್ಪೇಕ್ಟ್ ರೇಟಿಯೋ ಹೊಂದಿದೆ. ಇದರಿಂದ ಬಳಕೆದಾರರಿಗೆ ಉತ್ತಮ ವೀವ್ ಅನುಭವ ದೊರೆಯಲಿದೆ.

8 ಎಂಎಂ ಸ್ಲಿಮ್ ಬಾಡಿ

8 ಎಂಎಂ ಸ್ಲಿಮ್ ಬಾಡಿ

ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಪ್ಲಸ್ 2 ಸ್ಮಾರ್ಟ್ ಪೋನ್ ಹೊಸ ವಿನ್ಯಾಸದೊಂದಿಗೆ ಹಿಂದೆ ಜೆಟ್ ಬ್ಲಾಕ್ ಫೀನಿಷ್ ಹೊಂದಿದೆ. 8ಎಂಎಂ ಸ್ಲಿಮ್ ಬಾಡಿ ಹೊಂದಿದೆ.

ಪ್ರೊಸೆಸರ್ ಮತ್ತು ಕಾರ್ಯನಿರ್ವಹಣೆ

ಪ್ರೊಸೆಸರ್ ಮತ್ತು ಕಾರ್ಯನಿರ್ವಹಣೆ

ಕ್ಯಾನ್ವಾಸ್ ಪ್ಲಸ್ 2 ಸ್ಮಾರ್ಟ್ ಪೋನ್ ಒಕ್ಟಾ ಕೋರ್ ಪ್ರೊಸೆಸರ್ ಹೊಂದಿದ್ದು, 1.3GHz ವೇಗ ಹೊಂದಿದೆ. ಮತ್ತು ಆಂಡ್ರಾಯ್ಡ್ ನಾಟ್ ಒಎಸ್ ಮೂಲಕ ಕಾರ್ಯನಿರ್ವಹಿಸಲಿದೆ.

ಉತ್ತಮ ಕ್ಯಾಮೆರಾ

ಉತ್ತಮ ಕ್ಯಾಮೆರಾ

ಕ್ಯಾನ್ವಾಸ್ ಪ್ಲಸ್ 2 ಸ್ಮಾರ್ಟ್ ಪೋನ್ ನ ಕ್ಯಾಮೆರಾ ಗುಣಮಟ್ಟದ ಕಡೆಗೆ ಬಂದರೆ 13MP ಬ್ಯಾಕ್ ಕ್ಯಾಮೆರಾ ಹೊಂದಿದ್ದು, ಇದು 80 ಡಿಗ್ರಿ ಫೀಲ್ಡ್ ವೀವ್ ಮತ್ತು ಟೈಮ್ ಲ್ಯಾಪ್ಸ್ ಮತ್ತು ಬ್ಯೂಟಿ ವೀವ್ ಫೀಚರ್ಸ್ ಗಳಿಗೆ ಬೆಂಬಲ ನೀಡುತ್ತದೆ. 8MP ಸೆಲ್ಫಿ ಕ್ಯಾಮೆರಾ ಇದ್ದು, ಗ್ರೂಫಿ ಕ್ಯಾಮೆರಾ ಎಂದು ಕಂಪನಿ ಹೇಳಿಕೊಂಡಿದೆ. ಆಪಲ್ ಐಪೋನ್ ಎಕ್ಸ್ ನಲ್ಲಿರುವಂತೆ ಇಲ್ಲೂ ವರ್ಟಿಕಲಿಯಾಗಿ ಕ್ಯಾಮೆರಾ ವ್ಯವಸ್ಥೆ ಅಳವಡಿಸಲಾಗಿದೆ.

ಭಾರತದ 22 ಭಾಷೆಗಳಿಗೆ ಬೆಂಬಲಿತ

ಭಾರತದ 22 ಭಾಷೆಗಳಿಗೆ ಬೆಂಬಲಿತ

ಕ್ಯಾನ್ವಾಸ್ ಪ್ಲಸ್ 2 ಸ್ಮಾರ್ಟ್ ಪೋನ್ ಭಾರತದ 22 ಪ್ರಾದೇಶಿಕ ಭಾಷೆಗಳನ್ನು ಒಳಗೊಂಡಿದ್ದು, ಭಾರತೀಯ ಗ್ರಾಹಕರನ್ನು ಗುರಿಯಾಗಿಸಿಕೊಂಡು ಸ್ಮಾರ್ಟ್ ಪೋನ್ ಬಿಡುಗಡೆ ಮಾಡಿದೆ.

ಉತ್ತಮ ಬ್ಯಾಟರಿ ಸಾಮರ್ಥ್ಯ

ಉತ್ತಮ ಬ್ಯಾಟರಿ ಸಾಮರ್ಥ್ಯ

ಕ್ಯಾನ್ವಾಸ್ ಪ್ಲಸ್ 2 4000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಕಡಿಮೆ ಬೆಲೆಯಲ್ಲಿ ಉತ್ತಮ ಬ್ಯಾಟರಿ ಕೊಟ್ಟು ಬಜೆಟ್ ಗ್ರಾಹಕರನ್ನು ಸೆಳೆಯುತ್ತಿದೆ.

ಫೇಸ್ ಅನ್ ಲಾಕ್ ಸೌಲಭ್ಯ

ಫೇಸ್ ಅನ್ ಲಾಕ್ ಸೌಲಭ್ಯ

ಈಗ ಬರುತ್ತಿರುವ ಎಲ್ಲಾ ಸ್ಮಾರ್ಟ್ ಪೋನ್ ಗಳಂತೆ ಕ್ಯಾನ್ವಾಸ್ ಪ್ಲಸ್ 2 ಸ್ಮಾರ್ಟ್ ಪೋನ್ ನಲ್ಲೂ ಕೂಡ ಫೇಸ್ ಅನ್ ಲಾಕ್ ಸೌಲಭ್ಯವಿದ್ದು, ಕಡಿಮೆ ಬೆಲೆಯಲ ಪೋನ್ ನಲ್ಲಿ ಈ ಸೌಲಭ್ಯ ದೊರೆತಿದೆ.

ಅಗ್ಗದ ಬೆಲೆ

ಅಗ್ಗದ ಬೆಲೆ

ಕ್ಯಾನ್ವಾಸ್ ಪ್ಲಸ್ 2 ಸ್ಮಾರ್ಟ್ ಪೋನ್ನ 3GB RAM ಮತ್ತು 32GB ಮೆಮೊರಿ ಹೊಂದಿರುವ ಸೆಟ್ ಗೆ 8,999 ರೂ. ಬೆಲೆ ಇದ್ದು, ಅಗ್ಗದ ಬೆಲೆಯಲ್ಲಿ ಉತ್ತಮ ಫೀಚರ್ ನೀಡಿ ಉತ್ತಮ ಬಜೆಟ್ ಪೋನ್ ಆಗಿದೆ.

Best Mobiles in India

English summary
Micromax Canvas Plus 2 launched with 4,000mAh battery. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+