Subscribe to Gizbot

9,999ಕ್ಕೆ ರೆಡ್‌ಮಿಗೂ ಸೆಡ್ಡುಹೊಡೆಯುವ 'ಡ್ಯುಯಲ್ ಕ್ಯಾಮೆರಾ' ಫೋನ್ 'ಇವೊಕ್'!!

Written By:

ಭಾರತೀಯ ಹೆಸರಾಂತ ಮೊಬೈಲ್ ಕಂಪೆನಿ ಮೈಕ್ರೋಮ್ಯಾಕ್ಸ್ ಇದೇ ಮೊದಲ ಭಾರಿಗೆ ಡ್ಯುಯಲ್ ಕ್ಯಾಮೆರಾ ಹೊಂದಿರುವ ಫೋನ್‌ ಅನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಿದೆ.!! ರೆಡ್‌ಮಿ ನೋಟ್‌ 4 ಗೂ ಸೆಡ್ಡುಹೊಡೆಯುವ ಇವೊಕ್ ಡ್ಯುಯಲ್ ನೋಟ್' ಸ್ಮಾರ್ಟ್‌ಫೋನ್ ಕೇವಲ 9,999 ರೂಪಾಯಿಗೆ 'ಇದೇ ಶುಕ್ರವಾರ ಬಿಡುಗಡೆಗೊಂಡಿದೆ.!!

ಚೀನಾ ಮೊಬೈಲ್ ಕಂಪೆನಿಗಳಿಗೆ ಸೆಡ್ಡುಹೊಡೆಯುವ ನಿಟ್ಟಿನಲ್ಲಿ ಮೈಕ್ರೋಮ್ಯಾಕ್ಸ್ ಅತ್ಯಂತ ಕಡಿಮೆ ಬೆಲೆಗೆ ಭಾರಿ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಮಂಗಳವಾರ ಮಧ್ಯರಾತ್ರಿಯಿಂದ ಫ್ಲಿಪ್‌ಕಾರ್ಟ್‌ನಲ್ಲಿ 'ಇವೊಕ್ ಡ್ಯುಯಲ್ ನೋಟ್ ಮಾರಾಟಕ್ಕೆ ಲಭ್ಯವಿದೆ.ಹಾಗಾದರೆ, ಸ್ಮಾರ್ಟ್‌ಫೋನ್ ಹೇಗಿದೆ? ವಿಶೇಷತೆಗಳೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ಪ್ರೊಸೆಸರ್!

ಡಿಸ್‌ಪ್ಲೇ ಮತ್ತು ಪ್ರೊಸೆಸರ್!

'ಇವೊಕ್ ಡ್ಯುಯಲ್ ನೋಟ್ 5.5 ಇಂಚ್ ಗಾತ್ರದ ಅತ್ಯದ್ಬುತ ಡಿಸ್‌ಪ್ಲೇ ಹೊಂದಿದ್ದು, ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ಆಗುವಹಾಗೆ ರೂಪಿಸಲಾಗಿದೆ.! ಇನ್ನು ಆಕ್ಟಕೋರ್ ಮೀಡಿಯಾ ಟೆಕ್ MT6750 ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ 7.0 ನ್ಯೂಗಾದಲ್ಲಿ ಸ್ಮಾರ್ಟ್‌ಫೋನ್ ರನ್ ಆಗಲಿದೆ.!!

Xiaomi Redmi 4 Features !! ರೆಡ್‌ಮಿ 4 ಫೀಚರ್ಸ್ ಏನೇನಿದೆ? ಇಲ್ಲಿದೆ ಡಿಟೇಲ್ಸ್!!
RAM ಮತ್ತು ROM ಎಷ್ಟು?

RAM ಮತ್ತು ROM ಎಷ್ಟು?

ಇವೊಕ್ ಡ್ಯುಯಲ್ ನೋಟ್ ಎರಡು ವೆರಿಯಂಟ್‌ಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ. 3GB ಮತ್ತು 4GBಯ RAM ಹೊಂದಿರುವ ಫೋನ್‌ಗಳು ಬಿಡುಗಡೆಯಾಗಿದ್ದು, ಸ್ಮಾರ್ಟ್‌ಫೋನ್ 16GB ಮತ್ತು 32GB ಆಂತರಿಕ ಮೆಮೊರಿಯನ್ನು ಹೊಂದಿದೆ. ಜೊತೆಗೆ ಮೈಕ್ರೊ SD ಕಾರ್ಡ ಮೂಲಕ 64GB ವರೆಗೆ ಮೆಮೊರಿ ವಿಸ್ತರಿಸಬಹುದು.

ಡ್ಯುಯಲ್ ಕ್ಯಾಮೆರಾ!!

ಡ್ಯುಯಲ್ ಕ್ಯಾಮೆರಾ!!

ಮೈಕ್ರೋಮ್ಯಾಕ್ಸ್ ಇವೊಕ್ ಡ್ಯುಯಲ್ ನೋಟ್ ಪೋನ್ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, 13-ಮೆಗಾಪಿಕ್ಸೆಲ್‌ನ ಎರಡು ರಿಯರ್ ಕ್ಯಾಮೆರಾ ಹೊಂದಿದೆ. ರಿಯರ್ ಕ್ಯಾಮೆರಾ ಸೋನಿ IMX258 ಟೋನ್ ಫ್ಲಾಷ್ ಜೊತೆಗೆ ಹೆಚ್ಚು ಸುಂದರ ಚಿತ್ರಗಳನ್ನು ತೆಗೆಯಲು ಸಹಕಾರಿಯಾಗಿದೆ. ಇನ್ನು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ನಲ್ಲಿದೆ.

ಬ್ಯಾಟರಿ ಮತ್ತು ಇತರ ಫೀಚರ್ಸ್.!!

ಬ್ಯಾಟರಿ ಮತ್ತು ಇತರ ಫೀಚರ್ಸ್.!!

ಇವೊಕ್ ಡ್ಯುಯಲ್ ನೋಟ್ 3000mAh ಬ್ಯಾಟರಿ ಹೊಂದಿದ್ದು, 260 ಗಂಟೆಗಳ ಸ್ಟ್ಯಾಂಡ್ಬೈ ಮತ್ತು 11 ಗಂಟೆಗಳ ಟಾಕ್-ಟೈಮ್ ಶಕ್ತಿಯನ್ನು ಹೊಂದಿದೆ ಎಂದು ಮೈಕ್ರೋ ಮ್ಯಾಕ್ಸ್ ಹೊಂದಿದೆ. ವಿಶೇಷವಾಗಿ ಫೋನ್ ಹೋಮ್ ಬಟನ್ ಮೇಲೆ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ, ಜೊತೆಗೆ 4G, ವೈ-ಫೈ, ಬ್ಲೂಟೂತ್ ಎಲ್ಲವೂ ಲಭ್ಯವಿದೆ.!!

ಐಡಿಯಾದಿಂದ ಆಫರ್ ಇದೆ.!!

ಐಡಿಯಾದಿಂದ ಆಫರ್ ಇದೆ.!!

ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಇವೊಕ್ ಡ್ಯುಯಲ್ ನೋಟ್ ಸ್ಮಾರ್ಟ್‌ಪೋನ್ ಬೆಲೆ 9.999 ರೂಪಾಯಿಗಳಿದ್ದು, ಸ್ಮಾರ್ಟ್‌ಫೋನ್ ಖರೀದಿಸಿದರೆ ಐಡಿಯಾದಿಂದ 344 ರೂ.ಗೆ 84 ಜಿಬಿ ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್‌ ಸೇವೆ 3 ತಿಂಗಳಿಗೆ ಲಭ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Micromax Evok Dual Note price in India starts from Rs. 9,999.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot