Subscribe to Gizbot

ಹೇಗಿದೆ ಗೊತ್ತಾ ಹೊಸ ಮೈಕ್ರೊಮ್ಯಾಕ್ಸ್ ಎವಾಕ್ ನೋಟ್? ಇಲ್ಲಿದೆ ಫುಲ್ ರಿವ್ಯೂವ್!!

Written By:

ಬಜೆಟ್‌ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಮೊಬೈಲ್‌ ಕಂಪೆನಿಗಳಲ್ಲಿ ಭಾರತದ ಮೊಬೈಲ್ ಕಂಪೆನಿ ಮೈಕ್ರೊಮ್ಯಾಕ್ಸ್ ಎಂದೂ ಮೊದಲ ಸ್ಥಾನದಲ್ಲಿಯೇ ಇದೆ.!! ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೈಕ್ರೊಮ್ಯಾಕ್ಸ್ ಇದೀಗ ಎವಾಕ್ ನೋಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.!!

ಕ್ಯಾನ್ವಾಸ್ ಸರಣಿಯ ಸ್ಮಾರ್ಟ್‌ಫೋನ್‌ಗಳ ನಂತರ ಮೈಕ್ರೊಮ್ಯಾಕ್ಸ್ ಬಹುತೇಕ ಮೂಲೆ ಸೇರಿದ್ದು , ಈಗಾಗಲೇ ರೆಡ್‌ಮಿ, ಲೆನೊವೊ ಸೇರಿ ಚೀನಾ ಪ್ರಾಬಲ್ಯದ ಕಂಪೆನಿಗಳು ಮೈಕ್ರೊಮ್ಯಾಕ್ಸ್ ಕಂಪೆನಿಯನ್ನು ತುಳಿದಿವೆ. ಹಾಗಾಗಿ, ಮೈಕ್ರೊಮ್ಯಾಕ್ಸ್ ಕಂಪೆನಿ ತನ್ನ ನೂತನ ಮೈಕ್ರೊಮ್ಯಾಕ್ಸ್ ಎವಾಕ್ ನೋಟ್ ಸ್ಮಾರ್ಟ್‌ಫೋನ್ ಮೂಲಕ ಮತ್ತೆ ಚೇತರಿಕೆ ಕಾಣಲು ಮುಂದಾಗಿದೆ.!!

ಆನ್‌ಲೈನ್ ಶಾಪಿಂಗ್ ಜಾಲತಾಣ ಫ್ಲಿಪ್ ಕಾರ್ಟ್‌ ಜೊತೆ ಸೇರಿ ಮಾರುಕಟ್ಟೆಗೆ ಕಾಲಿಡುತ್ತಿರುವ ನೂತನ ಎವಾಕ್ ನೋಟ್ ಸ್ಮಾರ್ಟ್‌ಫೋನ್ 9.499 ರೂಪಾಯಿಗಳ ಬೆಲೆಯನ್ನು ಹೊಂದಿದ್ದು, ರೆಡ್‌ ಮಿ, ಲೆನೊವೊ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ನಿಂತಿದೆ.! ಹಾಗಾದರೆ, ನೂತನವಾಗಿ ಬಿಡುಗಡೆಯಾಗುತ್ತಿರುವ ಎವಾಕ್ ನೋಟ್ ಸ್ಮಾರ್ಟ್‌ಫೋನ್ ಹೇಗಿದೆ? ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5 ಇಂಚ್ ಮೆಟಲ್ ಬಾಡಿ ಸ್ಕ್ರೀನ್ !!

5.5 ಇಂಚ್ ಮೆಟಲ್ ಬಾಡಿ ಸ್ಕ್ರೀನ್ !!

ಈಗಿನ ಟ್ರೆಂಡ್ ಆಗಿರುವ 5.5 ಇಂಚ್ ಡಿಸ್‌ಪ್ಲೇ ಯನ್ನು ಮೈಕ್ರೊಮ್ಯಾಕ್ಸ್ ಎವಾಕ್ ನೋಟ್ ಸ್ಮಾರ್ಟ್‌ಫೋನ್ ಹೊಂದಿದೆ. ಇನ್ನು ಸುರಕ್ಷತೆ ಗುಣಮಟ್ಟಕ್ಕೆ ಸ್ಮಾರ್ಟ್‌ಫೋನ್‌ನಲ್ಲಿ 5.5 ಇಂಚ್ ಮೆಟಲ್ ಬಾಡಿಯನ್ನು ನೀಡಲಾಗಿದೆ ಜೊತೆಗೆ 2.5D ಕರ್ವಡ್ ಗ್ಲಾಸ್‌ ಕವರಿಂಗ್ ಇದೆ!!

3GB RAM ಮತ್ತು ಫೀಂಗರ್‌ಪ್ರಿಂಟ್ ಫೀಚರ್!!

3GB RAM ಮತ್ತು ಫೀಂಗರ್‌ಪ್ರಿಂಟ್ ಫೀಚರ್!!

ಮೈಕ್ರೊಮ್ಯಾಕ್ಸ್ ಎವಾಕ್ ನೋಟ್ ಅತ್ಯುತ್ತಮ ಎನ್ನುವಂತಹ 3GB RAM ಹೊಂದಿದ್ದು 32GB ಆಂತರಿಕ ಮೆಮೊರಿ ಹೊಂದಿದೆ. ಇನ್ನು ಮೊಬೈಲ್ ಮಾರುಕಟ್ಟೆಯಲ್ಲಿ 10K ದರದಲ್ಲಿ ಫೀಂಗರ್‌ಪ್ರಿಂಟ್, 4Gವೋಲ್ಟ್ ಸೇವೆಗಳು ಸಾಮಾನ್ಯವಾಗಿ ಲಭ್ಯವಿದೆ.!

ಪ್ರೊಸೆಸರ್ ಮತ್ತು ಕಾರ್ಯನಿರ್ವಹಣೆ?

ಪ್ರೊಸೆಸರ್ ಮತ್ತು ಕಾರ್ಯನಿರ್ವಹಣೆ?

ಮಿಡಿಯಾ ಟೆಕ್ ಆಕ್ಟ-ಕೋರ್ ಪ್ರೊಸೆಸರ್ ಮತ್ತು ಸ್ನಾಪ್‌ಡ್ರಾಗನ್ 430 CPU ಪ್ರೊಸೆಸರ್ ಹೊಂದಿರುವ ಮೈಕ್ರೊಮ್ಯಾಕ್ಸ್ ಎವಾಕ್ ನೋಟ್ ಸಾಮಾನ್ಯ ಎನ್ನುವಂತಹ ಕಾರ್ಯನಿರ್ವಹಣೆ ನೀಡುತ್ತಿದೆ. ಕನಿಷ್ಟ ಹತ್ತು ಆಪ್‌ಗಳನ್ನು ಒಮ್ಮೆಲೆ ರನ್ ಮಾಡಬಹುದಾದ ಅವಕಾಶವಿದ್ದರೂ ಕೊಡುವ ಹಣಕ್ಕೆ ಸ್ಮಾರ್ಟ್‌ಫೋನ್ ಹೇಳಿಕೊಳ್ಳುವಂತಹ ಕಾರ್ಯನಿರ್ವಹಣೆ ಇಲ್ಲ.!!

13MP ಮತ್ತು 5MP ಕ್ಯಾಮೆರಾ!

13MP ಮತ್ತು 5MP ಕ್ಯಾಮೆರಾ!

ಸೆಲ್ಫಿಗಾಗಿಯೇ ವಿಶೇಷ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಕಾಲಿಡುವಾಗ ಮೈಕ್ರೊಮ್ಯಾಕ್ಸ್ ಮತ್ತು ಶಿಯೋಮಿ ಕಂಪೆನಿಗಳು ಕ್ಯಾಮೆರಾ ಫೀಚರ್‌ನಲ್ಲಿ ಹಿಂದುಳಿದಿವೆ ಎನ್ನಬಹುದು. ಕೇವಲ 5MP ಸೆಲ್ಫಿ ಕ್ಯಾಮೆರಾ ಹೊಂದಿರುವ ಎವಾಕ್ ನೋಟ್ ಸಾಮಾನ್ಯ ಎನ್ನುವಂತಹ ಸೆಲ್ಫಿಗಳನ್ನು ತೆಗೆಯಬಹುದಷ್ಟೆ.! ಇನ್ನು ರಿಯರ್ ಕ್ಯಾಮೆರಾದ ಗುಣಮಟ್ಟ ಚೆನ್ನಾಗಿದೆ.!!

ಬ್ಯಾಟರಿ ಹೇಗಿದೆ?

ಬ್ಯಾಟರಿ ಹೇಗಿದೆ?

ಇದೇ ಮೊದಲಬಾರಿಗೆ ಮೈಕ್ರೊಮ್ಯಾಕ್ಸ್ ಅತ್ಯುತ್ತಮ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಹೊರತಂದಿದ್ದು, ಮೈಕ್ರೊಮ್ಯಾಕ್ಸ್ ಎವಾಕ್ ನೋಟ್ 4000mAh ಬ್ಯಾಟರಿಯನ್ನು ಹೊಂದಿದೆ. ಸಂಪೂರ್ಣ 48 ಗಂಟೆಗಳ ಕಾಲ ಬ್ಯಾಕಪ್ ಬರುವ ಸ್ಮಾರ್ಟ್‌ಫೋನ್ ಇದಾಗಿದೆ ಎಂದು ಮೈಕ್ರೊಮ್ಯಾಕ್ಸ್ ಹೇಳಿಕೊಂಡಿದೆ.!!

ಓದಿರಿ:ಮೊದಲಬಾರಿ ಇಸ್ರೋ-ನಾಸಾ ನಿರ್ಮಿಸುತ್ತಿರುವ ಉಪಗ್ರಹದ ವಿಶೇಷತೆಗಳು ಹಲವು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Micromax Evok Note features a 5.5-inch full HD display and is backed by a large 4,000 mAh battery unit. It is exclusively available on Flipkart at a price of Rs. 9,499. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot