5 ಇಂಚ್ ಸ್ಕ್ರೀನ್ ಫೋನ್: 9,990 ರೂಪಾಯಿಗೆ

By Varun
|
5 ಇಂಚ್ ಸ್ಕ್ರೀನ್ ಫೋನ್: 9,990 ರೂಪಾಯಿಗೆ

ಮೈಕ್ರೋಮ್ಯಾಕ್ಸ್ ಕಂಪನಿ ಕೊನೆಗೂ ಇವತ್ತು 5 ಇಂಚ್ ಡಿಸ್ಪ್ಲೇ ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ 9900 ರೂಪಾಯಿಗೆ ಬಿಡುಗಡೆ ಮಾಡಿದೆ.

ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ A100 ಹೆಸರಿನ ಈ ಸ್ಮಾರ್ಟ್ ಫೋನ್ ಅನ್ನು ಇತರೆ ಎರಡು ಫೋನುಗಳ ಜೊತೆ ಬಿಡುಗಡೆ ಮಾಡಲಾಗಿದ್ದು, ಇತ್ತೀಚೆಗೆ ಬಂದಿರುವ ಸ್ಮಾರ್ಟ್ ಫೋನುಗಳಲ್ಲೇ ಅಗ್ಗವಾದ ಫೋನ್ ಆಗಿದೆ.

ದೊಡ್ಡ ಸ್ಕ್ರೀನ್ ಅಷ್ಟೇ ಅಲ್ಲದೆ ದ್ವಿಸಿಮ್ ಹಾಗು ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ ಹೊಂದಿರುವ ಈ ಸ್ಮಾರ್ಟ್ ಫೋನಿನ ಫೀಚರುಗಳು ಈ ರೀತಿ ಇವೆ;

 • 5 ಇಂಚ್ ಟಚ್ ಸ್ಕ್ರೀನ್

 • 480x854 ಪಿಕ್ಸೆಲ್ ರೆಸಲ್ಯೂಶನ್

 • ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ

 • ದ್ವಿಸಿಮ್

 • 512MB ರಾಮ್

 • 1 GHz ಡ್ಯುಯಲ್ ಕೋರ್ ಪ್ರೋಸೆಸರ್

 • 5 ಮೆಗಾಪಿಕ್ಸೆಲ್ ಕ್ಯಾಮರಾ, LED ಫ್ಲಾಶ್ ನೊಂದಿಗೆ

 • 0.3 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ

 • 4GB ಆಂತರಿಕ ಮೆಮೊರಿ

 • 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

 • 5 ಗಂಟೆ ಟಾಕ್ ಟೈಮ್ ಹಾಗು 180 ಗಂಟೆ ಸ್ಟಾಂಡ್ ಬೈ ಇರುವ 2000 mAh ಬ್ಯಾಟರಿ

ಈ ಫೋನ್ ಅನ್ನು ನೀವು ಮೈಕ್ರೋಮ್ಯಾಕ್ಸ್ ಆನ್ಲೈನ್ ಮಳಿಗೆಯಲ್ಲಿ ಖರೀದಿಸಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X