ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

Posted By: Staff

ಭಾರತದ ಮೂಲದ ಮೈಕ್ರೋಮ್ಯಾಕ್ಸ್ ಸಂಸ್ಥೆ ಕಡಿಮೆ ದರದಲ್ಲಿ ಅತಿ ಹೆಚ್ಚು ಸೌಲಭ್ಯಗಳುಳ್ಳ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಪರಿಚಯಿಸುವ ಮೂಲಕ ಬಹುಬೇಗ ಜನಪ್ರಿಯತೆ ಗಳಿಸಿದ ಸಂಸ್ಥೆ. ಭಾರತದ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸುತ್ತಾ ಕಿಸೆಗೆ ಹೆಚ್ಚು ಕತ್ತರಿ ಬೀಳದಂತೆ ನೋಡಿಕೊಂಡ ಸಂಸ್ಥೆ ಈಗ ತನ್ನ ಹೊಸ ಮಾದರಿ ಉತ್ಪನ್ನಗಳೊಂದಿಗೆ ಮಾರುಕಟ್ಟೆಗೆ ಇಳಿದಿದೆ.

ಮೈಕ್ರೋಮ್ಯಾಕ್ಸ್ ನ ಜನಪ್ರಿಯ ಸ್ಮಾರ್ಟ್ ಫೋನ್ ನಿಂಜಾ ಸರಣಿಯ ಮೂರನೇ ಆವೃತ್ತಿ A57 ನಿಂಜಾ 3 ಮಾರುಕಟ್ಟೆ ಪ್ರವೇಶಿಸಿದೆ. ಡುಯಲ್ ಸಿಮ್ ನೊಂದಿಗೆ ಆಂಡ್ರಾಯ್ಡ್ ಪವರ್ ಹೊಂದಿರುವ ಈ ಮೊಬೈಲ್ ಗಳು ಜನಪ್ರಿಯತೆ ಗಳಿಸುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.

ಭಾರತದ ಎರಡನೇ ಅತಿ ಹೆಚ್ಚು ಮೊಬೈಲ್ ಮಾರಾಟ ಸಂಸ್ಥೆಯಾಗುವತ್ತ ದಾಪುಗಾಲು ಇರಿಸಿರುವ ಮೈಕ್ರೋಮ್ಯಾಕ್ಸ್ ನ ಹೊಸ ಉತ್ಪನ್ನ ನಿಂಜಾ ಹೇಗಿದೆ ನೋಡೋಣ...

ವಿಶೇಷತೆಗಳು: 116 X 62X11.5 mm ಸುತ್ತಳತೆ ಹೊಂದಿರುವ A57 ನಿಂಜಾ ಸ್ಫೋರ್ಟ್3.5 ಮಲ್ಟಿ ಟಚ್ ದರ್ಶಕವನ್ನು ಹೊಂದಿದೆ. 320 ‍ X 480 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. 1Ghz Qualcomm ಪ್ರೊಸೆಸರ್ ಹೊಂದಿದ್ದು ತ್ವರಿತವಾಗಿ ವಿವಿಧ ಕಾರ್ಯಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ. ಅತ್ಯುನ್ನತ ಗ್ರಾಫಿಕ್ಸ್ ಗೆ ಹೊಂದಿಕೊಳ್ಳಬಹುದಾದ ನಿಂಜಾ ಎಲ್ಲರ ಗಮನಸೆಳೆಯಬಲ್ಲುದಾಗಿದೆ.

ನಿಂಜಾ 3, ಅಂಡ್ರಾಯ್ಡ್ 2.35 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. 3MP ಮುಂಬದಿ ಕ್ಯಾಮರಾ ಹಾಗೂ 256 MB RAM, 32GB ತನಕ ವಿಸ್ತಾರಗೊಳ್ಳಬಹುದಾದ ಮೈಕ್ರೋ SD ಕಾರ್ಡ್ ಸೌಲಭ್ಯ ಹೊಂದಿದೆ. ಬ್ಲೂಟೂಥ್ 2.1, ವೈಫೈ 802.11 b/g/n ಹಾಗೂ USB 2.0 ಸಂಪರ್ಕ ಹೊಂದಿದೆ. 1,400 mAh ಲಿಥಿಯಂ ಅಯಾನ್ ಬ್ಯಾಟರಿ ಹೊಂದಿದ್ದು 8.5 ಗಂಟೆಗಳ ಟಾಕ್ ಟೈಮ್ ಹೊಂದಿದ್ದು, 177 ಗಂಟೆಗಳ ಸ್ಟ್ಯಾಂಡ್ ಬೈ ಹೊಂದಿದೆ.

ಇದಲ್ಲದೆ MiZone, MiSMS, MiStore, Gravity Sensor, Hook Up ಅಪ್ಲಿಕೇಷನ್ ಗಳನ್ನು ಹೊಂದಿದೆ. ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಸಂಪರ್ಕ ಸುಲಭವಾಗಿ ಪಡೆಯಬಹುದಾಗಿದೆ. ಎಫ್ ಎಂ ರೇಡಿಯೋ ಕೂಡಾ ಇದ್ದು, ಸುಶ್ರಾವ್ಯ ಸಂಗೀತ ಕೇಳಬಹುದಾಗಿದೆ.

ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಎರಡು ಬಣ್ಣಗಳಲ್ಲಿ ನಿಂಜಾ 3 ಲಭ್ಯವಿದೆ. ಬ್ಯಾಕ್ ಪಾನೆಲ್ ಗಳನ್ನು ಉಚಿತವಾಗಿ ಗ್ರಾಹಕರಿಗೆ ನೀಡಲು ಮೈಕ್ರೋಮ್ಯಾಕ್ಸ್ ಮುಂದಾಗಿದೆ.

ಬೆಲೆ ಎಷ್ಟು?: ಇಷ್ಟೆಲ್ಲ ಸೌಲಭ್ಯಗಳಿದ್ದರೂ ಮೈಕ್ರೋಮ್ಯಾಕ್ಸ್ ಹ್ಯಾಂಡ್ ಸೆಟ್ ಬೆಲೆಯನ್ನು ಏರಿಸಿಲ್ಲ. ಮೈಕ್ರೋಮ್ಯಾಕ್ಸ್ A57 ನಿಂಜಾ 3 ಸೆ.2, 2012 ರಿಂದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬೆಲೆ 4,999 ರು ಅಷ್ಟೇ.

ನಿಂಜಾ ಸರಣಿಯ ಮೈಕ್ರೋಮ್ಯಾಕ್ಸ್ ಸ್ಮಾರ್ಟ್ ಫೋನ್ A57 ನಿಂಜಾ 3 ಸ್ಮಾರ್ಟ್ ಫೋನ್ ಚಿತ್ರಗಳು ಕೆಳಗಿದೆ ನೋಡಿ...

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

Micromax-Ninja-3

Micromax-Ninja-3
ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

Micromax-Ninja-3

Micromax-Ninja-3
ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

Micromax-Ninja-3

Micromax-Ninja-3
ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

Micromax-Ninja-3

Micromax-Ninja-3
ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

Micromax-Ninja-3

Micromax-Ninja-3
ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

Micromax-Ninja-3

Micromax-Ninja-3
ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

Micromax-Ninja-3

Micromax-Ninja-3
ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

Micromax-Ninja-3

Micromax-Ninja-3
ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

Micromax-Ninja-3

Micromax-Ninja-3
ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

ಮೈಕ್ರೋಮ್ಯಾಕ್ಸ್ ನಿಂಜಾ ಹೆಂಗೈತ್ಲಾ ಮಂಜಾ?

Micromax-Ninja-3

Micromax-Ninja-3
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting