ಕನ್ನಡ ಭಾಷೆಯ ಸುಗಂಧವಿರುವ ಒಂಭತ್ತು ಭಾಷೆಗಳ ಒಂದು ಹಾಡು

Written By:

ಭಾರತ ಸರ್ವಧರ್ಮೀಯರ ನೆಲೆವೀಡಾಗಿದೆ. ಹಲವು ಭಾಷೆಗಳನ್ನು ಮಾತನಾಡುವ ಹಲವು ಸಂಸ್ಕೃತಿಯನ್ನು ಅನುಸರಿಸುವ ಸರ್ವಧರ್ಮಗಳ ನೆಲೆವೀಡು ಭಾರತದ ದೇಶವಾಗಿದೆ. ಇಲ್ಲಿನ ನೆಲೆ, ಜಲ ಭಾಷೆ, ಆಚಾರ, ಸಂಪ್ರದಾಯ ವಿಶ್ವದಗಲಕ್ಕೂ ಕೀರ್ತಿಯನ್ನು ಪಡೆದಿರುವುದು ನಮ್ಮ ದೇಶದ ಐಕ್ಯತೆಯಿಂದಾಗಿದೆ. ಭಾಷೆಗಳ ಮೂಲಕ ದೇಶಾಭಿಮಾನವನ್ನು ಮೆರೆಯುವ ನಮ್ಮ ದೇಶದ ಹಿರಿಮೆಗೆ ಯಾವುದೂ ಸಮನಾಗಲಿಕ್ಕಿಲ್ಲ.

ಹಾಗಿದ್ದರೆ ರಾಷ್ಟ್ರಪ್ರೇಮವನ್ನು ಮತ್ತೊಮ್ಮೆ ಬಡಿದೆಬ್ಬಿಸುವ ಕಾರ್ಯವನ್ನು ಮೈಕ್ರೋಮ್ಯಾಕ್ಸ್ ಭಾರತದಲ್ಲಿರುವ ಭಾಷೆಗಳ ಮೂಲಕ ಮಾಡುತ್ತಿದೆ. ಹೌದು ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯನ್ನು ರಂಗೇರಿಸುವ ಭರದಲ್ಲಿ ತೊಡಗಿರುವ ಮೈಕ್ರೋಮ್ಯಾಕ್ಸ್ "ರೂಬಾರೂ ಮೈಕ್ರೋಮ್ಯಾಕ್ಸ್ ಯುನೈಟ್ ಆಂಥೆಮ್" ಎಂಬ ಆಲ್ಬಮ್ ಗೀತೆಯನ್ನು ಈ ಸ್ವಾತಂತ್ರ್ಯ ದಿನಕ್ಕಾಗಿ ಬಿಡುಗಡೆ ಮಾಡುತ್ತಿದೆ.

ಮೈಕ್ರೋಮ್ಯಾಕ್ಸ್‌ನಿಂದ ಸ್ವಾತಂತ್ರ್ಯ ದಿನಕ್ಕಾಗಿ ಅಮೋಘ ಕೊಡುಗೆ

ಈ ಆಲ್ಬಮ್‌ನಲ್ಲಿರುವ ವಿಶೇಷತೆಯೆಂದರೆ ಇದರಲ್ಲಿ ಒಂಭತ್ತು ಭಾಷೆಗಳಿದ್ದು ಇದನ್ನು ಹತ್ತು ಹಾಡುಗಾರರು ಹಾಡಿದ್ದಾರೆ. ಮೈಕ್ರೋಮ್ಯಾಕ್ಸ್ ತನ್ನ ಯುನೈಟ್ ಸ್ಮಾರ್ಟ್‌ಫೋನ್‌ನಲ್ಲಿ ಇಪ್ಪತ್ತೊಂದು ಭಾಷೆಗಳನ್ನು ಬೆಂಬಲಿಸುವ ಅಮೋಘ ಕೊಡುಗೆಯನ್ನು ನೀಡಿತ್ತು. ಇದೇ ತಂತ್ರಜ್ಞಾನವನ್ನು ಅನುಸರಿಸಿಕೊಂಡು ಈ ಆಲ್ಬಮ್‌ನ ಚಿತ್ರಿಕೆಯನ್ನು ಮೈಕ್ರೋಮ್ಯಾಕ್ಸ್ ಮೂಡಿಸಿದೆ.

ಮೈಕ್ರೋಮ್ಯಾಕ್ಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಶುಭೋದಿಪ್ ಪಾಲ್ ಮಾತನಾಡುತ್ತಾ, ಮೈಕ್ರೋಮ್ಯಾಕ್ಸ್ ಯುನೈಟ್ 2 ನ ಯಶಸ್ವಿ ಸ್ಥಾಪನೆಯೊಂದಿಗೆ ನಾವು ನಮ್ಮ ಗ್ರಾಹಕರೊಂದಿಗೆ ಉತ್ತಮ ಸಂವಾದವನ್ನು ಇರಿಸುವ ಕಾರ್ಯವನ್ನು ಮಾಡಿದ್ದೇವೆ. ಈ ಆಲ್ಬಮ್‌ನಲ್ಲಿ ಹಾಡಿರುವ ಹತ್ತು ಕಲಾವಿದರನ್ನು ಗೌರವದೊಂದಿಗೆ ಸ್ಮರಿಸುತ್ತಿದ್ದು ಈ ಆಲ್ಬಮ್ ಅನ್ನು ಹೊರತರುವಲ್ಲಿ ಈ ಹಾಡುಗಾರರ ಶ್ರಮ ಅಪರಿಮಿತವಾಗಿದೆ ಎಂದವರು ಸ್ಮರಿಸಿಕೊಂಡಿದ್ದಾರೆ. ಬೆನ್ನಿ ದಯಾಲ್, ರಘು ದೀಕ್ಷಿತ್, ನೀತಿ ಮೋಹನ್, ಬ್ರೋಧಾ ವಿ, ವಕ್ಟೋರ್ನಿಕಾ, ಸನಮ್ ಪೂರಿ, ಸ್ವರೂಪ್ ಖಾನ್, ಕಮಲ್ ಖಾನ್, ಅಪೇಕ್ಷಾ ದಂಡೇಕರ್ ಮತ್ತು ಶ್ರುತಿ ಪಾಠಕ್ ಆಲ್ಬಮ್‌ನಲ್ಲಿ ಹಾಡಿರುವ ಹಾಡುಗಾರರಾಗಿದ್ದಾರೆ.

ಮುಖ್ಯವಾಗಿ ಭಾಷೆಯನ್ನು ಕೇಂದ್ರೀಕರಿಸಿ ಇಲ್ಲಿ ಹಾಡನ್ನು ರಚಿಸಲಾಗಿದ್ದು ಹಾಡಿಗೆ ಸಂಗೀತ ಸಂಯೋಜನೆಯನ್ನು ಎ. ಆರ್. ರೆಹಮಾನ್ ಅವರು ನೀಡಿದ್ದಾರೆ. ಕನ್ನಡ ಭಾಷೆಯ ಪದ ಕೂಡ ಈ ಹಾಡಿನಲ್ಲಿ ಬರುತ್ತಿದ್ದು ಇದನ್ನು ರಘು ದೀಕ್ಷಿತ್ ಹಾಡಿದ್ದಾರೆ. ಅಂತೂ ಸ್ವಾತಂತ್ರ್ಯ ದಿನಾಚರಣೆಯ ಮಹೋನ್ನತ ದಿನದಂದು ಮೂಡಿಬರುತ್ತಿರುವ ಈ ಆಲ್ಬಮ್ ದೇಶದ ಯುವಜನರಲ್ಲಿ ದೇಶಾಭಿಮಾನವನ್ನು ಉಕ್ಕಿಸುವುದಂತೂ ಖಂಡಿತ.

ಈ ಹಾಡು ಯೂಟ್ಯೂಬ್‌ನಲ್ಲಿ ಮೂಡಿಬರುತ್ತಿದ್ದು ಇದನ್ನು ನೀವು ಇಲ್ಲಿ ಆಸ್ವಾದಿಸಬಹುದಾಗಿದೆ.

<center><iframe width="100%" height="360" src="//www.youtube.com/embed/B8OuzCvSDNk?feature=player_detailpage" frameborder="0" allowfullscreen></iframe></center>

Read more about:
English summary
This article tells about Micromax ‘Roobaroo Micromax Unite Anthem’ - One song 9 languages 10 artists song on Independence day.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot