Subscribe to Gizbot

ಮೈಕ್ರೋಮ್ಯಾಕ್ಸ್ ಯುನೈಟ್ 2 ಕುರಿತ ಆಕರ್ಷಕ ವಿಮರ್ಶೆ

Posted By:

ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಈಗ ಅತ್ಯಂತ ಬಲಶಾಲಿಯಾಗಿ ಆಳುತ್ತಿರುವ ಕಂಪೆನಿಗಳೆಂದರೆ ಆಪಲ್ ಮತ್ತು ಸ್ಯಾಮ್‌ಸಂಗ್ ಎಂಬ ಮಾತೊಂದಿತ್ತು. ಆದರೆ ಬರಬರುತ್ತಾ ಲಾವಾ ಮತ್ತು ಕಾರ್ಬನ್ ಕಂಪೆನಿಗಳೂ ಕೂಡ ಮಾರುಕಟ್ಟೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನದಲ್ಲಿ ಈಗ ಯಶಸ್ವಿಯಾಗುತ್ತಿದೆ.

ಇದೆಲ್ಲಾ ಪರಿಣಾಮಗಳು ಒಂದು ಡೊಮೆಸ್ಟಿಕ್ ಫೋನ್ ತಯಾರಿಕಾ ಕಂಪೆನಿಗೆ ಹೆಚ್ಚಿನ ಬೆಂಬಲವನ್ನು ಒದಗಿಸಿದ್ದು ತನ್ನ ಮಹತ್ವವನ್ನು ಸಾರಲು ಕಾರಣವಾಯಿತು. ಈ ಕಂಪೆನಿಯ ಫೋನ್‌ಗಳು ಈಗ ಬಿಸಿ ದೋಸೆಯಂತೆ ಮಾರಾಟವಾಗುತ್ತಿದ್ದು ಗ್ರಾಹಕರು ಇದರ ಸಾಧನೆಗೆ ಶ್ಲಾಘನೆಯನ್ನು ನೀಡಿದ್ದಾರೆ. ಅದು ಬೇರಾವುದೇ ಕಂಪೆನಿಯಲ್ಲ ಭಾರತೀಯ ಮೂಲದ ಕಂಪೆನಿಯಾಗಿರುವ ಮೈಕ್ರೋಮ್ಯಾಕ್ಸ್ ಆಗಿದೆ.

560 ಜಿಲ್ಲೆಗಳಲ್ಲಿ 125,000 ರಿಟೇಲ್ ಅಂಗಡಿಗಳನ್ನು ಹೊಂದಿರುವ ಮೈಕ್ರೋಮ್ಯಾಕ್ಸ್ ಬೇರೆಲ್ಲಾ ಕಂಪೆನಿಗಳಿಗಿಂತ ಅತ್ಯುತ್ತಮ ದರ್ಜೆಯನ್ನು ತನ್ನ ಬಗಲಿಗೆ ಹಾಕಿಕೊಂಡಿದೆ. ಇಂದಿನ ಲೇಖನದಲ್ಲಿ ಕಂಪೆನಿಯ ಮೈಕ್ರೋಮ್ಯಾಕ್ಸ್ ಯುನೈಟ್ 2 ಕುರಿತ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ಗ್ರಾಹಕರಿಗೆ ಮಧ್ಯಮ ದರ್ಜೆಯ ದರದಲ್ಲಿ ಈ ಫೋನ್ ಅನ್ನು ದೊರಕುವಂತೆ ಮಾಡಿರುವ ಕಂಪೆನಿ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿಯನ್ನು ಫೋನ್‌ನಲ್ಲಿ ಬಿಡುಗಡೆಗೊಳಿಸಿ ಕಿಟ್‌ಕ್ಯಾಟ್ ಸುವಾಸನೆಯನ್ನು ಪ್ರಬಲವಾಗಿ ಹರಡಿದೆ.

ಈ ಫೋನ್ ಕುರಿತ ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್ ಯುನೈಟ್ 2

#1

ವಿನ್ಯಾಸ ಅಂಶ
ಡಿವೈಸ್‌ನ ಅತಿ ಕಡಿಮೆ ದರವನ್ನು ನೋಡುವಾಗ, ಕಂಪೆನಿ ಈ ಅತ್ಯಾಕರ್ಷಕ ಡಿವೈಸ್‌ನಲ್ಲಿ ಮನಮೋಹಕ ಫೋನ್ ಅನ್ನು ಹೊರತಂದಿದೆ ಎಂದೇ ಹೇಳಬಹುದು. ಇದರ ವೃತ್ತಾಕಾರದ ಮೂಲೆಗಳು ಮತ್ತು ರಬ್ಬರ್‌ನಿಂದ ಆವೃತವಾಗಿರುವ ಹಿಂದಿನ ಕವರ್ ಅತ್ಯಾಕರ್ಷಕವಾಗಿದೆ.

ಮೈಕ್ರೋಮ್ಯಾಕ್ಸ್ ಯುನೈಟ್ 2

#2

ಪರದೆ
ಮೈಕ್ರೋಮ್ಯಾಕ್ಸ್ ಯುನೈಟ್ 2 A106 ಸೂಕ್ತವಾದ 4.7 ಇಂಚಿನ ಪರದೆಯನ್ನು ಹೊಂದಿದೆ. ತುಂಬಾ ದೊಡ್ಡದೂ ಅಲ್ಲದ ಚಿಕ್ಕದೂ ಅಲ್ಲದ ಡಿಸ್‌ಪ್ಲೇಯನ್ನು ಹೊಂದಿರುವ ಇದು ಮಧ್ಯಮ ಗಾತ್ರದಲ್ಲಿದ್ದು ಬಳಕೆದಾರರಿಗೆ ಸೂಕ್ತವಾಗಿದೆ. ಇದುವೇ ಈ ಡಿವೈಸ್‌ನ ಶಕ್ತಿ ಎಂದು ಕೂಡ ಹೇಳಬಹುದಾಗಿದೆ.

ಮೈಕ್ರೋಮ್ಯಾಕ್ಸ್ ಯುನೈಟ್ 2

#3

ಕ್ಯಾಮೆರಾ
ಕಂಪೆನಿಯು ಡಿವೈಸ್‌ಗೆ ಒದಗಿಸಿರುವ ಬೆಲೆಯನ್ನು ನೋಡಿದಾಗ ಹೆಚ್ಚಿನ ಮಟ್ಟದ ಕ್ಯಾಮೆರಾವನ್ನು ನಾವು ಇದರಿಂದ ನಿರೀಕ್ಷಿಸುವಂತಿಲ್ಲ. ಆದರೂ ಮೈಕ್ರೋಮ್ಯಾಕ್ಸ್ ಡಿವೈಸ್‌ನಲ್ಲಿ ಸಾಮಾನ್ಯ ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸುವಲ್ಲಿ ಯಶಸ್ಸನ್ನು ಗಳಿಸಿದೆ.

ಮೈಕ್ರೋಮ್ಯಾಕ್ಸ್ ಯುನೈಟ್ 2

#4

ಇತರ ಪ್ರಮುಖ ವೈಶಿಷ್ಟ್ಯಗಳು
ಇದು 21 ಭಾಷೆಗಳನ್ನು ಬೆಂಬಲಿಸುತ್ತಿದ್ದು 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, ಡ್ಯುಯೆಲ್ ಸಿಮ್ ಬೆಂಬಲ, 32ಜಿಬಿವರೆಗೆ ವಿಸ್ತರಿಸಬಹುದಾದ ಸಂಗ್ರಹಣಾ ಸಾಮರ್ಥ್ಯದೊಂದಿಗೆ ವಿಶೇಷವಾಗಿದೆ ಮತ್ತು ಇದರಲ್ಲಿ ಇನ್ನೊಂದು ಆಕರ್ಷಕ ಅಂಶವೆಂದರೆ ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.2.2. ಇದರಲ್ಲಿ ಚಾಲನೆಯಾಗುತ್ತಿದೆ ಎಂದಾಗಿದೆ.

ಮೈಕ್ರೋಮ್ಯಾಕ್ಸ್ ಯುನೈಟ್ 2

#5

ಬೆಲೆ
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಮೈಕ್ರೋಮ್ಯಾಕ್ಸ್ ಯುನೈಟ್ 2 ಗೆ ಉತ್ತಮ ದರವಾದ ರೂ 7,649 ಅನ್ನು ನಿರ್ಧರಿಸಿದೆ. ಮೋಟೋ ಇ ಇದಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದೆ ಆದರೆ ಮೋಟೋ ಇ ಅನ್ನು 7 ಕೆ ಕೊಟ್ಟು ಖರೀದಿಸುವಾಗ ಇನ್ನೊಂದು 500 ಅನ್ನು ಸೇರಿಸಿದರೆ ಈ ಹ್ಯಾಂಡ್‌ಸೆಟ್ ನಿಮ್ಮ ಕೈ ಸೇರುತ್ತದೆ.

#6

ಮೈಕ್ರೋಮ್ಯಾಕ್ಸ್ ಯುನೈಟ್ 2 ಕುರಿತ ಇನ್ನಷ್ಟು ಸಂಪೂರ್ಣ ಮಾಹಿತಿಗಳನ್ನು ಇಲ್ಲಿ ನಾವು ನೀಡಿರುವ ವೀಡಿಯೋದ ಮೂಲಕ ವೀಕ್ಷಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells that Micromax unite 2 smartphone review and specifications and its cool feature.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot