Home
ಮೊಬೈಲ್

ಮೈಕ್ರೋಮ್ಯಾಕ್ಸ್ ಯುನೈಟ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ ಆಕರ್ಷಕ ಕೊಡುಗೆ

By Shwetha

ಕೆಲವೊಂದು ಬಜೆಟ್ ಫೋನ್‌ಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಪ್ರಸ್ತುತ ಮಾರುಕಟ್ಟೆಯನ್ನು ಆಳುತ್ತಿರುವ ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌ಫೋನ್ ಕ್ಷೇತ್ರವನ್ನು ತನ್ನ ಕೈಯಲ್ಲಿರಿಸಿಕೊಂಡಿದೆ.

ಈಗ ತನ್ನ ಯುನೈಟ್ A092 ವನ್ನು ಫ್ಲಿ‌ಪ್‌ಕಾರ್ಟ್‌ನಲ್ಲಿ ಈಗ ಮಾರಾಟಕ್ಕೆ ತೊಡಗಿಸಿರುವ ಕಂಪೆನಿ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಮತ್ತು ಫೋನ್ ಕ್ಷೇತ್ರದಲ್ಲಿ ತನ್ನ ಹೆಸರನ್ನು ಶಾಶ್ವತವಾಗಿಸಿಕೊಳ್ಳುವ ನಿಟ್ಟಿನಲ್ಲಿದೆ. ಈ ತಿಂಗಳ ಹಿಂದೆಯೇ ತನ್ನ ಬಳಕೆದಾರರಿಗೆ ತನ್ನ ಯುನೈಟ್ A092 ಬಗ್ಗೆ ಮಾಹಿತಿಯನ್ನು ನೀಡಿದ್ದ ಕಂಪೆನಿ ಅಧಿಕೃತವಾಗಿ ತನ್ನಡಿವೈಸ್ ಅನ್ನು ಪರಿಚಯ ಪಡಿಸುವ ಕಾರ್ಯವನ್ನು ಸ್ವಲ್ಪ ಕಾಲ ಮುಂದೂಡಿತ್ತು.

ಫ್ಲಿಪ್‌ಕಾರ್ಟ್‌ನಲ್ಲಿ ಮೈಕ್ರೋಮ್ಯಾಕ್ಸ್ ಯುನೈಟ್ ರೂ. 6,490ಕ್ಕೆ!

ಮೈಕ್ರೋಮ್ಯಾಕ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿದ್ದ ಯುನೈಟ್ A092, ಇದೀಗ ಅಧಿಕೃತ ಬೆಲೆಯೊಂದಿಗೆ ದೇಶದಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ಫ್ಲಿಫ್‌ಕಾರ್ಟ್ ಮೂಲಕ ಪ್ರಸ್ತುತ ಲಭ್ಯವಾಗುತ್ತಿರುವ ಈ ಫೋನ್, ಕೆಲವೇ ಸಮಯಗಳಲ್ಲಿ ಇತರ ಆನ್‌ಲೈನ್ ರೀಟೈಲರ್ ಅನ್ನು ತಲುಪುವ ನಿಟ್ಟಿನಲ್ಲಿದೆ.

ಡಿವೈಸ್‌ನ ಮಹತ್ವಪೂರ್ಣ ಅಂಶಗಳತ್ತ ನೋಟ ಹರಿಸುವುದಾದರೆ ಇದು 4 ಇಂಚಿನ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ರೆಸಲ್ಯೂಶನ್ 800x480 ಪಿಕ್ಸೆಲ್‌ ಇದಕ್ಕಿದೆ. ಇದು 5 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು ವಿಜಿಎ ಗುಣಮಟ್ಟದ ಫ್ರಂಟ್ ಶೂಟರ್ ವೈಶಿಷ್ಟ್ಯವನ್ನು ಹೊಂದಿದೆ.

ಮೈಕ್ರೋ ಎಸ್‌ಡಿ ಕಾರ್ಡ್ ಅನ್ನು ಹೊಂದಿದ್ದು ನಿಮಗಿದರ ಆಂತರಿಕ ಸಂಗ್ರಹಣೆಯನ್ನು 32 ಜಿಬಿಗಳಿಗೆ ವಿಸ್ತರಿಬಹುದಾಗಿದೆ. ಇದರ ಬ್ಯಾಟರಿ ಸಾಮರ್ಥ್ಯ 1,500mAh ಆಗಿದ್ದು ಇದು 1.2GHZ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್‌ 200 ಪ್ರೊಸೆಸರ್‌ನೊಂದಿಗೆ ಆಕರ್ಷಕವಾಗಿದೆ. ಇದರ RAM ಸಾಮರ್ಥ್ಯ 1ಜಿಬಿಯಾಗಿದ್ದು, 8ಜಿಬಿ ROM ಫೋನ್‌ಗಿದೆ. ಮೈಕ್ರೋಮ್ಯಾಕ್ಸ್ಯುನೈಟ್ A092 ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಆವೃತ್ತಿಯೊಂದಿಗೆ ಬಂದಿದೆ ಎಂಬುದು ಈ ಫೋನ್‌ಗಿರುವ ಹೆಗ್ಗಳಿಕೆಯಾಗಿದೆ.

ಇದರಲ್ಲಿನ ಸಂಪರ್ಕ ಅಂಶಗಳೆಂದರೆ ವೈ-ಫೈ, ಬ್ಲೂಟೂತ್, 3ಜಿ, ಡ್ಯುಯೆಲ್ ಸಿಮ್ ಮತ್ತು ಜಿಪಿಎಸ್ ಆಗಿದ್ದು ಇತರ ಸ್ಮಾರ್ಟ್ ಆಪ್ಶನ್‌ಗಳು ಇದರಲ್ಲಿ ಲಭ್ಯವಿದೆ. ಮಾರುಕಟ್ಟೆಯಲ್ಲಿರುವ ಇಂಟೆಕ್ಸ್ ಆಕ್ವಾ ಐ5 ಮಿನಿ, ಸ್ಲೈಸ್ ಸ್ಟೆಲ್ಲರ್ 509 ಮೈಕ್ರೋಮ್ಯಾಕ್ಸ್ ಯುನೈಟ್ 2 ನಂತೆ ಬಳಕೆದಾರರ ಪ್ರೀತಿಗೆ ಅರ್ಹವಾಗಲಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+