ಮೈಕ್ರೋಮ್ಯಾಕ್ಸ್‌ನಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ

Written By:

ನೀವು ವೊಡಾಫೋನ್ ಸಿಮ್ ಅನ್ನು ಬಳಸುವವರಾಗಿದ್ದು ಮತ್ತು ಮೈಕ್ರೋಮ್ಯಾಕ್ಸ್‌ನ ಹೊಸ ಹ್ಯಾಂಡ್‌ಸೆಟ್ ಅನ್ನು ಖರೀದಿಸುವ ಬಯಕೆಯನ್ನು ಹೊಂದಿದ್ದಲ್ಲಿ ನಿಮಗೊಂದು ಸಂತರಸಕರ ಸುದ್ದಿ ಇದೆ. ಭಾರತದಲ್ಲಿ 2 ಜಿಬಿ ಉಚಿತ ಡೇಟಾದೊಂದಿಗೆ ಕ್ಯಾನ್‌ವಾಸ್ ನೈಟ್ ಅನ್ನು ಲಾಂಚ್ ಮಾಡುವ ನಿಟ್ಟಿನಲ್ಲಿ ಮೈಕ್ರೋಮ್ಯಾಕ್ಸ್ ವೊಡಾಫೋನ್‌ನೊಂದಿಗೆ ಸಂಯೊಜನೆಗೊಂಡಿದೆ.

ಅಕ್ಟೋಬರ್ 31 2014 ರ ಮೊದಲೇ ಕ್ಯಾನ್‌ವಾಸ್ ನೈಟ್‌ಗೆ ವೊಡಾಫೋನ್ ಸಿಮ್ ಅನ್ನು ಅಳವಡಿಸಿದ 48 ಗಂಟೆಗಳ ಒಳಗಾಗಿ ಈ ಪ್ಯಾಕ್ ಸಕ್ರಿಯಗೊಳ್ಳುತ್ತದೆ. ಆದರೆ ಇನ್ನೊಂದು ಸಂತಸಕರ ಸುದ್ದಿಯೆಂದರೆ ಕಂಪೆನಿಯು ಈ ಕೊಡುಗೆಯನ್ನು ತನ್ನೆಲ್ಲಾ ಮೈಕ್ರೋಮ್ಯಾಕ್ಸ್ ಸೆಟ್‌ಗಳಿಗೆ ಕೂಡಲೇ ಅಳವಡಿಸುತ್ತಿದೆ ಎಂಬುದಾಗಿದೆ.

ಕ್ಯಾನ್‌ವಾಸ್‌ ನೈಟ್‌ನಲ್ಲಿ 2 ಜಿಬಿ ಉಚಿತ

ಮೈಕ್ರೋಮ್ಯಾಕ್ಸ್‌ನಲ್ಲೇ ಗ್ರಾಹಕರ ಬೇಡಿಕೆ ಮತ್ತು ಅವರ ತೃಪ್ತಿಗನುಸಾರವಾಗಿ ತಾವು ಮೊಬೈಲ್ ಅನ್ನು ವಿನ್ಯಾಸಗೊಳಿಸುತ್ತಿದ್ದು ಅದರಲ್ಲಿರುವ ವೈಶಿಷ್ಟ್ಯಗಳೂ ಕೂಡ ಹೆಚ್ಚಿನ ಜನರನ್ನು ತಲುಪಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ಮೈಕ್ರೋಮ್ಯಾಕ್ಸ್ ಸಿಎಮ್‌ಒ, ಶುಭೋದಿಪ್ ತಿಳಿಸಿದ್ದಾರೆ.

ಡೊಮೇನ್ ಪಯೋನಿಯರ್ ಎಂದೇ ಖ್ಯಾತಿವೆತ್ತಿರುವ ವೊಡಾಫೋನ್ ಸಹಾಯವನ್ನು ನಾವು ಪಡೆದುಕೊಂಡಿದ್ದು ನಮ್ಮ ಗ್ರಾಹಕರಿಗೆ ಅತ್ಯುನ್ನತವಾಗಿರುವ ಕೊಡುಗೆಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ವೋಡಾಫೋನ್ ನೆಟ್‌ವರ್ಕ್‌ನಲ್ಲಿ ಕ್ಯಾನ್‌ವಾಸ್ ನೈಟ್ ಫೋನ್ ಅನ್ನು ಬಳಸುವುದು ಗ್ರಾಹಕರಿಗೆ ವಿಶಿಷ್ಟ ಅನುಭವವನ್ನು ನೀಡುವುದು ಖಂಡಿತ.

Read more about:
English summary
This article tells that Micromax and vodafone teams up to offer free 2gb data.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot