ಮೈಕ್ರೋಮ್ಯಾಕ್ಸ್ ವಿಂಡೋಸ್ ಫೋನ್ 8.1 ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು
ಮೈಕ್ರೋಮ್ಯಾಕ್ಸ್ ತನ್ನ ಸುಪರ್ದಿಯಲ್ಲಿ ಹಲವಾರು ಫೋನ್‌ಗಳನ್ನು ಬಿಡುಗಡೆ ಮಾಡಿ ತನ್ನದೇ ಆದ ಹೆಸರನ್ನು ಗಳಿಸಿಕೊಂಡಿದೆ. ಆದರೆ ಆಶ್ಚರ್ಯವೆಂಬಂತೆ ಕಂಪೆನಿಯು ತನ್ನ ಕ್ಯಾನ್‌ವಾಸ್ ನೈಟ್ A350, ಪ್ರೀಮಿಯಂ ಫೋನ್ ಅನ್ನು ಮಾರಾಟ ಮಾಡುವಲ್ಲಿ ವಿಫಲಗೊಂಡಿದೆ.
ಆದರೆ ಈ ಸೋಲನ್ನು ಸವಾಲಾಗಿ ಸ್ವೀಕರಿಸಿರುವ ಮೈಕ್ರೋಮ್ಯಾಕ್ಸ್ ಇನ್ನಷ್ಟು ಪ್ರೀಮಿಯಂ ಫೋನ್‌ಗಳನ್ನು ಬಿಡುಗಡೆ ಮಾಡುವ ಹುಮ್ಮಸ್ಸಿನಲ್ಲಿದೆ. ಇದುವೇ ಹುಮ್ಮಸ್ಸು ವಿಂಡೋಸ್ ಫೋನ್ 8.1 ಚಾಲನೆಯಿರುವ ಸ್ಮಾರ್ಟ್‌ಫೋನ್‌ಗೆ ವೇದಿಕೆ ಹಾಸಿದೆ.

ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಕಾನ್ಫರೆನ್ಸ್‌ನಲ್ಲಿ, ಮೈಕ್ರೋಸಾಫ್ಟ್ ಕಂಪೆನಿ ಭಾರತೀಯ-ಆಧಾರಿತ ಡೊಮೆಸ್ಟಿಕ್ ವೆಂಡೋರ್ ಆಗಿ ಮೈಕ್ರೋಮ್ಯಾಕ್ಸ್ ಅನ್ನು ಪಾಲುದಾರನನ್ನಾಗಿ ಮಾಡಿಕೊಂಡಿದೆ. ಸುದ್ದಿಗಳ ಪ್ರಕಾರ ಇನ್ನು ನಿಮಗೆ ಸದ್ಯದಲ್ಲೇ ವಿಂಡೋಸ್ ಅವತರಣಿಕೆಯ ಮೈಕ್ರೋಮ್ಯಾಕ್ಸ್ ಫೋನ್‌ಗಳು ಸದ್ಯದಲ್ಲೇ ಲಭ್ಯವಾಗಲಿದ್ದು ಇದರ ಬೆಲೆ ರೂ. 23,000 ದಿಂದ 25,000 ದ ಅಂದಾಜಿನಲ್ಲಿದೆ.
ಮೈಕ್ರೋಮ್ಯಾಕ್ಸ್‌ನ ಮೊದಲ ವಿಂಡೋಸ್ ಫೋನ್ 5-ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ, ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್, 2ಜಿಬಿ ರ್‌ಯಾಮ್, 16ಜಿಬಿ ಆಂತರಿಕ ಮೆಮೊರಿ, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್, 13-ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಮತ್ತು 5-ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದೆ.
ಮೈಕ್ರೋಮ್ಯಾಕ್ಸ್‌ನ ಈ ಪ್ರಯತ್ನಕ್ಕೆ ಬಳಕೆದಾರರ ಪ್ರತಿಕ್ರಿಯೆ ಹೇಗಿರುತ್ತದೆಂಬುದು ಇನ್ನೂ ಖಾತ್ರಿಯಾಗಿಲ್ಲ. ಆದ್ದರಿಂದ ಮೈಕ್ರೋಮ್ಯಾಕ್ಸ್ ವಿಂಡೋಸ್ ಪೋನ್ ಅನ್ನು ಬಿಡುಗಡೆ ಮಾಡುವುದಕ್ಕೂ ಮೊದಲು ಗ್ರಾಹಕರ ಸಮೀಕ್ಷೆಯನ್ನು ನಿರ್ವಹಿಸುವುದು ಅಗತ್ಯವಾಗಿದೆ.


Click it and Unblock the Notifications








